ಕ್ರಾಂತಿದೂತ ಪ್ರವಾದಿ ಮುಹಮ್ಮದ್(ಸ)

Update: 2017-12-01 05:34 GMT

ಅರಿಕೆ

ಹನಿಹನಿಯಲ್ಲೂ ಸಾಗರದ ಆಳವಿರುವ ಆ ಮಹಾ ಸಾಗರದ ಯಾವ ಹನಿಯನ್ನು ಎತ್ತಿಕೊಳ್ಳೋಣ? ಸತ್ಯದಾಹಿ ಲೋಕದ ದಾಹ ತಣಿಸಲು ನಮ್ಮ ಪುಟ್ಟ ಬೊಗಸೆಯನ್ನು ಯಾವ ಹನಿಯೆಡೆಗೆ ಚಾಚೋಣ?

ಪ್ರವಾದಿ ಮುಹಮ್ಮದ್ (ಸ)ರ ಬದುಕು ಹಾಗೂ ಆದರ್ಶಗಳ ಕುರಿತು ಮಾತನಾಡಲು, ಬರೆಯಲು ಹೊರಟವರಿಗೆ ಎದುರಾಗುವ ಮೊದಲ ಸವಾಲು ಇದು. ಸದ್ಯ ಇಲ್ಲಿ ಅಧಿಕೃತ, ಸರಳ ಹಾಗೂ ಸಂಗತ ಎಂಬ ಮೂರು ಅಂಶಗಳನ್ನು ಮಾನದಂಡವಾಗಿ ಪರಿಗಣಿಸಿ ಕೆಲವು ಮಾಹಿತಿಗಳನ್ನು ಓದುಗರ ಮುಂದಿಡಲಾಗಿದೆ. ಇಲ್ಲಿ ಈ ಮಾಹಿತಿಗಳನ್ನು ಕ್ರಮವಾಗಿ, ಟಿಪ್ಪಣಿಗಳು, ನುಡಿರತ್ನಗಳು ಮತ್ತು ದೃಶ್ಯಾವಳಿ ಎಂಬ ಮೂರು ಭಾಗಗಳಲ್ಲಿ, ಕೆಲವು ನುಡಿಗಳು, ಆದೇಶಗಳು ಮತ್ತು ಘಟನೆಗಳ ರೂಪದಲ್ಲಿ ಪ್ರಸ್ತುತ ಪಡಿಸಲಾಗಿದೆ. ಈ ಸರಳ ಮಾಹಿತಿಗಳು ಓದುಗರಿಗೆ ತೃಪ್ತಿ ನೀಡುವ ಬದಲು, ಮುಹಮ್ಮದ್ (ಸ) ಎಂಬ ಮಹಾಚೇತನದ ಬದುಕು ಹಾಗೂ ಕ್ರಾಂತಿಕಾರಿ ಬೋಧನೆಗಳ ಕುರಿತು ಅವರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಲಿ ಮತ್ತು ಈ ಕುರಿತು ಸಮಗ್ರ, ಗಂಭೀರ ಅಧ್ಯಯನಕ್ಕೆ ಪ್ರೇರಕವಾಗಲಿ ಎಂದು ಹಾರೈಸುತ್ತೇನೆ.

-ಅಬ್ದುಸ್ಸಲಾಮ್ ಪುತ್ತಿಗೆ

ನುಡಿರತ್ನಗಳು

 ‘‘ಧರ್ಮ ವಿಶ್ವಾಸ ಮತ್ತು ಲೋಭ ಇವೆರಡು ಒಂದೇ ಹೃದಯದಲ್ಲಿ ಜೊತೆಯಾಗಿರಲು ಸಾಧ್ಯವಿಲ್ಲ’’

 (ವರದಿ: ಅಬೂ ಹುರೈರ .ರ. - ನಸಾಈ)

***

 ‘‘ಕಪಟ ವ್ಯಕ್ತಿಯಲ್ಲಿ ಮೂರು ಲಕ್ಷಣಗಳಿರುತ್ತವೆ; ಅವನು ಮಾತಾಡುವಾಗ ಸುಳ್ಳು ಹೇಳುತ್ತಾನೆ, ವಚನ ಕೊಟ್ಟಾಗ ವಚನ ಭಂಗ ಮಾಡುತ್ತಾನೆ ಮತ್ತು ಅವನಲ್ಲಿ ವಿಶ್ವಾಸ ವಿಟ್ಟಾಗ ವಿಶ್ವಾಸ ದ್ರೋಹ ಮಾಡುತ್ತಾನೆ.’’

 (ವರದಿ: ಅಬೂ ಹುರೈರ .ರ.-ಬುಖಾರಿ)

***

 ‘‘ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇಟ್ಟಿರುವ ಯಾರೂ ತನ್ನ ನೆರೆಯವರಿಗೆ ಕಿರುಕುಳ ನೀಡಬಾರದು. ಅಲ್ಲಾಹನಲ್ಲಿ ಹಾಗೂ ಪರಲೋಕ ದಲ್ಲಿ ನಂಬಿಕೆ ಇಟ್ಟಿರುವ ಪ್ರತಿಯೊಬ್ಬನೂ ತನ್ನ ಅತಿಥಿಯನ್ನು ಆದರಿಸಬೇಕು. ಅಲ್ಲಾಹನಲ್ಲಿ ಹಾಗೂ ಪರಲೋಕದಲ್ಲಿ ನಂಬಿಕೆ ಇರುವ ಪ್ರತಿಯೊಬ್ಬನೂ ಮಾತನಾಡುವುದಿದ್ದರೆ ಹಿತಕರವಾದ ಮಾತನ್ನು ಆಡಬೇಕು, ಇಲ್ಲವಾದರೆ ಮೌನವಾಗಿರಬೇಕು’’.

(ವರದಿ: ಅಬೂ ಹುರೈರ .ರ.-ಸಹೀಹ್ ಬುಖಾರಿ)

***

 ‘‘ಸೃಷ್ಟಿಗಳೆಲ್ಲಾ ಅಲ್ಲಾಹನ ಕುಟುಂಬದವರು. ನಿಮ್ಮ ಪೈಕಿ, ಅಲ್ಲಾಹನ ಸೃಷ್ಟಿಗಳಿಗೆ ಅತ್ಯಧಿಕ ಹಿತವನ್ನು ಮಾಡುವವನೇ ಅಲ್ಲಾಹನಿಗೆ ಅತ್ಯಂತ ಪ್ರಿಯನಾಗಿರುತ್ತಾನೆ’’

(ವರದಿ: ಅನಸ್ ಬಿನ್ ಮಾಲಿಕ್ .ರ. - ಮಿಶ್ಕಾತ್)

***

‘‘ಕಾರ್ಮಿಕನ ಬೆವರು ಆರುವ ಮುನ್ನ ಅವನಿಗೆ ಅವನ ವೇತನವನ್ನು ಕೊಟ್ಟುಬಿಡಿ’’.

 (ವರದಿ: ಇಬ್ನು ಉಮರ್ .ರ. - ಇಬ್ನುಮಾಜ)

***

 ‘‘ಪುನರುತ್ಥಾನ ದಿನ, ಮೂರುಬಗೆಯ ಜನರ ವಿರುದ್ಧ ಸಾಕ್ಷಾತ್ ಅಲ್ಲಾಹನೇ ಮೊಕದ್ದಮೆ ಹೂಡುವನು;

1. ಅಲ್ಲಾಹನ ಹೆಸರಲ್ಲಿ ಒಂದು ಒಪ್ಪಂದ ಮಾಡಿ ಆ ಬಳಿಕ ಅದನ್ನು ಮುರಿದವರು.

2. ಸಭ್ಯ ಹಾಗೂ ಸ್ವತಂತ್ರ ವ್ಯಕ್ತಿಗಳನ್ನು ಅಪಹರಿಸಿ ಗುಲಾಮರಾಗಿಸಿ ಮಾರುವವರು.

3. ಕಾರ್ಮಿಕನಿಂದ ಕೆಲಸ ಮಾಡಿಸಿ ಅವನಿಗೆ ಅವನ ವೇತನ ನೀಡದೆ ಇರುವವರು.’’

(ವರದಿ: ಅಬೂ ಹುರೈರ .ರ. - ಬುಖಾರಿ)

***

 ‘‘ನೀನೆಂದೂ ಇನ್ನೊಬ್ಬರ ಸಂಕಟವನ್ನು ಕಂಡು ಸಂತೋಷ ಪಡಬೇಡ. ಅನ್ಯಥಾ ಅಲ್ಲಾಹನು ಅವನ ಮೇಲೆ ಕರುಣೆ ತೋರುವನು ಮತ್ತು ನಿನ್ನನ್ನು ಸಂಕಟಕ್ಕೆ ಗುರಿಪಡಿಸುವನು’’.

(ವರದಿ: ವಾಸಿಲ .ರ. - ತಿರ್ಮಿಝಿ)

***

 ‘‘ಹಿಂದೆ ಪ್ರವಾದಿಗಳನ್ನು ಅವರವರ ಜನಾಂಗದೆಡೆಗೆ ಕಳಿಸಲಾಗುತ್ತಿತ್ತು . ಆದರೆ ನನ್ನನ್ನು ಸಂಪೂರ್ಣ ಮಾನವ ಜನಾಂಗದೆಡೆಗೆ ಕಳಿಸಲಾಗಿದೆ’’.

(ವರದಿ: ಜಾಬಿರ್ ಬಿನ್ ಅಬ್ದುಲ್ಲಾಹ್.ರ. - ಸಹೀಹ್ ಬುಖಾರಿ)

***

 ‘‘ನಿಮ್ಮಲ್ಲಿ ಸಾಮೂಹಿಕ ನಮಾಝ್‌ನ ನೇತೃತ್ವ ವಹಿಸಿಕೊಂಡವರು ಲಘುವಾಗಿ ನಮಾಝ್ ಸಲ್ಲಿಸಲಿ (ಅದನ್ನು ಹೆಚ್ಚು ದೀರ್ಘಗೊಳಿಸದಿರಲಿ). ಏಕೆಂದರೆ ನಿಮ್ಮ ಹಿಂದೆ ದುರ್ಬಲರು, ರೋಗಿಗಳು ಮತ್ತು ವೃದ್ಧರು ಇರುತ್ತಾರೆ. ಇನ್ನು ನೀವು ಒಂಟಿಯಾಗಿ ನಮಾಝ್ ಸಲ್ಲಿಸುತ್ತಿರುವಾಗ ಅದನ್ನು ನಿಮಗೆ ಬೇಕೆನಿಸಿದಷ್ಟು ದೀರ್ಘಗೊಳಿಸಿ’’.

(ವರದಿ: ಅಬೂ ಹುರೈರಾ .ರ. - ಬುಖಾರಿ, ಮುಸ್ಲಿಮ್)

***

 ‘‘ಯಾರು ಜನರ ಮೇಲೆ ಕರುಣೆ ತೋರುವುದಿಲ್ಲವೋ ಅವನ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ’’.

(ವರದಿ: ಜರೀರ್ ಬಿನ್ ಅಬ್ದುಲ್ಲಾಹ್ .ರ. ಬುಖಾರಿ, ಮುಸ್ಲಿಮ್)

***

 ‘‘ಬಡ ಸಾಲಗಾರನಿಗೆ ಹೆಚ್ಚಿನ ಕಾಲಾವಕಾಶ ನೀಡುವ ಅಥವಾ ಅವನ ಸಾಲವನ್ನು ಕ್ಷಮಿಸಿ ಬಿಡುವ ವ್ಯಕ್ತಿಯನ್ನು ಅಲ್ಲಾಹನು ಪುನರುತ್ಥಾನದಿನ ಎಲ್ಲಾ ಸಂಕಟಗಳಿಂದ ಮುಕ್ತಗೊಳಿಸುವನು’’.

(ವರದಿ: ಅಬೀ ಖತಾದ .ರ.- ಮುಸ್ಲಿಮ್, ಮಿಶ್ಕಾತ್)

***

 ‘‘ಸದಭಿಪ್ರಾಯವು ಆರಾಧನೆಯದ್ದೇ ಒಂದು ಶಾಖೆಯಾಗಿದೆ’’.

(ವರದಿ: ಅಬೂ ಹುರೈರಾ .ರ.-ಅಹ್ಮದ್ ಮಿಶ್ಕಾತ್)

***

 ‘‘ಅಲ್ಲಾಹನು ನಿಮ್ಮ ರೂಪವನ್ನಾಗಲಿ ಸಂಪತ್ತನ್ನಾಗಲಿ ನೋಡುವುದಿಲ್ಲ. ಅವನು ನಿಮ್ಮ ಮನಸ್ಸುಗಳನ್ನು ಮತ್ತು ಕರ್ಮಗಳನ್ನು ನೋಡುತ್ತಾನೆ’’.

 (ವರದಿ: ಅಬೂ ಹುರೈರ .ರ. -ಅಬೂದಾವೂದ್, ಮಿಶ್ಕಾತ್)

***

 ‘‘ನೀವು ನಿಮಗೆ ಸಾಧ್ಯವಿರುವಷ್ಟು ಕರ್ಮಗಳ ಹೊಣೆಯನ್ನು ಮಾತ್ರ ವಹಿಸಿಕೊಳ್ಳಿರಿ, ಏಕೆಂದರೆ, ಅಲ್ಲಾಹನಂತೂ ದಣಿಯುವುದಿಲ್ಲ. ಆದರೆ ನೀವು ದಣಿದು ಬಿಡುತ್ತೀರಿ’’.

(ವರದಿ: ಆಯಿಶಾ .ರ. - ಬುಖಾರಿ, ಮಿಶ್ಕಾತ್.)

***

‘‘ಶ್ರೀಮಂತಿಕೆಯಲ್ಲಿ ಮಧ್ಯಮ ಧೋರಣೆ ತಾಳುವುದು ಎಷ್ಟೊಂದು ಶ್ರೇಷ್ಠ ಗುಣ! ಹಾಗೆಯೇ, ದಾರಿದ್ರದಲ್ಲಿ ಮಧ್ಯಮ ಧೋರಣೆ ತಾಳುವುದು ಮತ್ತು ಆರಾಧನೆಯಲ್ಲಿ ಮಧ್ಯಮ ಧೋರಣೆ ತಾಳುವುದು ಎಷ್ಟೊಂದು ಶ್ರೇಷ್ಠ ಗುಣ!’’.

(ವರದಿ: ಹುಝೈಫಾ .ರ. - ಮಿಶ್ಕಾತ್)

***

 ‘‘ಧರ್ಮವು ಸರಳವಾಗಿದೆ. ಯಾರಾದರೂ ಧರ್ಮದ ವಿಷಯದಲ್ಲಿ ಶಕ್ತಿಪರೀಕ್ಷೆಗೆ ಇಳಿದರೆ, ಧರ್ಮವು ಅವನನ್ನು ಸೋಲಿಸದೆ ಇರುವುದಿಲ್ಲ. ಸದಾ ನೇರವಾಗಿರಿ. ಮಧ್ಯಮ ಧೋರಣೆಯನ್ನು ಪಾಲಿಸಿರಿ. ಸದಾ ಸಂತುಷ್ಟರಾಗಿರಿ. ಮುಂಜಾನೆಯೂ, ಸಂಜೆಯೂ, ಪ್ರಯಾಣದಲ್ಲಿರುವಾಗಲೂ ಅಲ್ಲಾಹನಿಂದ ನೆರವು ಯಾಚಿಸುತ್ತಲಿರಿ’’.

 (ವರದಿ: ಅಬೂ ಹುರೈರ .ರ. - ಮಿಶ್ಕಾತ್)

***

  ‘‘ನೀವು ಸ್ವತಃ ಉಂಡದ್ದು ನಿಮಗೆ ಪುಣ್ಯದಾಯಕ ದಾನವಾಗಿರುತ್ತದೆ. ನೀವು ನಿಮ್ಮ ಮಕ್ಕಳಿಗೆ ಉಣಿಸಿದ್ದು ನಿಮ್ಮ ಪಾಲಿಗೆ ಪುಣ್ಯದಾಯಕ ದಾನವಾಗಿರುತ್ತದೆ. ನೀವು ನಿಮ್ಮ ಪತ್ನಿಗೆ ಉಣಿಸಿದ್ದು ನಿಮ್ಮ ಪಾಲಿಗೆ ಪುಣ್ಯದಾಯಕ ದಾನವಾಗಿರುತ್ತದೆ ಮತ್ತು ನೀವು ನಿಮ್ಮ ಸೇವಕನಿಗೆ ಉಣಿಸಿದ್ದು ನಿಮ್ಮ ಪಾಲಿಗೆ ಪುಣ್ಯದಾಯಕ ದಾನವಾಗಿರುತ್ತದೆ’’.

 (ಮಿಕ್ದಾದ್ ಬಿನ್ ಮಅದೀಕರ್ಬ್ - ಅಲ್ ಅದಬುಲ್ ಮುಫ್ರದ್ )

***

 ‘‘ಮನುಷ್ಯನು ತಾನು ಕೇಳಿದ್ದನ್ನೆಲ್ಲಾ (ಪರಾಮರ್ಶಿಸದೆ) ಹೇಳಲು ಆರಂಭಿಸಿದರೆ, ಅವನು ಸುಳ್ಳುಗಾರನೆನಿಸಿಕೊಳ್ಳುವುದಕ್ಕೆ ಅದುವೇ ಸಾಕು’’.

(ವರದಿ:ಅಬೂ ಹುರೈರ .ರ. - ಮುಸ್ಲಿಮ್, ಮಿಶ್ಕಾತ್).

***

 ‘‘ನನ್ನ ಯಾವುದೇ ಸಂಗಾತಿಯ ಕುರಿತು ಕೆಟ್ಟ ವಿಷಯಗಳನ್ನು ಯಾರೂ ನನಗೆ ತಲುಪಿಸಬಾರದು. ಏಕೆಂದರೆ ನಾನು ನಿಮ್ಮನ್ನು ಎದುರುಗೊಳ್ಳುವಾಗ, ನನ್ನ ಮನಸ್ಸು ಶುದ್ಧವಾಗಿರಬೇಕೆಂದು ನಾನು ಬಯಸುತ್ತೇನೆ’’.

(ವರದಿ: ಅಬ್ದುಲ್ಲಾಹ್ ಬಿನ್ ಮಸ್‌ಊದ್.ರ.-ತಿರ್ಮಿಝಿ)

***

 ‘‘ಅಸೂಯೆಯಿಂದ ಸದಾ ದೂರವಿರಿ. ಬೆಂಕಿಯು ಇಂಧನವನ್ನು ನುಂಗಿದಂತೆ ಅಸೂಯೆಯು ಸತ್ಕರ್ಮಗಳನ್ನು ನುಂಗಿ ಬಿಡುತ್ತದೆ’’.

 (ವರದಿ: ಅಬೂ ಹುರೈರ.ರ.-ಅಬೂದಾವೂದ್, ಮಿಶ್ಕಾತ್)

***

 ‘‘ಸುಳ್ಳನ್ನು ಗಂಭೀರವಾಗಿಯೂ ಹೇಳಬಾರದು, ತಮಾಶೆಗಾಗಿಯೂ ಹೇಳಬಾರದು. ನೀವು ಒಬ್ಬ ಸಣ್ಣ ಮಗುವಿಗೆ ಕೂಡಾ ಒಂದು ಆಶ್ವಾಸನೆ ನೀಡಿದ್ದರೆ ಅದನ್ನು ಪೂರ್ತಿಗೊಳಿಸದೆ ಇರಬಾರದು’’.

(ವರದಿ: ಅಬ್ದುಲ್ಲಾಹ್-ಅಲ್ ಅದಬುಲ್‌ಮುಫ್ರದ್)

***

 ‘‘ಅಕ್ರಮದಿಂದ ದೂರ ಉಳಿಯಿರಿ. ಏಕೆಂದರೆ ಅಕ್ರಮವು ಪರಲೋಕ ದಲ್ಲಿ ನಿಮ್ಮ ಪಾಲಿಗೆ ಕತ್ತಲೆಯನ್ನುಂಟು ಮಾಡುವುದು. ನೀವು ‘ಶುಹ್ಹ್’ನಿಂದ (ಜಿಪುಣತೆ ಹಾಗೂ ಸಂಕುಚಿತತೆಯಿಂದ) ದೂರ ಉಳಿಯಿರಿ. ಏಕೆಂದರೆ ಶುಹ್ಹ್ನಿಂದಾಗಿ ನಿಮ್ಮ ಹಿಂದಿನ ಜನರು ನಾಶವಾದರು. ಅದು ಜನರ ರಕ್ತಪಾತ ನಡೆಸುವುದಕ್ಕೆ ಹಾಗೂ ಮಾನಹಾನಿ ನಡೆಸುವುದಕ್ಕೆ ಅವರನ್ನು ಪ್ರೇರೇಪಿಸಿತ್ತು’’.

 (ವರದಿ: ಅಮ್ರ್ ಬಿನ್ ಆಸ್.ರ.-ಅಹ್ಮದ್, ಮಿಶ್ಕಾತ್)

***

 ‘‘ವೈದ್ಯಕೀಯ ಜ್ಞಾನವಿಲ್ಲದೆ ವೈದ್ಯನಂತೆ ಶುಶ್ರೂಷೆ ಕೊಟ್ಟವನು, (ಅದರ ಎಲ್ಲ ದುಷ್ಪರಿಣಾಮಗಳಿಗೆ) ತಾನೇ ಹೊಣೆಗಾರನಾಗಿರುತ್ತಾನೆ’’.

 (ವರದಿ: ಅಮ್ರ್ ಬಿನ್ ಶುಐಬ್.ರ.-ಅಬೂ ದಾವೂದ್, ನಸಾಈ, ಮಿಶ್ಕಾತ್)

***

 ‘‘ಬಡವರನ್ನು ಬಿಟ್ಟು ಶ್ರೀಮಂತರನ್ನು ಮಾತ್ರ ಆಮಂತ್ರಿಸಲಾಗಿರುವ ವಿವಾಹದ ಔತಣ (ವಲೀಮಾ) ಅತ್ಯಂತ ಕೆಟ್ಟ ಔತಣವಾಗಿದೆ’’.

 (ವರದಿ: ಅಬೂ ಹುರೈರ .ರ.-ಬುಖಾರಿ, ಮುಸ್ಲಿಮ್, ಮಿಶ್ಕಾತ್)

***

 ‘‘ನ್ಯಾಯಾಧೀಶರಲ್ಲಿ ಮೂರು ತರದವರಿದ್ದಾರೆ. ಆ ಪೈಕಿ ಒಂದು ತರದವರು ಸ್ವರ್ಗಕ್ಕೆ ಮತ್ತು ಉಳಿದೆರಡು ತರದವರು ನರಕಕ್ಕೆ ಹೋಗುವರು. ಸತ್ಯವನ್ನು ಅರಿತು ಅದರ ಆಧಾರದಲ್ಲಿ ತೀರ್ಪು ನೀಡುವವನು ಸ್ವರ್ಗಕ್ಕೆ ಅರ್ಹನಾಗುವನು. ಸತ್ಯವನ್ನು ಅರಿತು ಅದರ ವಿರುದ್ಧ (ಅನ್ಯಾಯದ ಪರ) ತೀರ್ಪು ನೀಡುವವನು ನರಕಕ್ಕೆ ಅರ್ಹನಾಗುವನು. ಹಾಗೆಯೇ (ಏನನ್ನೂ ಅರಿಯಲು ಪ್ರಯತ್ನಿಸದೆ) ಅಜ್ಞಾನದ ಆಧಾರದಲ್ಲಿ ತೀರ್ಪು ನೀಡುವವನು ಕೂಡಾ ನರಕಕ್ಕೆ ಅರ್ಹನಾಗುವನು’’.

(ವರದಿ: ಬುರೈದ .ರ.-ಅಬೂದಾವೂದ್, ಇಬ್ನುಮಾಜ)

***

 ‘‘.... ಆರೋಪಿಯ ಖುಲಾಸೆಗೆ ಸ್ವಲ್ಪವಾದರೂ ಅವಕಾಶವಿದ್ದರೆ ಅಂತಹ ಅವಕಾಶವನ್ನು ಅವನ ಪಾಲಿಗೆ ಮುಚ್ಚಿಬಿಡಬೇಡಿ. ನಾಯಕನಾದವನು ಆರೋಪಿಗಳನ್ನು ಬಿಡುಗಡೆಗೊಳಿಸುವಲ್ಲಿ ತಪ್ಪು ಮಾಡುವುದು, ನಿರಪರಾಧಿ ಯನ್ನು ತಪ್ಪಾಗಿ ಶಿಕ್ಷೆಗೆ ಗುರಿಪಡಿಸುವುದಕ್ಕಿಂತ ಉತ್ತಮ’’

 (ವರದಿ: ಆಯಿಶಾ.ರ.-ತಿರ್ಮಿಝೀ, ಮಿಶ್ಕಾತ್)

***

 ‘‘ಉಡುಗೊರೆಯು ಉಡುಗೊರೆ ಮಾತ್ರ ಆಗಿರುವ ತನಕ ಅದನ್ನು ಸ್ವೀಕರಿಸಿರಿ. ಇನ್ನು ಅದು ಧರ್ಮದ ದೃಷ್ಟಿಯಿಂದ ಲಂಚವಾಗಿ ಬಿಟ್ಟಾಗ ಅದನ್ನು ಸ್ವೀಕರಿಸಬೇಡಿ.....’’

(ವರದಿ: ಮುಆಝ್‌ಬಿನ್ ಜಬಲ್ .ರ.-ತಬರಾನಿ)

***

 ‘‘ಸಾಮಾನ್ಯವಾಗಿ ಜನರು ನಾಲ್ಕು ಕಾರಣಗಳಿಗಾಗಿ ಸ್ತ್ರೀಯನ್ನು ವಿವಾಹವಾಗುತ್ತಾರೆ.

1. ಆಕೆಯ ಸಂಪತ್ತಿಗಾಗಿ

2. ಆಕೆಯ ವಂಶಕ್ಕಾಗಿ

3. ಆಕೆಯ ಸೌಂದರ್ಯಕ್ಕಾಗಿ

4. ಆಕೆಯ ಧಾರ್ಮಿಕತೆಗಾಗಿ.

ನೀವು ಧಾರ್ಮಿಕಳಾಗಿರುವಾಕೆಗೆ ಪ್ರಾಶಸ್ತ್ಯ ನೀಡಿರಿ-ನಿಮಗೆ ಸಮೃದ್ಧಿ ಸಿಗಲಿ’’.

 (ವರದಿ:ಅಬೂ ಹುರೈರ .ರ. - ಬುಖಾರಿ, ಮುಸ್ಲಿಮ್, ಮಿಶ್ಕಾತ್)

***

 ‘‘ಯಾರಿಗಾದರೂ ಈ ನಾಲ್ಕು ವಿಶೇಷತೆಗಳು ಪ್ರಾಪ್ತವಾದರೆ,

ಅವನಿಗೆ ಈ ಲೋಕ ಮತ್ತು ಪರಲೋಕದ ಅತ್ಯುತ್ತಮ ಅನುಗ್ರಹ ಸಿಕ್ಕಿತೆಂದು ಅರ್ಥ.

1. ಕೃತಜ್ಞ ಮನಸ್ಸು,

2. ಅಲ್ಲಾಹನನ್ನು ಸ್ಮರಿಸುತ್ತಲಿರುವ ನಾಲಿಗೆ,

3. ಸಂಕಷ್ಟಗಳನ್ನು ಸಹಿಸಬಲ್ಲ ಶರೀರ,

4. ತನ್ನ ಮಾನ ಹಾಗೂ ತನ್ನ ಪತಿಯ ಸೊತ್ತಿನ ವಿಷಯದಲ್ಲಿ ವಂಚನೆ ಮಾಡದ ಪತ್ನಿ’’.

 (ವರದಿ: ಇಬ್ನು ಅಬ್ಬಾಸ್.ರ.-ಬೈಹಕೀ, ಮಿಶ್ಕಾತ್)

***

 ‘‘ಜನರೇ, ಜನರು ಸದ್ವರ್ತನೆ ತೋರಿದರೆ ನಾವೂ ಸದ್ವರ್ತನೆ ತೋರುವೆವು ಮತ್ತು ಜನರು ಕೆಟ್ಟದಾಗಿ ವರ್ತಿಸಿದರೆ ನಾವು ಅಕ್ರಮ ಮಾಡುವೆವು ಎಂದು ಹೇಳುವವರು ನೀವಾಗಬೇಡಿ. ಜನರು ಸದ್ವರ್ತನೆ ತೋರಿದರೆ ನೀವು ಸದ್ವರ್ತನೆ ತೋರಿರಿ ಮತ್ತು ಜನರು ಕೆಟ್ಟದಾಗಿ ವರ್ತಿಸಿದರೂ ನೀವು ಅನ್ಯಾಯಕ್ಕಿಳಿಯಬೇಡಿ-ಅಂತಹ ಧೋರಣೆಯನ್ನು ರೂಢಿಸಿಕೊಳ್ಳಿ’’

(ವರದಿ:ಖುಝೈಫ .ರ. - ಮಿಶ್ಕಾತ್)

***

 ‘‘ಮಲ್ಲಯುದ್ಧ ಗೆಲ್ಲುವವನು ಮಲ್ಲನಲ್ಲ. ಕೋಪ ಬಂದಾಗ ತನ್ನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವವನೇ ಮಲ್ಲ’’.

 (ವರದಿ: ಅಬೂ ಹುರೈರ .ರ., ಸಹೀಹ್ ಮುಸ್ಲಿಮ್, ಮಿಶ್ಕಾತ್)

***

 ‘‘ಸತ್ಯ ಸ್ವಾಭಿಮಾನಿಯೂ, ಅಪರಿಚಿತನೂ ಆಗಿರುವ ದಾಸನನ್ನು ಅಲ್ಲಾಹನು ಪ್ರೀತಿಸುತ್ತಾನೆ’’.

(ವರದಿ: ಸಅದ್.ರ.-ಮಿಶ್ಕಾತ್)

***

 ‘‘ದಾನಧರ್ಮದಿಂದ ಸಂಪತ್ತು ಕಡಿಮೆಯಾಗುವುದಿಲ್ಲ. ಅನ್ಯಾಯ ಕ್ಕೊಳಗಾದ ಬಳಿಕ ಕ್ಷಮಿಸಿ ಬಿಟ್ಟವನ ಗೌರವವನ್ನು ಅಲ್ಲಾಹನು ಹೆಚ್ಚಿಸದೆ ಇರುವುದಿಲ್ಲ-ಆದ್ದರಿಂದ ನೀವು ಕ್ಷಮಿಸಿರಿ. ಅಲ್ಲಾಹನು ನಿಮ್ಮನ್ನು ಗೌರವಾನ್ವಿತರಾಗಿಸುವನು. ತನಗಾಗಿ ಭಿಕ್ಷೆಯ ಬಾಗಿಲನ್ನು ತೆರೆದುಕೊಂಡವನ ಪಾಲಿಗೆ ಅಲ್ಲಾಹನು ದಾರಿದ್ರದ ಬಾಗಿಲನ್ನು ತೆರೆಯದೆ ಇರುವುದಿಲ್ಲ’’.

(ವರದಿ: ಉಮ್ಮ್ಮು ಸಲ್ಮಾ .ರ.-ತಬರಾನಿ).

***

 ‘‘ಸತ್ಕಾರ್ಯವನ್ನು ಪೂರ್ತಿಗೊಳಿಸುವುದು, ಕೇವಲ ಅದನ್ನು ಆರಂಭಿಸಿ ಬಿಡುವುದಕ್ಕಿಂತ ಉತ್ತಮ’’.

(ವರದಿ-ಜಾಬಿರ್.ರ.-ತಬರಾನಿ).

***

 ‘‘ಮೂರು ವಿಮೋಚಕ ಗುಣಗಳಿವೆ ಮತ್ತು ಮೂರು ವಿನಾಶಕಾರಿ ಗುಣಗಳಿವೆ. ವಿಮೋಚಕ ಗುಣಗಳು ಯಾವುವೆಂದರೆ,

1. ಗುಪ್ತವಾಗಿಯೂ ಬಹಿರಂಗವಾಗಿಯೂ

2. ಸಂತೋಷವಿದ್ದರೂ ಅಸಮಾಧಾನವಿದ್ದರೂ ಸತ್ಯವನ್ನೇ ನುಡಿಯುವುದು.

3. ಶ್ರೀಮಂತಿಕೆಯಲ್ಲೂ ದಾರಿದ್ರದಲ್ಲೂ ಮಧ್ಯಮ ಧೋರಣೆಯನ್ನು ಪಾಲಿಸುವುದು.

ವಿನಾಶಕಾರಿ ಗುಣಗಳು ಯಾವುವೆಂದರೆ,

1. ಸ್ವೇಚ್ಛೆಯ ಗುಲಾಮನಾಗಿ ಬಿಡುವುದು.

2. ಲೋಭಕ್ಕೆ ಶರಣಾಗಿ ಅದರ ಹಿಂದೆ ನಡೆಯುವುದು.

3. ತಾನೇ ತನ್ನ ಅಭಿಮಾನಿಯಾಗಿಬಿಡುವುದು-ಇದು ಇವುಗಳ(ಪ್ರಸ್ತುತ ಮೂರು ಗುಣಗಳ) ಪೈಕಿ ಅತ್ಯಂತ ಅಪಾಯಕಾರಿ ಗುಣವಾಗಿದೆ.

 (ವರದಿ: ಅಬೂ ಹುರೈರ .ರ. -ಬೈಹಕೀ, ಮಿಶ್ಕಾತ್)

***

‘‘ಧರ್ಮ ವಿಶ್ವಾಸಿಯಾಗಿರುವವನಲ್ಲಿ ಈ ಮೂರು ಗುಣಗಳಿರಬೇಕು;

1. ಅವನು ಕೋಪಗೊಂಡಾಗ ಅವನ ಕೋಪವು ಅವನನ್ನು ಯಾವುದೇ ಅಕ್ರಮಕ್ಕೆ ಪ್ರಚೋದಿಸಬಾರದು.

2. ಅವನು ಸಂಭ್ರಮದಲ್ಲಿರುವಾಗ ಅವನ ಸಂಭ್ರಮವು ಅವನನ್ನು ಸತ್ಯ ಹಾಗೂ ಸಕ್ರಮದ ವ್ಯಾಪ್ತಿಯಿಂದ ಹೊರ ತಳ್ಳಬಾರದು.

3. ಅವನು ಶಕ್ತಿಶಾಲಿಯಾಗಿರುವಾಗ (ಅಧಿಕಾರಸ್ಥನಾಗಿರುವಾಗ)ತನ್ನದಲ್ಲದ ಏನನ್ನೂ ಅವನು ಯಾರಿಂದಲೂ ಕಿತ್ತುಕೊಳ್ಳಬಾರದು.

(ವರದಿ: ಅನಸ್.ರ.- ಮಿಶ್ಕಾತ್)

***

 ‘‘ವಿಧವೆಯರು ಹಾಗೂ ನಿರ್ಗತಿಕರ ಪಾಲನೆ ಪೋಷಣೆ ಮಾಡುವ ವ್ಯಕ್ತಿಯು ಅಲ್ಲಾಹನ ಮಾರ್ಗದಲ್ಲಿ ಧರ್ಮ ಯುದ್ಧ ಮಾಡುವ ಅಥವಾ ಹಗಲೆಲ್ಲಾ ಉಪವಾಸ ಆಚರಿಸಿ, ರಾತ್ರಿಯನ್ನು ಆರಾಧನೆಯಲ್ಲಿ ಕಳೆಯುವ ವ್ಯಕ್ತಿಗೆ ಸಮಾನನಾಗಿರುತ್ತಾನೆ’’.

(ಸಹೀಹ್ ಬುಖಾರಿ)

***

 ಟಿಪ್ಪಣಿಗಳು

ಮುಹಮ್ಮದ್ (ಸ) ಬಿನ್ ಅಬ್ದುಲ್ಲಾಹ್ ಕ್ರಿ.ಶ.570ರಲ್ಲಿ ಅರೇಬಿಯಾದ ಮಕ್ಕಾದಲ್ಲಿ ಜನಿಸಿದವರು. 63ರ ಹರೆಯದಲ್ಲಿ ಅವರು ನಿಧನರಾದರು. ತಮ್ಮ 40ನೇ ವಯಸ್ಸಿನಲ್ಲಿ ಅವರು, ತಾವು ದೇವದೂತರೆಂದು ಘೋಷಿಸಿದರು. ಒಂದು ಪುಟ್ಟ ಗೋತ್ರದಲ್ಲಿ ಜನಿಸಿದ ಅವರು ಸಂಪೂರ್ಣ ಮಾನವ ಸಮೂಹವನ್ನು ಸಂಸ್ಕರಿಸಲು ಹೊರಟರು. ಗಣನೀಯ ಯಶಸ್ಸನ್ನ್ನೂ ಸಾಧಿಸಿದರು.

► ಅವರು ಸದಾ ಹಸನ್ಮುಖಿಯಾಗಿದ್ದರು.

► ಅವರಷ್ಟು ಸರಳ, ಸಹಜ ಬದುಕನ್ನು ಬದುಕಿದ ಮಹಾಪುರುಷ ಬೇರಿಲ್ಲ.

► ಅವರು ಅತ್ಯಂತ ಕ್ಷಮಾಶೀಲರಾಗಿದ್ದರು.

► ಅವರಲ್ಲಿ ಅಪಾರ ವಿನಯವಿತ್ತು.

► ಅವರ ಔದಾರ್ಯ ಅನುಪಮವಾಗಿತ್ತು.

► ಅವರು ಭಾರೀ ಧೈರ್ಯಶಾಲಿಯಾಗಿದ್ದರು. ಅಸಾಮಾನ್ಯ ಸಾಹಸಿಯಾಗಿದ್ದರು.

► ಅವರ ವಾತ್ಸಲ್ಯ ನಿಸ್ಸೀಮವಾಗಿತ್ತು. ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು, ಅಷ್ಟೇ ಏಕೆ, ಗಿಡ ಮರಗಳು ಕೂಡಾ ಅವರ ಪ್ರೀತಿ ವಾತ್ಸಲ್ಯಗಳಿಗೆ ಪಾತ್ರವಾಗಿದ್ದವು.

► ಅವರು ಪರಮ ಸೌಜನ್ಯ ಶೀಲರಾಗಿದ್ದರು.

► ಅವರು ಈ ಜಗತ್ತು ಕಂಡ ಅತ್ಯುತ್ತಮ ಶಿಕ್ಷಕರಾಗಿದ್ದರು.

► ಅವರು ಕೃಪೆ, ಕರುಣೆಗಳ ಸಾಗರವಾಗಿದ್ದರು.

► ಅವರ ನ್ಯಾಯನಿಷ್ಠೆ ಅನನ್ಯವಾಗಿತ್ತು. ಅನ್ಯಾಯ, ಶೋಷಣೆಗಳ ವಿರುದ್ಧ ಅವರಲ್ಲಿ ಅದಮ್ಯ ರೋಷವಿತ್ತು.

► ಜನಸೇವೆಯ ವಿಷಯದಲ್ಲಿ ಅವರ ಹುರುಪು-ಉತ್ಸಾಹ ಸಾರ್ವಕಾಲಿಕ ಮಾದರಿಯಾಗಿತ್ತು.

► ಅವರು ನಿಸರ್ಗ ಪ್ರೇಮಿಯಾಗಿದ್ದರು. ಪ್ರಕೃತಿಯ ಮಡಿಲಲ್ಲಿ ಅವರು ನೆಮ್ಮದಿಯನ್ನು ಕಾಣುತ್ತಿದ್ದರು. ಪ್ರಕೃತಿಯೇ ಧರ್ಮದ ಮೂಲ ಸ್ವಭಾವವೆಂದು ವರ್ಣಿಸಿದ್ದ ಅವರು, ಪರಿಸರ ಸಂರಕ್ಷಣೆಗೆ ಪೂರಕವಾದ ಜೀವನ ಕ್ರಮವನ್ನು ಪ್ರೋತ್ಸಾಹಿಸಿದ್ದರು.

► ಅವರು ನುಡಿದಂತೆ ನಡೆದವರು. ಅವರ ಮಾತು - ಕೃತಿಗಳ ನಡುವೆ ಎಂದೂ ಯಾರೂ ಯಾವುದೇ ವಿರೋಧಾಭಾಸವನ್ನು ಕಾಣಲಿಲ್ಲ.

► ಅವರ ಬದುಕು ಹಾಗೂ ವ್ಯಕ್ತಿತ್ವವು ಸತ್ಯ-ನ್ಯಾಯಗಳ ಪ್ರತಿರೂಪವಾಗಿತ್ತು.

► ಅವರು ಸತ್ಯ, ಸಾಮೂಹಿಕ ನ್ಯಾಯ ಮತ್ತು ಅತ್ಯುನ್ನತ ಮಟ್ಟದ ನೈತಿಕ ವೌಲ್ಯಗಳನ್ನು ಕೇವಲ ಬೋಧಿಸಿದ್ದು ಮಾತ್ರವಲ್ಲ, ತಮ್ಮ ಬದುಕಿನ ಅವಧಿಯಲ್ಲೇ ಸಮಾಜದಲ್ಲಿ       ಅವುಗಳನ್ನು ಅನುಷ್ಠಾನಿಸಿ, ನಿಜಕ್ಕೂ ಒಂದು ಆದರ್ಶ ಸಮಾಜವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು.

► ಅವರು ತಮ್ಮ ಬದುಕಿನ ಅವಧಿಯಲ್ಲೇ ಮದ್ಯ ಮುಕ್ತ, ಜೂಜು ಮುಕ್ತ, ವ್ಯಭಿಚಾರ ಮುಕ್ತ, ಲಂಚಮುಕ್ತ, ಬಡ್ಡಿಮುಕ್ತ ಹಾಗೂ ಅಪರಾಧ ಮುಕ್ತ ಸಮಾಜವೊಂದನ್ನು ನಿರ್ಮಿಸಿ     ತೋರಿಸಿದ್ದರು.

► ಅವರ ವ್ಯಕ್ತಿತ್ವದಂತೆ, ಅವರ ಸಂದೇಶವೂ ಸರಳವಾಗಿತ್ತು.

► ಮಾನವರು ತಮ್ಮ ಸೃಷ್ಟಿಕರ್ತನನ್ನು ಗುರುತಿಸಿ, ಅವನಿಗೆ ಶರಣಾಗಿ, ಅವನ ಮಾರ್ಗದರ್ಶನದಂತೆ ಬದುಕಬೇಕು. ಈ ಲೋಕದ ಬದುಕು ಒಂದು ತಾತ್ಕಾಲಿಕ ಪರೀಕ್ಷಾವಧಿ. ಮರಣದೊಂದಿಗೆ ಈ ಪರೀಕ್ಷೆ ಕೊನೆಗೊಳ್ಳುತ್ತದೆ. ವ್ಯಕ್ತಿಗಳಂತೆ, ಈ ಲೋಕಕ್ಕೂ ಒಂದು ಅಂತ್ಯವಿದೆ. ಈ ನಶ್ವರ ಲೋಕದ ಅಂತ್ಯದೊಂದಿಗೆ, ಫಲಿತಾಂಶಗಳ ಶಾಶ್ವತ ಬದುಕು ಆರಂಭಗೊಳ್ಳುತ್ತದೆ. ತಮ್ಮ ಮೂಲಕ ಜಗತ್ತಿಗೆ ತಲುಪಿದ ‘ಪವಿತ್ರ ಕುರ್‌ಆನ್’ ಎಂಬ ಅಂತಿಮ ದಿವ್ಯಗ್ರಂಥದ ಮಾರ್ಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News