ಉ. ಕೊರಿಯದ ಕ್ಷಿಪಣಿಗಳಿಂದ ವಿಮಾನಗಳಿಗೆ ಬೆದರಿಕೆ

Update: 2017-12-06 17:44 GMT

ಸಿಯೋಲ್, ಡಿ. 6: ಕಳೆದ ವಾರ ಉತ್ತರ ಕೊರಿಯ ನಡೆಸಿದ ಕ್ಷಿಪಣಿ ಹಾರಾಟವು ನಾಗರಿಕ ವಿಮಾನಗಳ ಸುರಕ್ಷತೆ ಬಗ್ಗೆ ಗಂಭೀರ ಕಳವಳ ಹುಟ್ಟುಹಾಕಿದೆ ಎಂದು ವಿಮಾನಯಾನ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.

ಆ ಕ್ಷಿಪಣಿ ಹಾರಾಟವನ್ನು ಹಲವಾರು ವಿಮಾನಗಳ ಸಿಬ್ಬಂದಿ ನೋಡಿದ್ದಾರೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ ಉತ್ತರ ಕೊರಿಯ ಈ ವರ್ಷ ಹಲವಾರು ಕ್ಷಿಪಣಿಗಳ ಪರೀಕ್ಷಾ ಹಾರಾಟ ನಡೆಸಿದೆ.

‘‘ಉತ್ತರ ಕೊರಿಯದ ಕ್ಷಿಪಣಿಯದ್ದೆಂದು ಹೇಳಲಾದ ಬೆಂಕಿಯ ಉಂಡೆಯನ್ನು ನೋಡಿರುವುದಾಗಿ ಸಾನ್‌ಫ್ರಾನ್ಸಿಸ್ಕೊದಿಂದ ಇಂಚಿಯನ್‌ಗೆ ಹಾರುತ್ತಿದ್ದ ಕೊರಿಯನ್ ಏರ್ ವಿಮಾನದ ಸಿಬ್ಬಂದಿ ಜಪಾನ್‌ನ ನಿಯಂತ್ರಕರಿಗೆ ವರದಿ ಮಾಡಿದ್ದಾರೆ’’ ಎಂದು ಕೊರಿಯನ್ ಏರ್ ವಕ್ತಾರರೊಬ್ಬರು ಎಎಫ್‌ಪಿಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News