ನಿಮ್ಮ ಆಧಾರ್ ಎಲ್ಲಿ ಬಳಕೆಯಾಗಿದೆ ಎನ್ನುವುದನ್ನು ತಿಳಿದುಕೊಳ್ಳಬೇಕೇ? ಅದಕ್ಕಾಗಿ ಇಲ್ಲಿದೆ ಮಾರ್ಗ

Update: 2017-12-09 11:19 GMT

ನಿಮ್ಮ ಆಧಾರ್ ಸಂಖ್ಯೆಯನ್ನು ಎಲ್ಲಿ ಮತ್ತು ಯಾವಾಗ ದೃಢೀಕರಣಕ್ಕೆ ಬಳಸಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು ಎನ್ನುವುದು ನಿಮಗೆ ಗೊತ್ತಿದೆಯೇ? ವಿವಿಧ ಸೇವೆಗಳನ್ನು ಪಡೆದುಕೊಳ್ಳುವಾಗ ದೃಢೀಕರಣಕ್ಕಾಗಿ ಆಧಾರ್ ಬಳಕೆಯಾಗುತ್ತಿರು ವುದರಿಂದ ಅದರ ದುರುಪಯೋಗವಾಗಬಹುದು ಎಂಬ ಆತಂಕವೂ ನಿಮ್ಮನ್ನು ಕಾಡುತ್ತಿರಬಹುದು. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ಜಾಲತಾಣವು ನಿಮ್ಮ ಆಧಾರ್ ಕಾರ್ಡ್‌ನ್ನು ಎಲ್ಲಿ ಮತ್ತು ಯಾವಾಗ ಬಳಸಲಾಗಿದೆ ಎನ್ನುವುದನ್ನು ಪರಿಶೀಲಿಸುವ ಅವಕಾಶವನ್ನು ಕಲ್ಪಿಸಿದೆ.ಇದಕ್ಕಾಗಿ ಅನುಸರಿಸಬೇಕಾದ ಹೆಜ್ಜೆಗಳು ಇಲ್ಲಿವೆ.

1) ಆಧಾರ ದೃಢೀಕರಣ ಹಿಸ್ಟರಿ ಪೇಜ್ https://resident.uidai.gov.in/notification-aadhaar ಗೆ ಲಾಗಿನ್ ಆಗಿ.

2) ನಿಮ್ಮ ಆಧಾರ್ ಸಂಖ್ಯೆ ಮತ್ತು ಸೆಕ್ಯುರಿಟಿ ಕೋಡ್ ಅನ್ನು ದಾಖಲಿಸಿ.

3) ‘ಜನರೇಟ್ ಒಟಿಪಿ’ಯ ಮೇಲೆ ಕ್ಲಿಕ್ಕಿಸಿ

4) ಈಗ ನಿಮ್ಮ ಮೊಬೈಲ್ ಫೋನ್‌ಗೆ ಒಟಿಪಿ(ಒಂದು ಬಾರಿಯ ಪಾಸ್‌ವರ್ಡ್) ಬರುತ್ತದೆ. ಯುಐಡಿಎಐ ವೆಬ್‌ಸೈಟ್‌ನಲ್ಲಿ ನಿಮ್ಮ ಸಂಖ್ಯೆಯನ್ನು ದೃಢಪಡಿಸಿಕೊಂಡಿದ್ದೀರಿ ಎನ್ನುವುದು ಖಚಿತವಿರಲಿ.

5) ಈಗ ಬೇಕಾದ ಮಾಹಿತಿಯ ಅವಧಿ ಮತ್ತು ವಹಿವಾಟುಗಳ ಸಂಖ್ಯೆಯ ಆಯ್ಕೆ ನಿಮ್ಮೆದುರಿಗಿರುತ್ತದೆ. ನಿಮ್ಮ ಒಟಿಪಿಯನ್ನು ದಾಖಲಿಸಿ ‘ಸಬ್‌ಮಿಟ್’ ಮೇಲೆ ಕ್ಲಿಕ್ ಮಾಡಿ.

6) ಈಗ ನೀವು ಆಯ್ಕೆ ಮಾಡಿದ ಅವಧಿಯಲ್ಲಿನ ಎಲ್ಲ ಆಧಾರ್ ದೃಢೀಕರಣ ಕೋರಿಕೆಗಳ ದಿನಾಂಕಗಳು, ಸಮಯ ಮತ್ತು ವಿಧ ನಿಮ್ಮ ಕಣ್ಣೆದುರಿಗೆ ಮೂಡಿ ಬರುತ್ತದೆ. ಆದರೆ ಈ ಪೇಜ್ ಯಾರು ಕೋರಿಕೆಗಳನ್ನು ಸಲ್ಲಿಸಿದ್ದರು ಎನ್ನುವುದನ್ನು ತೋರಿಸುವುದಿಲ್ಲ.

ಈ ವಿವರಗಳಲ್ಲಿ ನಿಮಗೆ ಶಂಕಾಸ್ಪದವಾದ ಏನಾದರೂ ಕಂಡು ಬಂದರೆ ನೀವು ಆನ್‌ಲೈನ್‌ನಲ್ಲಿ ನಿಮ್ಮ ಆಧಾರ್ ಮಾಹಿತಿಯನ್ನು ಲಾಕ್ ಮಾಡಬಹುದು ಮತ್ತು ನೀವು ಅದನ್ನು ಬಳಸಲು ಬಯಸಿದಾಗ ಅನ್‌ಲಾಕ್ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News