×
Ad

ಟೆಲ್‌ಅವೀವ್: ಇಸ್ರೇಲ್ ಸರಕಾರದ ಭ್ರಷ್ಟಾಚಾರ ವಿರುದ್ಧ ಬೃಹತ್ ರ‍್ಯಾಲಿ

Update: 2017-12-03 22:51 IST

ಟೆಲ್‌ಅವೀವ್,ಡಿ.2: ಇಸ್ರೇಲ್ ಸರಕಾರದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧದ ಆರೋಪಗಳ ತನಿಖೆ ವಿಳಂಬ ಗತಿಯಲ್ಲಿ ಸಾಗುತ್ತಿರುವುದನ್ನು ಪ್ರತಿಭಟಿಸಿ ರಾಜಧಾನಿ ಟೆಲ್‌ಅವೀವ್‌ನಲ್ಲಿ ರವಿವಾರ ಸಹಸ್ರಾರು ಮಂದಿ ನಾಗರಿಕರು ಬೃಹತ್ ರ‍್ಯಾಲಿ ನಡೆಸಿದರು.

ತನ್ನ ಶ್ರೀಮಂತ ಬೆಂಬಲಿಗರಿಂದ ಬೆಲೆಬಾಳುವ ಉಡುಗೊರೆಗಳನ್ನು ಸ್ವೀಕರಿಸಿದ ಹಾಗೂ ಇಸ್ರೇಲ್‌ನ ಪ್ರಮುಖ ದಿನಪತ್ರಿಕೆ ಯೆಡಿಯೊಟ್ ಅಹರ್‌ನೊಟ್‌ನಲ್ಲಿ ತನ್ನ ಪರವಾಗಿ ವರದಿಯನ್ನು ಪ್ರಕಟಿಸಲು ಪ್ರಕಾಶಕರ ಜೊತೆ ರಹಸ್ಯವಾದ ಒಪ್ಪಂದವನ್ನು ಏರ್ಪಡಿಸಿಕೊಂಡ ಆರೋಪಗಳನ್ನು ನೆತನ್ಯಾಹು ಎದುರಿಸುತ್ತಿದ್ದಾರೆ. ಮಾರ್ಚ್ ಆಫ್ ಶೇಮ್ (ನಾಚಿಕೆಗೇಡಿನ ಪಾದಯಾತ್ರೆ) ಎಂದು ಬಣ್ಣಿಸಲಾದ ಈ ರ‍್ಯಾಲಿಯಲ್ಲಿ ಪ್ರತಿಭಟನಕಾರರು ಇಸ್ರೇಲ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡಲೇ ರಾಜೀನಾಮೆ ನೀಡಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News