×
Ad

ಕಸಾಯಿಖಾನೆಗಳಿಗೆ ಜಾನುವಾರುಗಳ ಮಾರಾಟ ನಿಷೇಧ ಆದೇಶ ಹಿಂಪಡೆಯಲು ಕೇಂದ್ರ ಸರಕಾರ ನಿರ್ಧಾರ

Update: 2017-12-03 11:22 IST

ಹೊಸದಿಲ್ಲಿ, ಡಿ.3: ಕಸಾಯಿಖಾನೆಗಳಿಗೆ ಕೋಣಗಳು ಸೇರಿದಂತೆ  ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಹೊರಡಿಸಲಾಗಿದ್ದ ವಿವಾದಾತ್ಮಕ ಆದೇಶವನ್ನು ಕೇಂದ್ರ ಪರಿಸರ ಸಚಿವಾಲಯ  ಹಿಂಪಡೆಯಲು ನಿರ್ಧರಿಸಿದೆ ಎಂದು hindustantimes.com ವರದಿ ಮಾಡಿದೆ.

2017,ಮೇ 23ರಂದು ಕೇಂದ್ರ ಸರಕಾರ ನೀಡಿದ್ದ  ವಿವಾದಾತ್ಮಕ ಆದೇಶ ವಿರುದ್ಧ ಹಲವು ರಾಜ್ಯಗಳು ಧ್ವನಿಯೆತ್ತಿದ್ದವು. ಕಸಾಯಿಖಾನೆಗಳಿಗೆ ಕೋಣಗಳು ಸೇರಿದಂತೆ  ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಹೊರಡಿಸಲಾಗಿದ್ದ ಅಧಿಸೂಚನೆಯಲ್ಲಿ ಹಲವು ನ್ಯೂನತೆಗಳಿದ್ದು, ಪರಿಷ್ಕೃತ ಅಧಿಸೂಚನೆ ಹೊರಡಿಸಲು ಚಿಂತಿಸಲಾಗಿದೆ. ಹೀಗಾಗಿ ಅಧಿಸೂಚನೆಯನ್ನು ಹಿಂಪಡೆಯಲಾಗುತ್ತಿದೆ ಎಂದು  ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಆದೇಶ ಜಾರಿಗೆ  ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಈ ಅಧಿಸೂಚನೆ ಹಿಂಪಡೆಯಲು ಮುಂದಾಗಿದೆ ಎಂದು  ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News