ಬೃಹತ್ ಪ್ರಾದೇಶಿಕ ಮಾರುಕಟ್ಟೆ: ಭಾರತಕ್ಕೆ ಚೀನಾ ಒತ್ತಾಯ

Update: 2017-12-05 17:06 GMT

ಬೀಜಿಂಗ್, ಡಿ. 5: ಭಾರತ ಮತ್ತು ಚೀನಾಗಳಲ್ಲಿ ಲಭ್ಯವಿರುವ ಅನುಕೂಲತೆಗಳ ಸದುಪಯೋಗ ಪಡೆದುಕೊಳ್ಳಲು ಹಾಗೂ ನೂತನ ಅನುಕೂಲತೆಗಳನ್ನು ಸೃಷ್ಟಿಸಲು ಉಭಯ ದೇಶಗಳ ಭಾಗೀದಾರಿಕೆಯಲ್ಲಿ ‘ಬೃಹತ್ ಪ್ರಾದೇಶಿಕ ಮಾರುಕಟ್ಟೆ’ಯೊಂದನ್ನು ಸ್ಥಾಪಿಸುವ ಇಚ್ಛೆಯನ್ನು ಚೀನಾ ಇಂದು ವ್ಯಕ್ತಪಡಿಸಿದೆ.

‘‘ಚೀನಾ ಮತ್ತು ಭಾರತಗಳು ಭಿನ್ನ ರಾಜಕೀಯ ವ್ಯವಸ್ಥೆಗಳನ್ನು ಹೊಂದಿವೆಯಾದರೂ, ಮಾರುಕಟ್ಟೆ ಆರ್ಥಿಕತೆಯನ್ನು ಅನುಸರಿಸುತ್ತಿವೆ. ತಲಾ 100 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ದೇಶಗಳು ಇವು. ಇಲ್ಲಿ ಮಾರುಕಟ್ಟೆ ಬೇಡಿಕೆಯನ್ನು ಸೃಷ್ಟಿಸುವ ಅಗಾಧ ಅವಕಾಶವಿದೆ’’ ಎಂದು ಚೀನಾ ಸಚಿವ ಸಂಪುಟದ ಅಭಿವೃದ್ಧಿ ಸಂಶೋಧನಾ ಕೇಂದ್ರ (ಡಿಆರ್‌ಸಿ)ದ ಅಧ್ಯಕ್ಷ ಲಿ ವೀ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News