ಐನ್‌ಸ್ಟೀನ್ ತನ್ನ ಗೆಳೆಯನಿಗೆ ಬರೆದ ಪತ್ರ ಹರಾಜಾದ ಮೊತ್ತ ಎಷ್ಟು ಗೊತ್ತೇ?

Update: 2017-12-07 16:42 GMT

ಲಂಡನ್, ಡಿ. 7: ತನ್ನ ಸಾಪೇಕ್ಷ ಸಿದ್ಧಾಂತ (ತಿಯರಿ ಆಫ್ ರೆಲೆಟಿವಿಟಿ)ದ ಯಶಸ್ಸಿನ ಬಗ್ಗೆ ಹರ್ಷ ವ್ಯಕ್ತಪಡಿಸಿ ಆತ್ಮೀಯ ಮಿತ್ರ ಮೈಕಲ್ ಬೆಸೊ ಅವರಿಗೆ ಜರ್ಮನ್ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಬರೆದ ಪೋಸ್ಟ್ ಕಾರ್ಡ್ ಪತ್ರವೊಂದು ಹರಾಜಿನಲ್ಲಿ 1,06,250 ಡಾಲರ್ (68.60 ಲಕ್ಷ ರೂಪಾಯಿ)ಗೆ ಮಾರಾಟವಾಗಿದೆ.

ಐನ್‌ಸ್ಟೀನ್‌ರ ಸಹಿ ಹೊಂದಿರುವ ಪತ್ರದಲ್ಲಿ ಬರ್ಲಿನ್ ಅಂಚೆಕಚೇರಿಯ ಮುದ್ರೆಯಿದೆ ಹಾಗೂ ಅದು ಡಿಸೆಂಬರ್ 10, 1915ರ ದಿನಾಂಕವನ್ನು ಹೊಂದಿದೆ.

‘‘ಅತ್ಯಂತ ದಿಟ್ಟ ಕನಸುಗಳು ಈಗ ಈಡೇರಿವೆ’’ ಎಂಬುದಾಗಿ ಐನ್‌ಸ್ಟೀನ್ ತನ್ನ ಪತ್ರದಲ್ಲಿ ಬರೆದಿದ್ದಾರೆ.

ಐನ್‌ಸ್ಟೀನ್ ಆ ವರ್ಷದ ನವೆಂಬರ್ 4ರಿಂದ 25ರ ಅವಧಿಯಲ್ಲಿ ತನ್ನ ‘ಸಾಮಾನ್ಯ ಸಾಪೇಕ್ಷ ಸಿದ್ಧಾಂತ’ (ಜನರಲ್ ತಿಯರಿ ಆಫ್ ರೆಲಟಿವಿಟಿ) ಮುಖ್ಯಾಂಶಗಳನ್ನು ನಾಲ್ಕು ಮೆಜಿಸ್ಟೀರಿಯಲ್ ಪ್ರಬಂಧಗಳ ರೂಪದಲ್ಲಿ ಪ್ರಶ್ಯನ್ ಅಕಾಡಮಿ ಆಫ್ ಸಯನ್ಸಸ್‌ಗೆ ಸಲ್ಲಿಸಿದ್ದರು ಎಂದು ಬ್ರಿಟಿಶ್ ಹರಾಜು ಸಂಸ್ಥೆ ಕ್ರಿಸ್ಟೀಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News