ಇವಾಂಕ ಟ್ರಂಪ್ ಅವರು ಪ್ರಶಂಸಿಸಿದ್ದು ಯುಪಿಎ ಸರಕಾರದ ಸಾಧನೆಯನ್ನು : ಚಿದಂಬರಂ

Update: 2017-11-29 09:10 GMT

ಹೊಸದಿಲ್ಲಿ,ನ.29 : ಹದಿಮೂರು ಕೋಟಿ ಭಾರತೀಯ ನಾಗರಿಕರನ್ನು  ಭಾರತ ಬಡತನದಿಂದ ಮೇಲೆತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕ ಟ್ರಂಪ್ ಅವರು ಮಂಗಳವಾರ  ತಮ್ಮ ಹೈದರಾಬಾದ್ ಭೇಟಿಯ ವೇಳೆ ಹೇಳಿರುವುದು  ನಿಜವಾಗಿಯೂ ಹಿಂದಿನ ಯುಪಿಎ ಸರಕಾರದ ಸಾಧನೆಯನ್ನು ಉಲ್ಲೇಖಿಸಿ ನೀಡಿರುವ ಹೇಳಿಕೆಯಾಗಿದೆ, ಎಂದು ಮಾಜಿ ವಿತ್ತ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

``ಯುಪಿಎ ಸರಕಾರದ ಅವಧಿಯಾದ 2004 ಹಾಗೂ 2014 ನಡುವೆ 14 ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲಕ್ಕೆತ್ತಲಾಗಿತ್ತು. ಇವಾಂಕ ಟ್ರಂಪ್ ಅವರು ಇದನ್ನೇ  ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು,'' ಎಂದು ಚಿದಂಬರಂ ಅವರ ಟ್ವೀಟ್ ಹೇಳಿದೆ.

ಭಾರತಕ್ಕೆ ಮೂರು ದಿನಗಳ ಭೇಟಿಯಲ್ಲಿರುವ ಇವಾಂಕ ಟ್ರಂಪ್ ಅವರು ಮಂಗಳವಾರ  ಹೈದರಾಬಾದ್ ನಗರದಲ್ಲಿ ನಡೆದ ಗ್ಲೋಬಲ್ ಎಂಟ್ರಪ್ರನರ್‍ಶಿಪ್ ಸಮ್ಮಿಟ್ ಉದ್ಘಾಟಿಸಿ ಮಾತನಾಡುತ್ತಾ ``130 ಮಿಲಿಯನ್ ಗೂ ಅಧಿಕ ಜನರನ್ನು ಬಡತನದಿಂದ ಭಾರತೀಯರು ಮೇಲಕ್ಕೆತ್ತಿದ್ದಾರೆ. 2030ರೊಳಗಾಗಿ ಭಾರತದ ಮಧ್ಯಮ ವರ್ಗವು ತನ್ನ ಜನಸಂಖ್ಯೆಯನ್ನು 50 ಕೋಟಿಗೆ ಮುಟ್ಟುವಂತೆ ಮಾಡಲು ಎಲ್ಲರೂ ಪ್ರಯತ್ನಿಸುತ್ತಿದ್ದೀರಿ,'' ಎಂದು ಇವಾಂಕ ಹೇಳಿದ್ದರು.

ಇಂದು ಅವರು ಹೈದರಾಬಾದ್ ನಗರದ ಗೋಲ್ಕೊಂಡ ಫೋರ್ಟ್ ಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News