ಕ್ಲೀನ್ ಸ್ವೀಪ್ ಮಾಡಿದರೆ ಭಾರತ ನಂ.1

Update: 2017-12-09 18:17 GMT

ದುಬೈ,ಡಿ.9: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲಿ ಭಾರತ 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದರೆ ಭಾರತ ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆಯಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅಗ್ರ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಏಕದಿನ ಕ್ರಿಕೆಟ್‌ನಲ್ಲಿ 120 ಪಾಯಿಂಟ್ಸ್ ಗಳನ್ನು ಹೊಂದಿದೆ. ದಕ್ಷಿಣ ಆಫ್ರಿಕ ತಂಡಕ್ಕಿಂತ ಒಂದು ಪಾಯಿಂಟ್ ಹಿಂದಿದೆ. ಧರ್ಮಶಾಲಾದಲ್ಲಿ ಡಿ.10ರಂದು ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಜಯ ಗಳಿಸಿದರೆ 1-0 ಮುನ್ನಡೆಯೊಂದಿಗೆ ದಕ್ಷಿಣ ಆಫ್ರಿಕದೊಂದಿಗೆ ಪಾಯಿಂಟ್ಸ್‌ನಲ್ಲಿ ಸಮಬಲ ಸಾಧಿಸಲಿದೆ. ಮೊಹಾಲಿ ಮತ್ತು ವಿಶಾಖಪಟ್ಟಣದಲ್ಲಿ ಕ್ರಮವಾಗಿ ಡಿ.13 ಮತ್ತು ಡಿ.17ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ ಭಾರತ ನಂ.1 ಸ್ಥಾನ ತಲುಪಲು ಸಾಧ್ಯ.

ಶ್ರೀಲಂಕಾ ಪ್ರಸ್ತುತ ನಂ.8ನೇ ಸ್ಥಾನದಲ್ಲಿದೆ. ಏಕದಿನ ಸರಣಿಯಲ್ಲಿ 2-1 ಜಯ ಸಾಧಿಸಿದರೆ ಭಾರತದ 1 ಪಾಯಿಂಟ್ ಕಳೆದುಕೊಳ್ಳಲಿದೆ. ಭಾರತ ಟೆಸ್ಟ್ ಸರಣಿಯಲ್ಲಿ ಲಂಕಾ ವಿರುದ್ಧ 1-0 ಸರಣಿ ಜಯ ದಾಖಲಿಸಿತ್ತು.

ಶ್ರೀಲಂಕಾ 0-3 ಅಂತರದಲ್ಲಿ ಸರಣಿ ಸೋಲು ಅನುಭವಿಸಿದರೆ ಲಂಕಾ ಅದೇ ಸ್ಥಾನದಲ್ಲಿ ಮುಂದುವರಿಯಲಿದೆ. ಆದರೆ 3-0 ಜಯ ಗಳಿಸಿದರೆ ಶ್ರೀಲಂಕಾದ ಪಾಯಿಂಟ್ಸ್ 83ಕ್ಕೆ ಏರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News