ಸತ್ಯ-ಮಿಥ್ಯೆಗಳ ನಡುವೆ ಇತಿಹಾಸ

Update: 2017-12-07 06:49 GMT

ಯಾವುದೇ ರಜಪೂತ ಅಥವಾ ಸುಲ್ತಾನರ ಕಥೆಗಳಲ್ಲಿ, ಕಥಾನಕಗಳಲ್ಲಿ ರಾಣಿ ಪದ್ಮಿನಿಯ ಉಲ್ಲೇಖವಿಲ್ಲ ಮತ್ತು ಅವಳು ಬದುಕಿದ್ದಳೆಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆ ಇಲ್ಲ. ಅಲ್ಲಾವುದ್ದೀನ್ ಖಿಲ್ಜಿ ರಾಜಸ್ಥಾನ ಮತ್ತು ಗುಜರಾತಿನ ಬಹುಭಾಗವನ್ನು ಜಯಿಸಿದ್ದ ಮತ್ತು ಮಂಗೋಲಿಯನ್ನರ ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದ. ಆದರೆ ಅವನ ಬಗ್ಗೆ ಇತಿಹಾಸದಲ್ಲಿ ಉಳಿದಿರುವುದು ಅವನೊಬ್ಬ ಕಾಮುಕ, ಮೋಸಗಾರ, ದೊಣ್ಣೆನಾಯಕ ಎಂಬ ಚಿತ್ರ ಮಾತ್ರ.

2014ರಲ್ಲಿ ಭಾರತದಿಂದ ಹೊರಹೊಮ್ಮಿದ ಅತ್ಯಂತ ದೊಡ್ಡ ಸುದ್ದಿ ಎಂದರೆ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ ಗೆಲುವು. ಮೋದಿ ನೇತೃತ್ವದಲ್ಲಿ ಬಿಜೆಪಿಯು, ಹಲವರು ಅಸಾಧ್ಯವೆಂದು ಪರಿಗಣಿಸಿದ್ದನ್ನು ಸಾಧಿಸಿ ತೋರಿಸಿತು: ಅದು ಲೋಕ ಸಭೆಯಲ್ಲಿ ಸಂಪೂರ್ಣ ಬಹುಮತ ಪಡೆಯಿತು. ಮೋದಿ ಮತ್ತು ಅವರ ಅನೇಕ ಸಹೋದ್ಯೋಗಿಗಳು, ತರ್ಕ ರಹಿತ ಹಿಂದುತ್ವ ಇತಿಹಾಸವೆಂದು ಕರೆಯುವ ವಿಚಾರಗಳಿಗೆ ಆತುಕೊಂಡಿದ್ದಾರೆ. ಇತಿಹಾಸವನ್ನು ತಪ್ಪಾಗಿ ಓದುವ ಬಿಜೆಪಿಯು ಮುಖ್ಯ ಪ್ರವಾಹದಲ್ಲಿ ಹರಿದಾಡುವ ಇತಿಹಾಸದ ರೂಪಾಂತರಗಳನ್ನು ಕೂಡ ಬೆಂಬಲಿಸುತ್ತದೆೆ. ಇಲ್ಲಿ ಹಿಂದು ಮುಂದು ಮಾಡಿದ ಕಾಲದ ಕ್ರಮದಲ್ಲಿ, ನಾನು ಭಾರತದಲ್ಲಿ ಮುಖ್ಯ ಪ್ರವಾಹ ಒಪ್ಪಿಕೊಂಡಿರುವ 5 ಪ್ರಮುಖ ಮಿಥ್ಯೆ (ಮಿತ್ಸ್)ಗಳನ್ನು ಪಟ್ಟಿ ಮಾಡಿದ್ದೇನೆ.

♦ ರಾಣಿ ಪದ್ಮಿನಿಯ ಮಿಥ್ಯೆ

 ಕ್ರಿ.ಶ. 1303ರಲ್ಲಿ ದಿಲ್ಲಿಯ ತುರ್ಕಿ ಸುಲ್ತಾನ ಅಲ್ಲಾವುದ್ದೀನ್‌ಖಿಲ್ಜಿಯು ದೀರ್ಘ ಕಾಲದ ಒಂದು ಮುತ್ತಿಗೆಯ ಬಳಿಕ ಚಿತ್ತೋರ್‌ಗಡವನ್ನು ವಶಪಡಿಸಿಕೊಂಡ. 237 ವರ್ಷಗಳ ಬಳಿಕ ಮಲಿಕ್ ಮುಹಮ್ಮದ್ ಜೈಸಿ ಎಂಬ ಅವಧ್‌ನ ಒಬ್ಬ ಕವಿ ಚಿತ್ತೋರ್‌ನ ಪತನದ ಕುರಿತು ‘ಪದ್ಮಾವತ್’ ಎಂಬ ಶೀರ್ಷಿಕೆಯ ಒಂದು ಕತೆಯನ್ನು ಬರೆದ. ಮುಂದಿನ ಕಾಲಾವಧಿಗಳಲ್ಲಿ, ಅಕ್ಬರನ ಆಳ್ವಿಕೆಯ ಅವಧಿಯ ಇತಿಹಾಸಕಾರ ಅಬುಲ್ ಫಝಲ್‌ನಂತಹ ಇತಿಹಾಸಕಾರರು ಜೈಸಿಯ ಕತೆಯನ್ನು ಕೈಗೆತ್ತಿಕೊಂಡರು.

ಪದ್ಮಿನಿಯ ಕತೆ ಲೇಖಕನಿಂದ ಲೇಖಕನಿಗೆ ಒಂದೊಂದು ರೂಪ ಪಡೆಯುತ್ತದೆ. ಆದರೆ ಕತೆಯ ಮೂಲ ಎಳೆಗಳು ಒಂದೇ ತೆರನಾಗಿವೆ: ಮೇವಾರ್‌ನ ರಾಜ ರತನ್‌ಸಿಂಗ್‌ನಿಂದ ಗಡಿಪಾರು ಮಾಡಲ್ಪಟ್ಟ ಒಬ್ಬ ಮಾಂತ್ರಿಕ ಅಲ್ಲಾವುದ್ದೀನ್ ಖಿಲ್ಜಿಯ ಆಸ್ಥಾನದಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿ ಆತ ಸುಲ್ತಾನನ ಕಿವಿಯಲ್ಲಿ ರತನ್‌ಸಿಂಗ್‌ನ ಪತ್ನಿ ಪದ್ಮಿನಿಯ ಸೌಂದರ್ಯದ ಕುರಿತಾದ ರೋಚಕ ಕತೆಗಳನ್ನು ಹೇಳುತ್ತಾನೆ. ಅಲ್ಲಾವುದ್ದೀನ್ ಅದು ಹೇಗೋ ಅವಳನ್ನು ನೋಡುವುದರಲ್ಲಿ ಯಶಸ್ವಿಯಾಗಿ ಅವಳ ಸೌಂದರ್ಯ ಕಂಡು ಮೂಕ ವಿಸ್ಮಿತನಾಗುತ್ತಾನೆ. ಅವನು ಕುಟಿಲೋಪಾಯದಿಂದ ರತನ್‌ಸಿಂಗ್‌ನನ್ನು ಸೆರೆಹಿಡಿಯುತ್ತಾನೆ. ತನಗೆ ಪದ್ಮಿನಿಯನ್ನು ಕೊಟ್ಟರೆ ಅವನನ್ನು ತಾನು ಬಿಡುಗಡೆ ಮಾಡುವುದಾಗಿ ಹೇಳುತ್ತಾನೆ. ರಜಪೂತರು ತಮ್ಮ ದೊರೆಯನ್ನು ಬಂಧ ಮುಕ್ತಗೊಳಿಸಲು ಕುಟಿಲತಂತ್ರವೊಂದನ್ನು ಹೆಣೆಯುತ್ತಾರೆ. ಆದರೆ ಅವರು ತಮ್ಮ ತಂತ್ರವನ್ನು ಕಾರ್ಯರೂಪಕ್ಕಿಳಿಸುವ ಪ್ರಕ್ರಿಯೆಯಲ್ಲಿ ಅನೇಕ ಯೋಧರು ಸಾಯುತ್ತಾರೆ. ಅಲ್ಲಾವುದ್ದೀನ್ ದುರ್ಬಲಗೊಂಡ ರಜಪೂತ ಸೇನೆಯನ್ನು ಸೋಲಿಸುತ್ತಾನೆ. ಆಗ ಅವನಿಗೆ ಪದ್ಮಿನಿ ಮತ್ತು ಇತರ ಎಲ್ಲಾ ಸ್ತ್ರೀಯರು ಚಿತ್ತೋರ್ ಕೋಟೆಯೊಳಗೆ ಔಹಾರ್ (ಆತ್ಮಹತ್ಯೆ) ಮಾಡಿಕೊಂಡಿದ್ದಾರೆಂದು ಗೊತ್ತಾಗುತ್ತದೆ.

ಯಾವುದೇ ರಜಪೂತ ಅಥವಾ ಸುಲ್ತಾನರ ಕಥೆಗಳಲ್ಲಿ, ಕಥಾನಕಗಳಲ್ಲಿ ರಾಣಿ ಪದ್ಮಿನಿಯ ಉಲ್ಲೇಖವಿಲ್ಲ ಮತ್ತು ಅವಳು ಬದುಕಿದ್ದಳೆಂಬುದಕ್ಕೆ ಯಾವುದೇ ಐತಿಹಾಸಿಕ ಪುರಾವೆ ಇಲ್ಲ. ಅಲ್ಲಾವುದ್ದೀನ್ ಖಿಲ್ಜಿ ರಾಜಸ್ಥಾನ ಮತ್ತು ಗುಜರಾತಿನ ಬಹುಭಾಗವನ್ನು ಜಯಿಸಿದ್ದ ಮತ್ತು ಮಂಗೋಲಿಯನ್ನರ ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದ. ಆದರೆ ಅವನ ಬಗ್ಗೆ ಇತಿಹಾಸದಲ್ಲಿ ಉಳಿದಿರುವುದು ಅವನೊಬ್ಬ ಕಾಮುಕ, ಮೋಸಗಾರ, ದೊಣ್ಣೆನಾಯಕ(ಟೈರಂಟ್) ಎಂಬ ಚಿತ್ರ ಮಾತ್ರ.

♦ ಪೃಥ್ವಿರಾಜ್ ಚೌಹಾನ್ ಕುರಿತ ಮಿಥ್ಯೆ

ಪೃಥ್ವಿರಾಜ ಚೌಹಾನ್ 12ನೇ ಶತಮಾನದಲ್ಲಿ ದಿಲ್ಲಿಯ ದೊರೆಯಾಗಿದ್ದ. 1191ರಲ್ಲಿ ಅಫ್ಘಾನಿನ ದೊರೆ ಮುಹಮ್ಮದ್ ಘೋರಿ, ಪೃಥ್ವಿರಾಜನ ಭಟಿಂಡಾ ಕೋಟೆಯನ್ನು ವಶಪಡಿಸಿಕೊಂಡಾಗ ಪೃಥ್ವಿರಾಜ ಗಡಿಯ ಕಡೆಗೆ ಸಾಗಿ, ಘೋರಿಯ ಸೇನೆಯನ್ನು ಸೋಲಿಸಿದ. ಮುಂದಿನ ವರ್ಷ ಮತ್ತಷ್ಟು ಬಲಿಷ್ಠ ಸೇನೆಯೊಂದಿಗೆ ಮರಳಿ ಬಂದ ಘೋರಿ ಪೃಥ್ವಿರಾಜನನ್ನು ಸೋಲಿಸಿ ಅವನನ್ನು ಕೊಲ್ಲಿಸಿದ.

  ಪೃಥ್ವಿರಾಜನ ಆಸ್ಥಾನದ ಕವಿ ಚಾಂದ್ ಬರ್‌ದಾ ಮತ್ತು ಅವನ ನಂತರದ ಅನೇಕ ಲೇಖಕರ ಕೈಯಲ್ಲಿ ಕಥಾನಕ ಬದಲಾಗುತ್ತದೆ: ಘೋರಿಯನ್ನು ಸೋಲಿಸಿದ ಪೃಥ್ವಿರಾಜ ಅವನನ್ನು ಉದಾರವಾಗಿ ಬಿಡುಗಡೆ ಮಾಡಿದ. ಆದರೆ ಅವನು ಮರಳಿ ಬಂದು, ರಾತ್ರಿವೇಳೆ ದಾಳಿ ಮಾಡಿ, ರಜಪೂತ ದೊರೆಯನ್ನು ಸೆರೆಹಿಡಿದು ಅವನ ಕಣ್ಣುಗಳನ್ನು ಕಿತ್ತ. ಆದರೆ ಪೃಥ್ವಿರಾಜನ ಗೆಳೆಯ ಘೋರಿಗೆ ಪೃಥ್ವಿರಾಜನ ಬಿಲ್ಲು ವಿದ್ಯೆ ಪ್ರದರ್ಶನಕ್ಕೆ ಅವಕಾಶ ಕೊಡುವಂತೆ ಹೇಳಿದ. ಹೀಗೆ ತನ್ನ ಬಿಲ್ಲು ವಿದ್ಯೆಯ ಜಾಣ್ಮೆ ತೋರುವಾಗ, ಅವನಿಗೆ ಅವನ ಗೆಳೆಯ ಕೊಟ್ಟ ಸೂಚನೆಯಂತೆ ಸುಲ್ತಾನನ ದಿಕ್ಕಿಗೆ ಬಾಣ ಹೂಡಿ ಅವನನ್ನು ಕೊಂದ. ಬಳಿಕ ಆತ್ಮಹತ್ಯಾ ಒಪ್ಪಂದವೊಂದರಂತೆ ಆತ ತನ್ನ ಬದುಕನ್ನೇ ಕೊನೆಗೊಳಿಸಿಕೊಂಡ.

ಅಮರ ಚಿತ್ರ ಕಥೆ ಓದುತ್ತ ಇದನ್ನು ಐತಿಹಾಸಿಕ ಸತ್ಯವೆಂದು ನಂಬುತ್ತ ನಾನು ಬೆಳೆದೆ. ಆದರೆ ಭಾರತೀಯ ಇತಿಹಾಸದ ಈ ದೋಷಪೂರ್ಣ ಪುನರ್‌ವಾಚನದ ಬಗ್ಗೆ ಯಾವುದೇ ಭಾರತೀಯ ನ್ಯಾಯಾಲಯದಲ್ಲಿ ಮೊಕದ್ದಮೆಗಳು ದಾಖಲಾಗಿಲ್ಲ

♦ ಅಹಿಂಸಾವಾದಿ ಭಾರತ ಎಂಬ ಮಿಥ್ಯೆ

‘‘... ನಮ್ಮ ಧರ್ಮ ಇನ್ಯಾವುದೇ ಇತರ ಧರ್ಮಕ್ಕಿಂತ ಹೆಚ್ಚು ಸತ್ಯ ಯಾಕೆಂದರೆ ಅದು ಯಾವತ್ತೂ ಯಾರನ್ನೂ (ದಾಳಿಮಾಡಿ) ಗೆದ್ದಿಲ್ಲ, ಯಾಕೆಂದರೆ ಅದು ಯಾವತ್ತೂ ನೆತ್ತರು ಹರಿಸಿಲ್ಲ.’’ ಶಾಂತಿಯುತ ಭಾರತವೆಂಬ ಮಿಥ್ಯೆಯನ್ನು ಪ್ರತಿಪಾದಿಸಿದ ಸ್ವಾಮಿ ವಿವೇಕಾನಂದರು ಬಹಳ ಸಂದರ್ಭಗಳಲ್ಲಿ ‘ಧರ್ಮ’ (ರಿಲಿಜನ್), ‘ರಾಷ್ಟ್ರ’ ಮತ್ತು ‘ಜನಾಂಗ’ (ರೇಸ್) ಎಂಬ ಪದಗಳನ್ನು ಒಂದಕ್ಕೊಂದು ವಿನಿಮಯ/ಬದಲು ಮಾಡಿಕೊಳ್ಳಬಹುದಾದ ಶಬ್ದಗಳಾಗಿ ಬಳಸಿದ್ದರು. ವ್ಯಂಗ್ಯವೆಂದರೆ, ಭಾರತದ ರಾಜರು (ಹಿಂದೂ ರಾಜರು) ಪುನಃ ಪುನಃ ಆಗಾಗ, ದಾಳಿಮಾಡಿದ ದೇಶಗಳಲ್ಲಿ ನೆರೆಯ ಶ್ರೀಲಂಕಾ ಕೂಡ ಒಂದು. ಹಿಂದೂ ದೊರೆಗಳು ನೆರೆಯ ದೇಶಗಳ ಮೇಲೆ ದಾಳಿ ಮಾಡಲು ಎಂದೂ ಹಿಂದುಮುಂದುನೋಡಿಲ್ಲ.

♦ ಸಂಸ್ಕೃತದ ಮಿಥ್ಯೆ

ಸಂಸ್ಕೃತವು ಅದ್ಭುತವಾದ ಶ್ರೇಷ್ಠವಾದ ಕಾವ್ಯ, ತತ್ವಶಾಸ್ತ್ರೀಯ ಗ್ರಂಥಗಳು ಪ್ರಾರ್ಥನೆಗಳು, ನಾಟಕಗಳು ಮತ್ತು ಗದ್ಯಗಳನ್ನು ವಿಶ್ವಕ್ಕೆ ನೀಡಿದೆ. ಅದು ನಿಸ್ಸಂಶಯವಾಗಿ ವಿಶ್ವದಲ್ಲಿ ಸಾಂಸ್ಕೃತಿಕವಾಗಿ ಅತ್ಯಂತ ಮುಖ್ಯವಾದ ಭಾಷೆಗಳಲ್ಲಿ ಒಂದು, ಆದರೆ ಅದು ಏನು ಅಲ್ಲ ಎಂದರೆ, ಅದು ‘ಎಲ್ಲಾ ಭಾಷೆಗಳ ತಾಯಿ’ ಅಲ್ಲ. ಅಥವಾ ಇಂಡೋ-ಯುರೋಪಿಯನ್ ಭಾಷೆಗಳ ಕುಟುಂಬವೆಂದು ತಿಳಿಯಲಾಗಿರುವ, ಅದು ಸೇರಿರುವ ಈ ಕುಟುಂಬದ ಬುನಾದಿ ಭಾಷೆ ಕೂಡ ಅಲ್ಲ.

ಈ ಭಾಷಾ ಕುಟುಂಬವನ್ನು ಕಂಡುಹಿಡಿದ ಮೊದಲ ವ್ಯಕ್ತಿ, ವಿಲಿಯಂ ಜೋನ್ಸ್, 1786ರಲ್ಲಿ, ಸಂಸ್ಕೃತ, ಲ್ಯಾಟಿನ್ ಮತ್ತು ಗ್ರೀಕ್ ‘‘ಯಾವುದೋ ಒಂದು ಸಾಮಾನ್ಯ ಮೂಲದಿಂದ ಬಂದವುಗಳು; ಆ ಮೂಲ ಈಗ ಅಸ್ತಿತ್ವದಲ್ಲಿ ಉಳಿದಿಲ್ಲ’’ ಎಂದು ಹೇಳಿದ. ಅವನು ಹೇಳಿದ್ದು ಸಂಪೂರ್ಣ ಸರಿ. ಆ ಮೂಲವನ್ನು ಈಗ ‘‘ಪ್ರೊಟೊ-ಇಂಡೋ-ಯೂರೋಪಿಯನ್’’ ಎಂದು ಕರೆಯಲಾಗುತ್ತದೆ...

♦ 5,000 ವರ್ಷಗಳಷ್ಟು ಹಳೆಯದಾದ ನಾಗರಿಕತೆ ಎಂಬ ಮಿಥ್ಯೆ

ನಮ್ಮ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಇತ್ತೀಚೆಗೆ ಭಗವದ್ಗೀತೆಯ 5,151ನೇ ವಾರ್ಷಿಕ ಆಚರಣೆ ಸಮಾರಂಭದ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾಲನಿರ್ಣಯ ಅತಾರ್ಕಿಕ. ಆದರೆ ಹಿಂದೂ ಸಂಸ್ಕೃತಿಗೆ ಸಂಬಂಧಿಸಿದ ಎಲ್ಲವನ್ನೂ ವಿವರಿಸುವಾಗ 5,000 ವರ್ಷ ಎಂದೇ ಹೇಳಲಾಗುತ್ತದೆ. ವೇದಗಳು? ಕನಿಷ್ಠ 5,000 ವರ್ಷಗಳಷ್ಟು ಹಳೆಯವು. ಆಯುರ್ವೇದ? 5,000 ವರ್ಷ ಹಿಂದಿನದು. ಯೋಗ? 5,000 ವರ್ಷ ಅಥವಾ ಇದಕ್ಕೂ ಹೆಚ್ಚು ಹಿಂದಿನದು. ಭಾರತೀಯ ಕಲೆ? ಗಣಿತ, ವ್ಯೋಮ ವಿಜ್ಞಾನ, ವ್ಯಾಕರಣ, ನೀವು ಯಾವುದನ್ನೇ ಹೆಸರಿಸಿ; ಅದೆಲ್ಲವೂ 5,000 ವರ್ಷಗಳಷ್ಟು ಹಳೆಯದು, ಪ್ರಾಚೀನವಾದುದು.

 ಸತ್ಯ ಹೇಳಬೇಕೆಂದರೆ, ಭಾರತದಲ್ಲಿ 5,000 ವರ್ಷ ಹಳೆಯದು ಬಹುಪಾಲು ಯಾವುದೂ ಅಲ್ಲ. ಹರಪ್ಪ ನಾಗರಿಕತೆಯ ಕಾಲವೇ ಕ್ರಿ.ಪೂ. 2500. ನಮ್ಮಲ್ಲಿರುವ ಅತ್ಯಂತ ಆದಿಯಾದ ಸಾಹಿತ್ಯವೇ ಸುಮಾರು 3,500 ವರ್ಷಗಳ ಹಿಂದೆ ರಚನೆಯಾದದ್ದು, ಕ್ರಿ.ಪೂ. 500ಕ್ಕಿಂತ ಹಳೆಯದಾದ ಕಲೆ ತೀರ ಕಡಿಮೆ. ಭಾರತದ ಪ್ರಮುಖ ಗಣಿತಶಾಸ್ತ್ರದ ಸಾಧನೆಗಳು ಬಹುಪಾಲು ಮಧ್ಯಯುಗದಲ್ಲಿ ನಡೆದ ಸಾಧನೆಗಳು. ಇಂದಿನ ಸಮಕಾಲೀನ ಯೋಗದಲ್ಲಿ ಬಳಸಲಾಗುತ್ತಿರುವ ಆಸನಗಳು, ಬಹುಪಾಲು ಸಂದರ್ಭಗಳಲ್ಲಿ ಸಚಿತ್ರವಾದ ಅಥವಾ ವಿವರಣಾತ್ಮಕವಾದ ಇತಿಹಾಸವನ್ನು ಹೊಂದಿರುವುದಿದ್ದರೆ ಈ ಇತಿಹಾಸ ಒಂದು ಶತಮಾನಕ್ಕಿಂತ ಸ್ವಲ್ಪ ಹಳೆಯದು.

5,000 ವರ್ಷವೆಂಬ ಸುಳ್ಳು ಸಂಖ್ಯೆಯು, ಭಾರತ ಒಂದೊಮ್ಮೆ ಸುವರ್ಣ ಯುಗವನ್ನು ಕಂಡಿತ್ತು; ಅದನ್ನು ಕಲಿಯುಗ, ಮುಸ್ಲಿಂ ದಾಳಿಕೋರರು, ಬ್ರಿಟಿಷ್ ಸಾಮ್ರಾಜ್ಯವಾದಿಗಳು ಹಾಳುಗೆಡವಿದರು ಎಂದು ಹೇಳುವ ಜನರ ಕೈಯಲ್ಲಿ ಏನೇನೋ ಆಟವಾಡುತ್ತಿರುತ್ತದೆ.

Writer - ಗಿರೀಶ್ ಶಹಾನೆ

contributor

Editor - ಗಿರೀಶ್ ಶಹಾನೆ

contributor

Similar News

ಜಗದಗಲ
ಜಗ ದಗಲ