ಬ್ರಿಟನ್ ಪ್ರಧಾನಿ ತೆರೇಸಾ ಮೇ ಹತ್ಯಾ ಸಂಚು ವಿಫಲ?: ‘ಸ್ಕೈ ನ್ಯೂಸ್’ ವರದಿ

Update: 2017-12-06 17:07 GMT

ಲಂಡನ್, ಡಿ. 6: ಬ್ರಿಟಿಶ್ ಪ್ರಧಾನಿ ತೆರೇಸಾ ಮೇಯವರನ್ನು ಕೊಲ್ಲುವ ಪಿತೂರಿಯೊಂದನ್ನು ಪೊಲೀಸರು ವಿಫಲಗೊಳಿಸಿದ್ದಾರೆ ಎಂಬುದಾಗಿ ‘ಸ್ಕೈ ನ್ಯೂಸ್’ ಮಂಗಳವಾರ ವರದಿ ಮಾಡಿದೆ.

ಬ್ರಿಟನ್ ಪ್ರಧಾನಿ ನಿವಾಸವಿರುವ ಡೌನಿಂಗ್ ಸ್ಟ್ರೀಟ್‌ನಲ್ಲಿ ಬಾಂಬೊಂದನ್ನು ಸಿಡಿಸುವುದು ಹಾಗೂ ಆಗ ಉಂಟಾಗುವ ಗೊಂದಲದ ಲಾಭವನ್ನು ಪಡೆದು ಪ್ರಧಾನಿ ಮೇಲೆ ದಾಳಿ ನಡೆಸಿ ಹತ್ಯೆ ಮಾಡುವ ಯೋಜನೆಯೊಂದನ್ನು ರೂಪಿಸಲಾಗಿತ್ತು ಎಂಬುದಾಗಿ ಪೊಲೀಸರು ಭಾವಿಸಿದ್ದಾರೆ ಎಂದು ವರದಿ ಹೇಳಿದೆ.

ಕಳೆದ 12 ತಿಂಗಳ ಅವಧಿಯಲ್ಲಿ ಬ್ರಿಟನ್ ಇಂಥ ಒಂಬತ್ತು ಸಂಚುಗಳನ್ನು ವಿಫಲಗೊಳಿಸಿದೆ ಎಂದು ಮಂಗಳವಾರ ತೆರೇಸಾ ಮೇಯ ವಕ್ತಾರರೊಬ್ಬರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News