ಶರೀಫ್ ಮನವಿ ತಿರಸ್ಕರಿಸಿದ ಇಸ್ಲಾಮಾಬಾದ್ ಹೈಕೋರ್ಟ್

Update: 2017-12-04 17:04 GMT

ಇಸ್ಲಾಮಾಬಾದ್, ಡಿ. 4: ತನ್ನ ವಿರುದ್ಧದ ಮೂರು ಭ್ರಷ್ಟಾಚಾರ ಪ್ರಕರಣಗಳನ್ನು ಜೊತೆಯಾಗಿ ವಿಚಾರಣೆ ನಡೆಸುವಂತೆ ಕೋರಿ ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಝ್ ಶರೀಫ್ ಮಾಡಿರುವ ಮನವಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ತಳ್ಳಿಹಾಕಿದೆ.

ಇಬ್ಬರು ಸದಸ್ಯರ ನ್ಯಾಯಪೀಠವೊಂದು ಈ ಕಿರು ತೀರ್ಪು ನೀಡಿದೆ. ವಿವರವಾದ ತೀರ್ಪನ್ನು ಬಳಿಕ ನೀಡಲಾಗುವುದು.

ಪನಾಮ ಪೇಪರ್ ಹಗರಣದ ಬಳಿಕ, ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ನ್ಯಾಶನಲ್ ಅಕೌಂಟಬಿಲಿಟಿ ಬ್ಯೂರೊ (ಎನ್‌ಎಬಿ) ಸೆಪ್ಟಂಬರ್ 8ರಂದು ಶರೀಫ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಇಸ್ಲಾಮಾಬಾದ್‌ನ ಅಕೌಂಟಬಿಲಿಟಿ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನು ದಾಖಲಿಸಿತ್ತು.

ತನ್ನ ಪ್ರಕರಣಗಳ ವಿಚಾರಣೆಯನ್ನು ಒಟ್ಟಾಗಿ ನಡೆಸಬೇಕು ಎಂದು ಕೋರಿ 67 ವರ್ಷದ ಶರೀಫ್ ಸಲ್ಲಿಸಿದ ಮನವಿಯನ್ನು ಇಸ್ಲಾಮಾಬಾದ್‌ನ ಅಕೌಂಟಬಿಲಿಟಿ ನ್ಯಾಯಾಲಯದ ನವೆಂಬರ್ 8ರಂದು ತಿರಸ್ಕರಿಸಿತ್ತು. ಇದನ್ನು ಅವರು ಇಸ್ಲಾಮಾಬಾದ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News