×
Ad

ಈ ಕೇಕ್ ತುಂಡಿನ ಬೆಲೆ 50 ಸಾವಿರಕ್ಕಿಂತಲೂ ಹೆಚ್ಚಾಗಬಹುದು

Update: 2017-11-26 22:04 IST

ಲಂಡನ್,ನ.26: 1981ರಲ್ಲಿ ನಡೆದ ಯುವರಾಣಿ ಡಯಾನ ಹಾಗೂ ಯುವರಾಜ ಚಾರ್ಲ್ಸ್ ಅವರ ಅದ್ದೂರಿ ವಿವಾಹದಲ್ಲಿದ್ದ ಕೇಕ್‌ ತುಂಡೊಂದನ್ನು ಅಮೆರಿಕದಲ್ಲಿ ಈಗ ಹರಾಜಿಗಿಡಲಾಗಿದೆ.

 36 ವರ್ಷಗಳಷ್ಟು ಹಳೆಯದಾದ ಈ ಕೇಕ್‌ನ ತುಂಡು ಸುಮಾರು 800 ಡಾಲರ್‌ಗೆ ಹರಾಜಾಗುವ ನಿರೀಕ್ಷೆಯಿದೆ. ಹಣ್ಣಿನಿಂದ ತಯಾರಿ ಸಲಾದ ಈ ಕೇಕ್‌ನ ತುಂಡನ್ನು ವಿಶೇಷ ಪೊಟ್ಟಣವೊಂದರಲ್ಲಿಡಲಾಗಿದ್ದು, ಅದರಲ್ಲಿ ಸಿಡಿ, ಬಕಿಂಗ್‌ಹ್ಯಾಮ್ ಪ್ಯಾಲೇಸ್, 29 ಜುಲೈ 1981’ ಎಂದು ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಲಂಡನ್‌ನ ರಾಯಲ್ ನೇವಲ್ ಅಡುಗೆ ವಿದ್ಯಾಲಯದ ಮುಖ್ಯ ಕೇಕ್ ತಯಾರಕರಾದ ಡೇವಿಡ್ ಆವೆರಿ ಎಂಬವರು ಈ ಕೇಕ್ ತಯಾರಿಸಿದ್ದರು. ಡಿಸೆಂಬರ್ 6ರಂದು ಅಮೆರಿಕದಲ್ಲಿ ಬ್ರಿಟಿಶ್ ರಾಜಮನೆತನಕ್ಕೆ ಸಂಬಂಧಿಸಿದ ಛಾಯಾಚಿತ್ರಗಳು, ಪತ್ರಗಳು ಹಾಗೂ ಇತರ ಸ್ಮರಣಿಕೆಗಳನ್ನು ಹರಾಜಿಗಿಡಲಾಗುವುದು.

 ಯುವರಾಣಿ ಡಯಾನಾ ಅವರ ಈವ್‌ನಿಂಗ್ ಹ್ಯಾಂಡ್ ಬ್ಯಾಗ್ ಕೂಡಾ ಹರಾಜಿಗಿಡಲಾಗಿದ್ದು, ಅದು 12 ಸಾವಿರ ಡಾಲರ್‌ಗೆ ಮಾರಾಟವಾಗುವ ನಿರೀಕ್ಷೆಯಿದೆ.

ಯುವರಾಣಿ ಡಯಾನ 1997ರ ಆಗಸ್ಟ್ 31ರಂದು ಪ್ಯಾರಿಸ್‌ನಲ್ಲಿ ರಸ್ತೆ ಅವಘಡದಲ್ಲಿ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News