12 ರಫೇಲ್ ಯುದ್ಧ ವಿಮಾನ ಖರೀದಿಗೆ ಫ್ರಾನ್ಸ್ ಜೊತೆ ಕತರ್ ಒಪ್ಪಂದ

Update: 2017-12-07 16:47 GMT

ದೋಹಾ (ಕತರ್), ಡಿ. 7: ತನ್ನ ಅರಬ್ ನೆರೆದೇಶಗಳಿಂದ ರಾಜತಾಂತ್ರಿಕ ಮತ್ತು ಆರ್ಥಿಕ ದಿಗ್ಬಂಧನಕ್ಕೊಳಗಾಗಿರುವ ಕತರ್, 12 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಗುರುವಾರ ಘೋಷಿಸಿದೆ.

ಫ್ರಾನ್ಸ್ ಅಧ್ಯಕ್ಷರ ದೋಹಾ ಭೇಟಿಯ ವೇಳೆ ಈ 1.3 ಬಿಲಿಯ ಡಾಲರ್ (ಸುಮಾರು 8,390 ಕೋಟಿ ರೂಪಾಯಿ) ಒಪ್ಪಂದವನ್ನು ಪ್ರಕಟಿಸಲಾಗಿದೆ.

ಇನ್ನೂ 36 ಯುದ್ಧ ವಿಮಾನಗಳನ್ನು ಖರೀದಿಸುವ ಅವಕಾಶ ಈ ಯೋಜನೆಯಲ್ಲಿರುವುದು ವಿಶೇಷವಾಗಿದೆ.

 ಕತರ್ ಈಗಾಗಲೇ 24 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು 2015ರಲ್ಲಿ ಫ್ರಾನ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಹಾಲಿ ಒಪ್ಪಂದ ಅದಕ್ಕೆ ಹೆಚ್ಚುವರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News