ಚುನಾವಣೆಯ ಇನ್ನೊಂದು ಮುಖ

Update: 2017-12-08 18:37 GMT

ಈ ದೊಂಬಿಗಳು ಇತರ ದೊಂಬಿಗಳ ಹಾಗಲ್ಲ. ಇವುಗಳು ಸಾಮಾನ್ಯ ಜೀವನದ ಮೇಲೆ ಮತ್ತು ಅಹ್ಮದಾಬಾದ್‌ನ ಮನೋಭಾವದ ಮೇಲೆ, ಮೆಂಟಾಲಿಟಿಯ ಮೇಲೆ ಕೂಡ ಪರಿಣಾಮ ಬೀರಿದವು. ಒಂದು ಅರ್ಥದಲ್ಲಿ ಅದೊಂದು ನಾಗರಿಕ ಮತ್ತು ಖಭೌತಿಕ (ಕಾಸ್ಮಿಕ್) ದುರಂತ, ಅನಾಹುತ; ಅದರ ಬಗ್ಗೆ ಮಾತಾಡುವುದು ಕೂಡ ರಾಜಕೀಯವಾಗಿ ಸರಿಯಲ್ಲ ಎಂದು ಪರಿಗಣಿಸಲಾಗಿರುವ ಮಹಾ ದುರಂತ.

ನಾಗರಿಕ ಸರಕಾರವನ್ನು, ಸಮಾಜವನ್ನು ಜನರು ನೆನಪಿನಲ್ಲಿಟ್ಟುಕೊಂಡಿರುವ ರೀತಿ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಪ್ರಕ್ರಿಯೆಯನ್ನು ಜನರು ತಮ್ಮ ಕಣ್ಣಮುಂದೆ ತಂದುಕೊಳ್ಳುವ ವಿಧಾನವೇ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಕೋಮುದೊಂಬಿಗಳನ್ನು ಸಂಪೂರ್ಣವಾಗಿ ಅಳಿಸಿಹಾಕುತ್ತದೆ. ಗುಮಾಸ್ತರ/ಕಚೇರಿಯ ಮನಸ್ಥಿತಿಯವರು ಆ ಪ್ರಕರಣವನ್ನು ಮುಗಿದು ಹೋದ ಕತೆ, ಕಡತವನ್ನು ಮುಚ್ಚಿ ಹಾಕಿಯಾಗಿದೆ ಎನ್ನಬಹುದು. ವಿಶೇಷ ತನಿಖಾದಳದ ವರದಿಯು, (ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ) ಪ್ರಧಾನಿ ನರೇಂದ್ರ ಮೋದಿಯವರನ್ನು ದೋಷಮುಕ್ತಗೊಳಿಸಿದೆ ಎನ್ನಬಹುದು. ಅದೇನಿದ್ದರೂ, ನಾವೀಗ ಒಬ್ಬ ವ್ಯಕ್ತಿಯ ಅಪರಾಧದ ಬಗ್ಗೆ ಅಪರಾಧ ಪ್ರಜ್ಞೆಯ ಬಗ್ಗೆ ಮಾತಾಡುತ್ತಿಲ್ಲ ಅನ್ನಿಸುತ್ತದೆ; ಬದಲಾಗಿ ನಾವೀಗ ಚರ್ಚಿಸುತ್ತಿರುವುದು ಹಿಂಸಾಕೃತ್ಯವೊಂದರ ಬಳಿಕದ ಪರಿಣಾಮದ ಬಗ್ಗೆ ಮತ್ತು ಅದು ಹೇಗೆ ನಮ್ಮ ನೆನಪಿನ ಪದರಗಳೊಳಗೆ ಸೇರಿ ಫಿಲ್ಟರ್ ಆಗುತ್ತದೆ; ಅದು ಹೇಗೆ ನಮ್ಮ ದಿನನಿತ್ಯದ ವರ್ತನೆಯ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ.

ನಮ್ಮ ಪತ್ರಿಕೆಗಳ ಸಂಪಾದಕೀಯಗಳನ್ನು ಓದುತ್ತಿದ್ದರೆ, ದೊಂಬಿಗಳು ನಡೆದೇ ಇಲ್ಲ ಅನ್ನಿಸುತ್ತದೆ ಅಥವಾ ಘಟನೆಗಳನ್ನು ಉನ್ನತೀಕರಿಸುವ ಅಥವಾ ಮಾಂತ್ರಿಕವಾದ ಯಾವುದೋ ಒಂದು ಕ್ರಿಯೆ ನಡೆದಿರುವ ಹಾಗೆ ಜನ ಬರೆಯುತ್ತಿದ್ದಾರೆ. ಆದರೆ ಈ ದೊಂಬಿಗಳು ಇತರ ದೊಂಬಿಗಳ ಹಾಗಲ್ಲ. ಇವುಗಳು ಸಾಮಾನ್ಯ ಜೀವನದ ಮೇಲೆ ಮತ್ತು ಅಹ್ಮದಾಬಾದ್‌ನ ಮನೋಭಾವದ ಮೇಲೆ, ಮೆಂಟಾಲಿಟಿಯ ಮೇಲೆ ಕೂಡ ಪರಿಣಾಮ ಬೀರಿದವು. ಒಂದು ಅರ್ಥದಲ್ಲಿ ಅದೊಂದು ನಾಗರಿಕ ಮತ್ತು ಖಭೌತಿಕ (ಕಾಸ್ಮಿಕ್) ದುರಂತ, ಅನಾಹುತ; ಅದರ ಬಗ್ಗೆ ಮಾತಾಡುವುದು ಕೂಡ ರಾಜಕೀಯವಾಗಿ ಸರಿಯಲ್ಲ ಎಂದು ಪರಿಗಣಿಸಲಾಗಿರುವ ಮಹಾ ದುರಂತ.

ಮನಕರಗುವ ಕತೆಗಳು

 ಗುಜರಾತ್ ಗಲಭೆಗಳ ನಂತರದ ಕೆಲವು ಸಣ್ಣ ಘಟನೆಗಳನ್ನು, ಕತೆಗಳನ್ನು ಹೇಳಿದರೆ ತಾನು ಯಾವುದರ ಬಗ್ಗೆ ಚಿಂತಿತನಾಗಿದ್ದೇನೆ ಎನ್ನುವುದು ನಿಮಗೆ ತಿಳಿದೀತು. ಮೊದಲ ಘಟನೆ, ತನ್ನ ಮಕ್ಕಳೊಂದಿಗೆ ನಾನು ಮಾತಾಡಬೇಕೆಂದು ಹೇಳಿದ, ಶಿಕ್ಷಕಿಯಾಗಿರುವ ಒಬ್ಬಳು ತಾಯಿ ಹೇಳಿದ್ದು. ತನ್ನ ಮಕ್ಕಳನ್ನು ಬಾಧಿಸುತ್ತಿದ್ದ ಕೆಲವು ಹೊಸ ರೂಪಕಗಳ ಹಾಗೂ ಮನೋಧರ್ಮಗಳ ಬಗ್ಗೆ ಆ ತಾಯಿ ಆತಂಕಿತರಾಗಿದ್ದರು. ಎರಡು ಮಕ್ಕಳ ತಾಯಿ ಆಕೆ. ಹಿರಿಯವಳು 12ರ ಹರೆಯದ ಹುಡುಗಿ ಮತ್ತು ಕಿರಿಯವ 10 ವರ್ಷದ ಹುಡುಗ, ಅವಳ ತಮ್ಮ. ಪ್ರತಿಬಾರಿ ಅವರು ಜಗಳಾಡಿಕೊಂಡಾಗ, ಹುಡುಗ ಹುಡುಗಿಗೆ, ‘‘ನೀನು ನಾನು ಹೇಳಿದ್ದನ್ನು ಕೇಳದಿದ್ದರೆ, ಹಿಂದೂಗಳು ಮುಸ್ಲಿಮರಿಗೆ ಏನು ಮಾಡಿದರೋ ಅದನ್ನೇ ನಾನು ನಿನಗೆ ಮಾಡುತ್ತೇನೆ.’’ ಎನ್ನುತ್ತಾನೆ, ಎಂದು ಆ ತಾಯಿ ನನ್ನ ಬಳಿ ಹೇಳಿದರು. ಅತ್ಯಾಚಾರ ಮತ್ತು ಕೊಲೆಯ ಸಹಜ ಸ್ಥಿತಿ, ಅದೆಲ್ಲ ಸಹಜ ಎನ್ನುವ ಮನಸ್ಥಿತಿ ಭಿನ್ನವಾದ ಒಂದು ಬಣ್ಣವನ್ನೇ ಪಡೆದು ಬಿಡುತ್ತದೆ. ಅಂತಹ ಹಿಂಸೆಯಿಂದ ಒಂದು ಸಮಾಜ ಸುಲಭವಾಗಿ ಚೇತರಿಸಿಕೊಳ್ಳುತ್ತದೆಯೇ? ಎಂಬ ಅನುಮಾನ ಮೂಡುತ್ತದೆ. ನನ್ನನ್ನು ಅಹ್ಮದಾಬಾದ್ ಸುತ್ತ ಕರೆದೊಯ್ಯುತ್ತಿದ್ದ ಒಬ್ಬ ಸಭ್ಯ ಮನುಷ್ಯ, 30ರ ಆಸುಪಾಸಿನ ಮತ್ತು ತುಂಬ ಮಾಹಿತಿ ನೀಡುವ ಹಾಗೂ ಉಪಕಾರಿಯಾದ ಒಬ್ಬ ಕಾರು ಚಾಲಕ ನೆನಪಾಗುತ್ತಾನೆ.

 ದೊಂಬಿ ಪೀಡಿತ ಪ್ರದೇಶಗಳ ಸುತ್ತ ನಮ್ಮನ್ನು ಆತ ಕರೆದುಕೊಂಡು ಹೋಗುತ್ತಿದ್ದ. ಗಲಭೆ ಸಂತ್ರಸ್ತರ ಹಾಗೂ ಬದುಕಿ ಉಳಿದವರ ಜತೆ ನಾವು ನಡೆಸುತ್ತಿದ್ದ ಸಂದರ್ಶನಗಳ ಕುರಿತ ನಮ್ಮ ಚರ್ಚೆಗಳನ್ನು ಆಸಕ್ತಿಯಿಂದ ಆತ ಆಲಿಸುತ್ತಿದ್ದ. ಕೆಲವು ವಾರಗಳ ಬಳಿಕ ನಮ್ಮನ್ನು ಎಲ್ಲಿಸ್‌ಬ್ರಿಡ್ಜ್ ದಾಟಿ ಮುಂದೆ ಕರೆದುಕೊಂಡು ಹೋಗುತ್ತಿದ್ದ ಆತ, ಮಧ್ಯಹಾದಿಯಲ್ಲಿ ಒಮ್ಮಿಂದೊಮ್ಮೆಗೆ ಕಾರು ನಿಲ್ಲಿಸಿ ಹೇಳಿದ, ‘‘ನಾನು ನಿಮಗೆ ಒಂದು ವಿಷಯ ಹೇಳಬೇಕು. ಅವರಲ್ಲಿ ನಾನೂ ಒಬ್ಬನಾಗಿದ್ದೆ. ದೊಂಬಿಗಳು ನಡೆಯುವಾಗ ನಾನೂ ಗುಂಪಿನೊಂದಿಗೆ ಸೇರಿಕೊಂಡೆ. ನಾನೇನು ಮಾಡಬೇಕು ಈಗ?’’ ನನಗೆ ಆಘಾತವಾಯಿತು. ಆದರೂ ಆ ಮನುಷ್ಯನ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡೆ. ಆ ಕ್ಷಣ ನನಗರ್ಥವಾಯಿತು. 2002ರ ಬಳಿಕ ಗುಜರಾತ್ ಯಾವತ್ತೂ ಸಹಜ ಸ್ಥಿತಿಗೆ ಮರಳಲಿಲ್ಲ. ಬದಲಾಗಿ, ಸಂತ್ರಸ್ತ ತನಗಾದ ನಷ್ಟದ ಪ್ರಜ್ಞೆಯನ್ನ್ನು ತ್ಯಜಿಸಲೇಬೇಕಾಗಿ ಬಂದಿದೆ. ಗುಜರಾತ್ ಸಾಮಾನ್ಯ ಸ್ಥಿತಿಗೆ ಮರಳುವ ಒಂದು ಕೃತಕ ಪ್ರಕ್ರಿಯೆಯನ್ನು ಅನುಸರಿಸಿದೆ.

ಅಲ್ಲಿ ಕಾಣಿಸುವ ಸಹಜ ಸ್ಥಿತಿಯ ತೋರಿಕೆ, ಮುಖವಾಡವು 2002ರ ದೊಂಬಿ ಸಾಮಾನ್ಯ ದೊಂಬಿಯಂತಹ, ದೊಂಬಿಗಳು ಕೊನೆಗೊಂಡು ಸ್ವಲ್ಪ ಸಮಯದ ಬಳಿಕ ಸಂತ್ರಸ್ತರು ತಮ್ಮ ಮನೆಗಳಿಗೆ ಮರಳುವಂತಹ ದೊಂಬಿಯಲ್ಲ ಎಂಬುದನ್ನೂ ಹೇಳುತ್ತದೆ. ದೊಂಬಿ ಸಂತ್ರಸ್ತರಾದ ಸಾವಿರಾರು ಮಂದಿ ಅಲ್ಲಿ ಮತ್ತೆ ತಮ್ಮ ಮನೆಗಳಿಗೆ ಮರಳಿ ಹೋಗಲಿಲ್ಲ. ಅತಿರೇಕಕ್ಕೆ ಹೋಗಿದ್ದ ದೊಂಬಿಗಳು ಒಂದು ಜನಸಮುದಾಯವನ್ನು ತುಳಿಯುವ, ವೌನವಾಗಿಸುವ ಬದಲಾಗಿ ಆ ಸಮುದಾಯವನ್ನು ನಿರ್ಮೂಲಗೊಳಿಸಲು ನಡೆಸಿದ ಪ್ರಯತ್ನಗಳಾಗಿದ್ದವು.

ದೊಂಬಿ ಸಂತ್ರಸ್ತರ ಮತ್ತು ಪ್ರತ್ಯಕ್ಷದರ್ಶಿಗಳ- ಇಬ್ಬರ ಕಥಾನಕಗಳನ್ನೂ ಹತ್ತಿಕ್ಕುವ ಪ್ರಯತ್ನ ನಡೆದಿದೆ. ಕಹಿ ನೆನಪುಗಳನ್ನು ಮರೆಯಬೇಕೆಂದರೂ ಒಂದು ಗುಂಪು ಅದನ್ನು ಮರೆಯಲು ಬಿಡುತ್ತಿಲ್ಲ.

ಮುಂದೇನು?

ಮರೆಯಬಾರದು, ಮರೆತು ಮುಂದೆ ಸಾಗಬಾರದೆಂದು ನಾನು ಹೇಳುತ್ತಿಲ್ಲ. ಆದರೆ ನೆನಪು ಸವೆಯುತ್ತದೆ, ಆ್ಯಸಿಡ್‌ನ ಹಾಗೆ ಕೊರೆಯುತ್ತದೆ. ತೋರಿಕೆಯ ನಾಮಾನ್ಯ ಸ್ಥಿತಿಯ ಹಿಂದೆ ಒಂದು ಭಯವೂ ಇರುತ್ತದೆ.

ಅದೇನಿದ್ದರೂ ‘ಗುಜರಾತ್ ಮಾದರಿ ಅಭಿವೃದ್ಧಿ’ ಈಗ ಸವಕಲು ಆಗಿರುವುದರಿಂದ ಬಿಜೆಪಿಯು ಸುಲಭವಾಗಿ ಕೋಮುವಾದಿ ಕಾರ್ಡನ್ನು ಮರೆಯುವುದಿಲ್ಲ. ಅದು ತನ್ನ ಹಳೆಯ ಆಟಗಳನ್ನು ಆಡಲು ಆರಂಭಿಸಬಹುದು. ‘ಮಂದಿರ್-ಮಂಡಲ್’ ಸುತ್ತ ನಡೆಸಿದ ಕಸರತ್ತುಗಳು ಈಗ ಕಳೆಗುಂದಿರುವುದರಿಂದ ಗುಜರಾತ್‌ನಲ್ಲಿ ದಲಿತ ಪ್ರಶ್ನೆ, ಪಾಟಿದಾರ್ ಪ್ರಶ್ನೆ ಮುಖ್ಯ ಪ್ರಶ್ನೆಯಾಗಬಹುದು.

ಕಾಂಗ್ರೆಸ್‌ನ ಪರಿತ್ಯಾಗ

ಇನ್ನಷ್ಟು ಗಂಭೀರ ಸ್ವರೂಪದ ಎರಡನೆಯ ಒಂದು ಸೋಲು ಲೂಡ ಕಾಣಿಸುತ್ತಿದೆ. ಅದು ಸೆಕ್ಯುಲರ್ ಎಂಬ ಪದದ ಸೋಲು. ಒಂದು ಕಾಲದಲ್ಲಿ ಈ ಪದದ ಬಲದಿಂದಲೇ ವಿಜೃಂಭಿಸಿದ ಕಾಂಗ್ರೆಸ್ ಈಗ ಈ ಪದವನ್ನು ಬಳಸಲು ಕೂಡ ಹೆದರುತ್ತಿದೆ. ಇದು ರಾಜಕಾರಣದ ಮೇಲೆ ಬಿಜೆಪಿ ಬೀರಿರುವ ಪರಿಣಾಮವನ್ನು ಸೂಚಿಸುತ್ತದೆ.

ಇಂದಿನ ರಾಜಕೀಯ ಕಥಾನಕದ ಅಂತಿಮ ಭಾಗವೆಂದರೆ, ರಾಜಕಾರಣದ ಸುತ್ತ ಇರುವ ಭಯ ಮತ್ತು ವೌನ. ಇದು ಎಷ್ಟರ ಮಟ್ಟಿಗೆ ಎಂದರೆ ಬಿಜೆಪಿ ಬಹುಮತದ ಪಕ್ಷವಷ್ಟೇ ಅಲ್ಲ, 2019ಕ್ಕೆ ಅದು ಅನಿವಾರ್ಯ ಅನಿಸುತ್ತಿದೆ.

ಕೃಪೆ: ದಿ ಹಿಂದೂ

Writer - ಶಿವ್ ವಿಶ್ವನಾಥನ್

contributor

Editor - ಶಿವ್ ವಿಶ್ವನಾಥನ್

contributor

Similar News

ಜಗದಗಲ
ಜಗ ದಗಲ