×
Ad

ಫೈನಲ್‌ನಲ್ಲಿ ಸಿಂಧುಗೆ ಥಾಯ್ ಝು ಯಿಂಗ್ ಸವಾಲು

Update: 2017-11-25 23:47 IST

ಹಾಂಕಾಂಗ್, ನ.25: ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಸೂಪರ್‌ಸಿರೀಸ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಿ.ವಿ. ಸಿಂಧು ಶನಿವಾರ ಫೈನಲ್ ತಲುಪಿದ್ದಾರೆ.

ಸಿಂಧು ಅವರು ಸೆಮಿಫೈನಲ್‌ನಲ್ಲಿ ಥಾಯ್‌ಲ್ಯಾಂಡ್‌ನ ರಚನಾಕ್ ಇಂತನಾನ್ ವಿರುದ್ಧ 21-17, 21-17 ಅಂತರದಲ್ಲಿ ಜಯ ಗಳಿಸಿ ಫೈನಲ್ ತಲುಪಿದರು.

ಸಿಂಧು ಅವರು ಫೈನಲ್‌ನಲ್ಲಿ ಚೀನಾದ ಥಾಯ್ ಝು ಯಿಂಗ್ ಸವಾಲನ್ನು ಎದುರಿಸಲಿದ್ದಾರೆ.

ಸೆಮಿಫೈನಲ್‌ನಲ್ಲಿ ಸಿಂಧು ಅವರು ರಚನಾಕ್ ವಿರುದ್ಧ ಕಠಿಣ ಸವಾಲು ಎದುರಿಸಿ ಜಯ ಗಳಿಸಿದರು. ಮೊದಲ ಮತ್ತು ಎರಡನೇ ಸೆಟ್‌ನಲ್ಲಿ ರಚನಾಕ್‌ಗೆ ಮೇಲುಗೈ ಸಾಧಿಸಲು ಸಿಂಧು ಅವಕಾಶ ನೀಡಲಿಲ್ಲ. ರಚನಾಕ್‌ಗೆ ಪಾಯಿಂಟ್ ಗಳಿಸಲು ಸುಲಭದ ಅವಕಾಶ ಇದ್ದರೂ ಅವಕಾಶವನ್ನು ಕೈ ಚೆಲ್ಲಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News