‘ಟೈಮ್’ ವರ್ಷದ ವ್ಯಕ್ತಿಯಾಗಿ ‘ಸೈಲೆನ್ಸ್ ಬ್ರೇಕರ್ಸ್’

Update: 2017-12-06 17:31 GMT

ನ್ಯೂಯಾರ್ಕ್, ಡಿ. 6: ತಮಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ತಿರುಗಿ ಬಿದ್ದ ಅಮೆರಿಕನ್ನರನ್ನು 2017ರ ‘ವರ್ಷದ ವ್ಯಕ್ತಿ’ಯಾಗಿ ‘ಟೈಮ್’ ಮ್ಯಾಗಝಿನ್ ಬುಧವಾರ ಘೋಷಿಸಿದೆ ಹಾಗೂ ಅವರನ್ನು ‘ಮೌನ ಮುರಿದವರು’ ಎಂದು ಬಣ್ಣಿಸಿದೆ.

 ಹಾಲಿವುಡ್ ನಿರ್ಮಾಪಕ ಹಾರ್ವೆ ವೀನ್ಸ್‌ಟೀನ್ ವಿರುದ್ಧ ಹಲವಾರು ನಟಿಯರು ಲೈಂಗಿಕ ಕಿರುಕುಳದ ಆರೋಪ ಮಾಡುವುದರೊಂದಿಗೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ಮೌನ ಮುರಿಯುವ ಅಭಿಯಾನ ಆರಂಭವಾಯಿತು.

ಈ ಪಟ್ಟಿಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿತೀಯ ಸ್ಥಾನಿಯಾದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

“ನಾನು ಕೇವಲ ‘ಸಂಭಾವ್ಯ’ ‘ವರ್ಷದ ವ್ಯಕ್ತಿ’ ಎಂಬುದಾಗಿ ಟೈಮ್ ಮ್ಯಾಗಝಿನ್ ಹೇಳಿದ್ದರಿಂದ ಸಂದರ್ಶನ ಮತ್ತು ಫೋಟೊಶೂಟನ್ನು ನೀಡಲಿಲ್ಲ” ಎಂಬುದಾಗಿ ಟ್ರಂಪ್ ನವೆಂಬರ್‌ನಲ್ಲಿ ಹೇಳಿದ ಹಿನ್ನೆಲೆಯಲ್ಲಿ 2017ರ ‘ವರ್ಷದ ವ್ಯಕ್ತಿ’ ಬಗ್ಗೆ ಕುತೂಹಲವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News