ಮೂಲಭೂತವಾದಿ ರಾಜಕೀಯದ ಕಾಲದಲ್ಲಿ ಪ್ರೀತಿಗೆ ಬೆಲೆ ಇದೆಯೇ?

Update: 2017-12-09 18:28 GMT

ಸ್ವಾತಂತ್ರ ಚಳವಳಿಯ ವೇಳೆ ಗಾಂಧಿ ಮತ್ತು ಅಂಬೇಡ್ಕರ್‌ರಂತಹ ನಾಯಕರು ಜಾತಿ ವಿನಾಶ ಮತ್ತು ಕೋಮು ಸಾಮರಸ್ಯದಲ್ಲಿ, ಅಂತರ್ಜಾತಿಯ ಮತ್ತು ಅಂತರ್ಧರ್ಮೀಯ ವಿವಾಹಗಳು ವಹಿಸುವ ಪಾತ್ರಗಳ ಬಗ್ಗೆ ಮಾತಾಡಿದ್ದರು, ಆದರೆ ಈಗ ಕೋಮು ವಿಭಜನೆಯ ಕಾರ್ಮೋಡಗಳು ದಟ್ಟೈಸುತ್ತಿರುವಾಗ, ಪಿತೃ ಪ್ರಧಾನ ವಿಚಾರಗಳು, ಚಿಂತನೆಗಳು ಮತ್ತು ಮಹಿಳೆಯರ ಬದುಕನ್ನು ನಿಯಂತ್ರಿಸುವ ಪ್ರಯತ್ನಗಳು ಇನ್ನಷ್ಟು ಬಲಿಷ್ಠವಾಗುತ್ತಿವೆ.

ಕೋಮುವಾದಿ ಧ್ರುವೀಕರಣದ ರಾಜಕೀಯವು ಹಲವು ಅಸ್ಮಿತೆ (ಐಡೆಂಟಿಟಿ) ವಿಷಯಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕ ರಿಸುತ್ತಿದೆ. ಅವುಗಳಲ್ಲಿ ಒಂದು: ಲವ್ ಜಿಹಾದ್. ಲವ್ ಜಿಹಾದ್ ಹೆಸರಿನಲ್ಲಿ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಪುರುಷನೊಬ್ಬನನ್ನು ಮದುವೆಯಾದ ಹಿಂದೂ ಹುಡುಗಿಯನ್ನು ದಾಳಿಯ ಗುರಿಯಾಗಿ ಮಾಡಲಾಗುತ್ತಿದೆ. ಮತ್ತು ಪ್ರಕರಣವನ್ನು ಕಾನೂನು ರೀತಿ ತಮಗೆ ಬೇಕಾದಂತೆ ತಿರುಚಿ, ಅವಳನ್ನು ಅವಳ ಪೋಷಕರ ಬಳಿಗೆ ಮರಳಿ ಕಳುಹಿಸುವಂತೆ ಅಥವಾ ‘ಮತಾಂತರ ವಿರೋಧಿ ಚಿಕಿತ್ಸಾಲಯ’ ಗಳಿಗೆ ಕಳುಹಿಸುವಂತೆ ಮಾಡಲಾಗುತ್ತದೆ. ಹಾದಿಯಾ ಮತ್ತು ಲವ್‌ಜಿಹಾದ್ ಎಂಬ ಕೂಗಿನ ಬಗ್ಗೆ ಜನರಿಗೆ ಈಗಾಗಲೇ ತಿಳಿದಿದೆ.

ಆದರೆ ಶ್ವೇತಾಳಂತಹ ಹುಡುಗಿಯರ ಪ್ರಕರಣಗಳು ಬಹಳ ಮಂದಿಯ ಗಮನಕ್ಕೆ ಬಂದಿಲ್ಲ. ಶ್ವೇತಾ ಎಂಬ ಹಿಂದೂ ಮಹಿಳೆಯೊ ಬ್ಬಳು ಒಂದು ಯೋಗ ಕೇಂದ್ರದಲ್ಲಿ ಬಂಧಿಯಂತೆ ಇದಾರೆ. ಕ್ರಿಶ್ಚಿಯನ್ ವ್ಯಕ್ತಿಯೊಬ್ಬನ ಜತೆ ವಿವಾಹವಾಗಬೇಕೆನ್ನುವ ಅವರಿಗೆ ಅಲ್ಲಿ ಆ ಮದುವೆಯ ಪ್ರಸ್ತಾಪವನ್ನು ತ್ಯಜಿಸುವಂತೆ ಈಗ ಒತ್ತಡ ತರಲಾಗುತ್ತಿದೆ. ಶ್ವೇತಾರ ಪ್ರಕಾರ ಯೋಗ ಕೇಂದ್ರವು ಕ್ರಿಶ್ಚಿಯನ್ ಅಥವಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ಒಪ್ಪಿಕೊಂಡು, ಹಿಂದೂ ಅಲ್ಲದವರನ್ನು ವಿವಾಹ ವಾಗಿರುವ ಮಹಿಳೆಯರನ್ನು ಹಿಂದೂ ಧರ್ಮಕ್ಕೆ ಪುನರ್ ಮತಾಂತ ರಿಸುವ ‘ಮತಾಂತರ ಚಿಕಿತ್ಸಾಲಯ’.

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮದುವೆಯಾಗಿರುವ ಮುಗ್ಧೆ ಎನ್ನಲಾದ ಅಖಿಲಾ(ಹಾದಿಯಾ)ರ ಬಗ್ಗೆ ಮಾಧ್ಯಮಗಳಲ್ಲಿ ಬಹಳ ಸುದ್ದಿ ಬರುತ್ತಿದೆ. ಆ ವ್ಯಕ್ತಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ಕಾರ್ಯಕರ್ತ.

ಪ್ರಕರಣವನ್ನು ಪಿಎಫ್‌ಐ ಜೊತೆಗೆ ಜೋಡಿಸುವುದರ ಮತ್ತು ಮುಸ್ಲಿಂ ವರನಿಗೆ ಸಿರಿಯಾದ ಭಯೋತ್ಪಾದಕರೊಂದಿಗೆ ಸಂಪರ್ಕ ಇದೆ ಎನ್ನುವುದರ ಹಿಂದಿನ ಒಟ್ಟು ಉದ್ದೇಶ: ಇಡೀ ಪ್ರಕರಣಕ್ಕೆ ಒಂದು ವಿಭಿನ್ನ ತಿರುವು ನೀಡುವುದು. ಇದು ಎನ್‌ಐಎಗೆ ಪ್ರಕರಣದಲ್ಲಿ ಪ್ರವೇಶ ಮಾಡಲು ಒಂದು ನೆವನವಾಗಿತ್ತು, ಒಂದು ನೆಪವಾಗಿತ್ತು. ಅಖಿಲಾಳ ಮತಾಂತರವು, ಹಿಂದೂ ಹುಡುಗಿಯರನ್ನು ಮರುಳು ಮಾಡಿ ಪ್ರೀತಿಸಿ, ಅವರನ್ನು ಇಸ್ಲಾಂಗೆ ಮತಾಂತರಿಸಿ ಅವರನ್ನು ಭಯೋತ್ಪಾದಕರ ಗುಂಪಿನೊಳಕ್ಕೆ ಸೇರಿಸಿಕೊಳ್ಳುವ ಒಂದು ಉಪಾಯ. ಇದೆಲ್ಲ ಅಧಿಕಾರ ದಲ್ಲಿರುವವರ ಸಮೃದ್ಧವಾದ ಕಲ್ಪನೆಯನ್ನು ತೋರಿಸುತ್ತದೆ.

ಹಾದಿಯಾರ ಪ್ರಕರಣದಲ್ಲಿ, ನ್ಯಾಯಾಲಯವು, 24ರ ಹರೆಯದ ಒಬ್ಬಳು ಹುಡುಗಿ ತುಂಬ ಕೋಮಲ ಮನಸ್ಸಿನವಳು ಮತ್ತು ಸುಲಭ ವಾಗಿ ಮೋಸಕ್ಕೆ ಮರುಳಾಗುವವಳು ಎನ್ನುವ ಹಂತಕ್ಕೆ ಹೆೋಯಿತು.

ಭಾರತದಲ್ಲಿ ಮತದಾನದ ವಯಸ್ಸು 18 ವರ್ಷಗಳು, ಈ ವಯಸ್ಸಿನ ನಂತರ ವ್ಯಕ್ತಿಯು ಪ್ರೌಢನಾಗುತ್ತಾನೆ/ಳೆ, ತನ್ನ ನಿರ್ಧಾರಗಳಿಗೆ ಹಾಗೂ ಕ್ರಿಯೆಗಳಿಗೆ ಜವಾಬ್ದಾರನಾಗುತ್ತಾನೆ(ಳೆ) ಎಂಬುದು ನ್ಯಾಯಾಧೀಶರಿಗೆ ಮರೆತುಹೋಗಿರಬೇಕು. ಹಾದಿಯಾ, ತನ್ನ ಮತಾಂತರ ಮತ್ತು ಮುಸ್ಲಿಮ ನೊಬ್ಬನೊಂದಿಗೆ ತನ್ನ ವಿವಾಹ ಸಂಪೂ ರ್ಣವಾಗಿ ತಾನೇ ಒಪ್ಪಿ ಆದ ವಿವಾಹವೆಂದು ನ್ಯಾಯಾಲಯದಲ್ಲಿ ಹೇಳಿದ್ದರು. ಆ ಬಳಿಕ ನ್ಯಾಯಾಲಯವು ಅವಳನ್ನು ಹಿಯರಿಂಗ್‌ಗಳಿಗೆ ಕರೆಯಲಿಲ್ಲ. ಇತ್ತೀಚಿನ ನ್ಯಾಯಾಲಯ ಕೂಡ ಅವರು ನ್ಯಾಯಾಲ ಯದಲ್ಲಿ ಹಾಜರಾಗಿ ವೈಯಕ್ತಿಕ ವಾಗಿ ತನ್ನ ಹೇಳಿಕೆಗಳನ್ನು ನೀಡುವ ಮೊದಲು ಆಕೆಗೆ ಒಂದು ತಿಂಗಳ ಕಾಲಾವಕಾಶ ನೀಡಿತು. ಈಗಿನ ದಿನಗಳು ಆಶ್ಚರ್ಯ ಹುಟ್ಟಿಸುವ ದಿನಗಳು.ವಯಸ್ಸಿಗೆ ಬಂದ, ಓರ್ವ ಹೋಮಿಯೋಪಥಿ ವಿದ್ಯಾರ್ಥಿನಿ ತನ್ನ ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲಷ್ಟು ಪ್ರೌಢಳು, ಆದರೆ ಅವರನ್ನು ಗಂಡನಿಂದ ದೂರಮಾಡಿ ಪೋಷಕರ ಕಸ್ಟಡಿಯಲ್ಲಿ ಇಡು ವುದು ನೈತಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ಯೋಚಿಸುವುದು ಕೂಡ ಅಸಾಧ್ಯ.

 ಶ್ವೇತಾರ ಪ್ರಕರಣದಲ್ಲಿ, ಅವರನ್ನು ಈಗ (ಬಂಧಿಸಿ) ಇಡಲಾಗಿರುವ ಯೋಗ ಕೇಂದ್ರವು(ಎರ್ನಾಕುಳಂ), ಹುಡುಗಿಯರು ತಮ್ಮ ಹೊಸ ಧರ್ಮ(ಇಸ್ಲಾಂ)ವನ್ನು ತ್ಯಜಿಸುವಂತೆ ಅಥವಾ ಅವರ ಪತಿಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಭಾವನಾತ್ಮಕ ಬೆದರಿಕೆಯೊಡ್ಡುವ, (ಬ್ಲಾಕ್‌ಮೇಲ್ ಮಾಡುವ) ಮತ್ತು ದೈನಿಕ ಬೆದರಿಕೆಗಳನ್ನು ಹಾಕುವ ಒಂದು ಜಾಗ ಎಂದು ತಿಳಿದುಬಂದಿದೆ. ಶ್ರುತಿ ಮೆಲೆದತ್ ಎಂಬ ಇನ್ನೊಬ್ಬರು ಹಿಂದೂ ಮಹಿಳೆ ಕೂಡ ಇಂತಹದೇ ಅನುಭವ ತನಗೂ ಆಗಿದೆ ಎಂದು ಸಾಕ್ಷಿ ನುಡಿದಿದ್ದಾರೆ. ಅವರು ತಾನು ವಿವಾಹವಾಗಬಯಸಿದ್ದ ಮುಸ್ಲಿಂ ಗಂಡ ಅನೀಸ್ ಹಮೀದ್‌ರನ್ನು ಬಿಟ್ಟು ಬಿಡುವಂತೆ ಹೇಳಿ ಅವರ ಮೇಲೆ ಕೂಡ ಇಂತಹದೇ ಒತ್ತಡ ಹೇರಲಾಗಿತ್ತು.; ಮತ್ತು ಇದು ಕೂಡ ಒಂದು ಯೋಗ ವಿದ್ಯಾ ಕೇಂದ್ರದಲ್ಲಿ ನಡೆದ ಘಟನೆ. ಅಂತಹ ಯೋಗ ಕೇಂದ್ರಗಳ ಕಾರ್ಯಸೂಚಿಯಲ್ಲಿರುವ ಸಾಮ್ಯತೆ ಸ್ಪಷ್ಟವಿದೆ.

ಲವ್ ಜಿಹಾದ್ ಪ್ರಶ್ನೆ ಪ್ರೀತಿಸುವ ಮಹಿಳೆಯರಿಗೆ ಇಷ್ಟೊಂದು ಅಪಾಯಕಾರಿಯಾದೀತೆಂದು ಒಂದು ದಶಕದ ಹಿಂದೆ ನಿರೀಕ್ಷಿಸುವುದಕ್ಕೆ ಕೂಡ ಸಾಧ್ಯವಿರ ಲಿಲ್ಲ. ತುಂಬ ಚಾಣಾಕ್ಷತನದಿಂದ ಹೆಣೆಯಲಾಗಿರುವ ‘ಲವ್ ಜಿಹಾದ್’ ಪ್ರಚಾರವು ಪಿತೃಪ್ರಧಾನ ವಿಚಾರಗಳನ್ನ ವಲಂಬಿಸಿದೆ. ಕೋಮುವಾದಿ ರಾಜಕಾರಣದ ಮೂಲ ಘಟಕಗಳಲ್ಲಿ ಒಂದು ಘಟಕ, ಈ ಪಿತೃ ಪ್ರಧಾನ ವಿಚಾರಗಳು, ಚಿಂತನೆಗಳು. ಈ ಕೋಮುವಾದಿ ಚಿಂತನೆಯ ಪ್ರಕಾರ ‘ನಮ್ಮ ಹೆಂಗಸರು’ ಮತ್ತು ‘ಅವರ ಹೆಂಗಸರು’ ಎಂಬ ಪರಿಕಲ್ಪನೆಗಳು ಮುಖ್ಯವಾಗುತ್ತವೆ. ಮಹಿಳೆಯನ್ನು ಪುರುಷನ ಆಸ್ತಿ ಮತ್ತು ಸಮುದಾಯದ ಗೌರವದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ‘‘ನಮ್ಮ ಹೆಂಗಸರಿಗೆ ಬೆದರಿಕೆ ಇದೆ’’ ಎಂಬ ವದಂತಿಗಳನ್ನು ಹರಡಿ ಕೋಮು ಹಿಂಸೆಯನ್ನು ಹುಟ್ಟುಹಾಕಲಾಗುತ್ತದೆ. ಮುಝಫ್ಫರ್ ನಗರದಲ್ಲಿ ನಡೆದ ಹಿಂಸೆ ಇದಕ್ಕೊಂದು ಉತ್ತಮ ಉದಾಹರಣೆ. ಲವ್‌ಜಿಹಾದ್ ವಿವಾಹ, ಹಿಂಸೆ ಕರಾವಳಿ ಕರ್ನಾಟಕದಲ್ಲಿ ಆರಂಭವಾಯಿತು. ಹೆಚ್ಚಿನ ಪ್ರಕರಣಗಳಲ್ಲಿ ಹುಡುಗಿ ಹಿಂದು ಮತ್ತು ಹುಡುಗ ಮುಸ್ಲಿಂ ಮತ್ತು ಅಪರೂಪಕ್ಕೊಮ್ಮೆ ಕ್ರಿಶ್ಚಿಯನ್ ಆಗಿದ್ದಾಗ ಇಂತಹ ಲವ್ ಜಿಹಾದ್ ಎಂಬ ಪ್ರಕರಣಗಳು ನಡೆದಿವೆ.

ಸ್ವಾತಂತ್ರ ಚಳವಳಿಯ ವೇಳೆ ಗಾಂಧಿ ಮತ್ತು ಅಂಬೇಡ್ಕರ್ ರಂತಹ ನಾಯಕರು ಜಾತಿ ವಿನಾಶ ಮತ್ತು ಕೋಮು ಸಾಮರಸ್ಯದಲ್ಲಿ, ಅಂತರ್ಜಾತಿಯ ಮತ್ತು ಅಂತರ್ಧರ್ಮೀಯ ವಿವಾಹಗಳು ವಹಿಸುವ ಪಾತ್ರಗಳ ಬಗ್ಗೆ ಮಾತಾಡಿದ್ದರು, ಆದರೆ ಈಗ ಕೋಮು ವಿಭಜನೆಯ ಕಾರ್ಮೋಡಗಳು ದಟ್ಟೈಸುತ್ತಿರುವಾಗ, ಪಿತೃ ಪ್ರಧಾನ ವಿಚಾರಗಳು, ಚಿಂತನೆಗಳು ಮತ್ತು ಮಹಿಳೆಯರ ಬದುಕನ್ನು ನಿಯಂತ್ರಿಸುವ ಪ್ರಯತ್ನಗಳು ಇನ್ನಷ್ಟು ಬಲಿಷ್ಠವಾಗುತ್ತಿವೆ.

ಹಿಂದೂ ಹುಡುಗ-ಮುಸ್ಲಿಂ ಹುಡುಗಿ ಮತ್ತು ಹಿಂದೂ ಹುಡುಗಿ- ಮುಸ್ಲಿಂ ಹುಡುಗ ವಿವಾಹವಾದ ಅದ್ಭುತ ಉದಾಹರಣೆಗಳಿವೆ ಯಾದರೂ, ಇತರರು ಹೀಗೆ ವಿವಾಹವಾಗದಂತೆ ತಡೆಯುವ ಉದ್ದೇಶ ಹಾದಿಯಾ ಮತ್ತು ಶ್ರುತಿಯಂತಹ ಹುಡುಗಿಯರಿಗೆ ಒಡ್ಡಲಾಗಿರುವ ಬೆದರಿಕೆಗಳ ಹಿಂದೆ ಇದೆ. ಅಂತರ್ಜಾತೀಯ/ ಧರ್ಮೀಯ ವಿವಾಹಗಳನ್ನು ಮುರಿಯಲು ಯೋಗ ಕೇಂದ್ರಗಳು ಬಳಕೆಯಾಗುತ್ತಿರುವುದು ತುಂಬ ದುಃಖದ ಸುದ್ದಿ.

Writer - ರಾಮ್ ಪುನಿಯಾನಿ

contributor

Editor - ರಾಮ್ ಪುನಿಯಾನಿ

contributor

Similar News

ಜಗದಗಲ
ಜಗ ದಗಲ