×
Ad

ನಿರ್ಣಾಯಕ ಅಂತಾರಾಷ್ಟ್ರೀಯ ಕ್ರಮಗಳ ಅಗತ್ಯ: ಪೋಪ್ ಫ್ರಾನ್ಸಿಸ್ ಪ್ರತಿಪಾದನೆ

Update: 2017-11-30 22:33 IST

ಢಾಕಾ, ನ. 30: ರೊಹಿಂಗ್ಯಾ ನಿರಾಶ್ರಿತ ಬಿಕ್ಕಟ್ಟಿನ ವಿಷಯದಲ್ಲಿ ‘ನಿರ್ಣಾಯಕ’ ಅಂತಾರಾಷ್ಟ್ರೀಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಪೋಪ್ ಫ್ರಾನ್ಸಿಸ್ ಗುರುವಾರ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.

ಮ್ಯಾನ್ಮಾರ್ ಪ್ರವಾಸವನ್ನು ಮುಗಿಸಿ ಬಾಂಗ್ಲಾದೇಶ ಪ್ರವಾಸವನ್ನು ಆರಂಭಿಸುತ್ತಿದ್ದಂತೆಯೇ ಅವರು ಈ ಕರೆ ನೀಡಿದ್ದಾರೆ.

 ‘‘ಈ ಘೋರ ಬಿಕ್ಕಟ್ಟನ್ನು ನಿವಾರಿಸಲು ಅಂತಾರಾಷ್ಟ್ರೀಯ ಸಮುದಾಯ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ರೊಹಿಂಗ್ಯಾ ಜನರ ಸಾಮೂಹಿಕ ವಲಸೆಗೆ ಕಾರಣವಾಗಿರುವ ರಾಜಕೀಯ ವಿಷಯಗಳನ್ನು ಪರಿಹರಿಸುವುದರ ಜೊತೆಗೆ, ತುರ್ತು ಮಾನವೀಯ ಅಗತ್ಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಾಗುವಂತೆ ಬಾಂಗ್ಲಾದೇಶಕ್ಕೆ ವಸ್ತು ರೂಪದಲ್ಲಿ ತುರ್ತು ನೆರವನ್ನೂ ನೀಡಬೇಕಾಗಿದೆ’’ ಎಂದು ಪೋಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News