ವಿಂಡೀಸ್ ಪೊಲೀಸನ್ನು ಕರೆಸಿ ಹಾರ್ದಿಕ್‌ರನ್ನು ಬಂಧಿಸಲು ಮುಂದಾಗಿದ್ದ ಪೊಲಾರ್ಡ್!

Update: 2017-12-02 08:11 GMT

ಹೊಸದಿಲ್ಲಿ, ಡಿ.1: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಸೀಮಿತ ಓವರ್ ಕ್ರಿಕೆಟ್ ಸರಣಿಯನ್ನಾಡಲು ವೆಸ್ಟ್‌ಇಂಡೀಸ್‌ಗೆ ತೆರಳಿದ್ದ ಸಂದರ್ಭದಲ್ಲಿ ವಿಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್ ತನ್ನನ್ನು ಬಂಧಿಸಲು ಪೊಲೀಸ್ ಅಧಿಕಾರಿಯನ್ನು ಕರೆಸಿದ್ದರು ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಗೌರವ್ ಕಪೂರ್ ಅವರೊಂದಿಗೆ ನಡೆಸಿದ ಮಾತುಕತೆಯ ವೇಳೆ ಪಾಂಡ್ಯ ಈ ವಿಷಯ ಬಹಿರಂಗಪಡಿಸಿದರು.

ಪೊಲಾರ್ಡ್ ತನ್ನ ಒಡಹುಟ್ಟಿದ ಸಹೋದರನಿದ್ದಂತೆ ಎಂದಿರುವ ಹಾರ್ದಿಕ್, ನಾನು ವೆಸ್ಟ್‌ಇಂಡೀಸ್‌ಗೆ ತೆರಳಿದ ಸಂದರ್ಭದಲ್ಲಿ ಯಾವುದೇ ಭಯವಿಲ್ಲದೆ ಓಡಾಡಿಕೊಂಡಿದ್ದೆ. ಪೊಲಾರ್ಡ್ ನನ್ನ ಜೊತೆಗಿರುತ್ತಿದ್ದರು. ನನಗೆ ಅಲ್ಲಿ ಭಾರತದಲ್ಲಿ ಇದ್ದ ಅನುಭವವಾಗಿತ್ತು. ಹೀಗಿರುವಾಗ ಪೊಲಾರ್ಡ್ ನನ್ನ ಬಳಿ ಬಂದು, ನಿನಗೆ ಇಲ್ಲಿ ಭಯವಾಗುವುದಿಲ್ಲವೇ ಎಂದು ಕೇಳಿದರು. ಆಗ ನಾನು ನೀನಿರುವಾಗ ಭಯವೇಕೆ. ನಾನು ನಿನ್ನ ನಗರದಲ್ಲಿದ್ದೇನೆ ಎಂದು ಹೇಳಿದ್ದೆ. ನನ್ನ ಕಾಲನ್ನು ಎಳೆದ ಅವರು ಪೊಲೀಸ್ ಅಧಿಕಾರಿಯೊಬ್ಬರನ್ನು ಸ್ಥಳಕ್ಕೆ ಕರೆಸಿ ನನ್ನನ್ನು ಬಂಧಿಸುವಂತೆ ಸೂಚಿಸಿದರು. ಪೊಲೀಸ್ ನನ್ನನ್ನು ಬಂಧಿಸಲು ಮುಂದಾದರು. ನಾನು ಸುಮ್ಮನೆ ನಿಂತಿದ್ದೆ. ನಾನು ಏನೂ ತಪ್ಪು ಮಾಡಿಲ್ಲ. ಸಮಸ್ಯೆಯಿಂದ ಪಾರಾಗಲು ಭಾರತ ತಂಡದ ಸದಸ್ಯರನ್ನು ಸ್ಥಳಕ್ಕೆ ಕರೆಸಿಕೊಳ್ಳುವುದು ಉತ್ತಮ ಎಂಬ ಯೋಚನೆ ಬಂದಿತ್ತು. ಪೊಲೀಸ್‌ನ ಹಾವಭಾವ ನೋಡಿದಾಗ ಅನುಮಾನ ಬಂತು. ಪೊಲಾರ್ಡ್ ನನಗೆ ತಮಾಷೆ ಮಾಡುತ್ತಿದ್ದಾರೆ ಎನ್ನುವುದು ತಕ್ಷಣವೇ ಗೊತ್ತಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News