ನೇಪಾಳ: ಮತದಾನ ಮುಕ್ತಾಯ; 2 ಕಡೆ ಬಾಂಬ್ ಸ್ಫೋಟ

Update: 2017-12-07 16:51 GMT

ಕಠ್ಮಂಡು, ಡಿ. 7: ನೇಪಾಳದ ಮಹಾ ಚುನಾವಣೆಯ ಎರಡನೆ ಹಂತದಲ್ಲಿ ಗುರುವಾರ ದೇಶದ 45 ಜಿಲ್ಲೆಗಳ ಕೋಟ್ಯಂತರ ಮತದಾರರು ಮತದಾನ ಮಾಡಿದರು.

2015ರಲ್ಲಿ ದೇಶದ ಸಂವಿಧಾನ ಜಾರಿಗೆ ಬಂದ ಬಳಿಕ ಹಿಮಾಲಯ ದೇಶದಲ್ಲಿ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

ರಾಷ್ಟ್ರೀಯ ಮತ್ತು ಪ್ರಾಂತೀಯ ಅಸೆಂಬ್ಲಿಗಳಿಗೆ ನಡೆಯುತ್ತಿರುವ ಚುನಾವಣೆಯು ಬಹುತೇಕ ಎರಡು ದಶಕಗಳ ಮಧ್ಯಾಂತರ ಸರಕಾರವನ್ನು ಕೊನೆಗೊಳಿಸಲಿದೆ.

ರಾಜಧಾನಿ ಕಠ್ಮಂಡುವಿನಿಂದ ಸುಮಾರು 400 ಕಿ.ಮೀ. ದೂರದಲ್ಲಿರುವ ಎರಡು ಸ್ಥಳಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸಿವೆ. ಆದರೆ, ಅದರಲ್ಲಿ ಯಾರಿಗೂ ಗಾಯವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News