ಸಂಧಾನಕ್ಕಾಗಿ ಅಮೆರಿಕ, ಉ. ಕೊರಿಯಕ್ಕೆ ನೊಬೆಲ್ ಶಾಂತಿ ವಿಜೇತರ ಕರೆ

Update: 2017-12-10 17:01 GMT

ಓಸ್ಲೊ (ನಾರ್ವೆ), ಡಿ. 10: ಆವೇಶದ ಮಾತುಗಳನ್ನು ಬದಿಗಿಟ್ಟು, ಪರಮಾಣು ದಾಳಿಯನ್ನು ತಡೆಯುವ ನಿಟ್ಟಿನಲ್ಲಿ ಮಾತುಕತೆ ನಡೆಸಿ ಎಂಬುದಾಗಿ ಈ ವರ್ಷ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ‘ಅಂತಾರಾಷ್ಟ್ರೀಯ ಪರಮಾಣು ಅಸ್ತ್ರ ನಿರ್ಮೂಲನೆ ಅಭಿಯಾನ’ (ಐಸಿಎಎನ್)ದ ನಾಯಕಿ ಹಾಗೂ ಹಿರೋಶಿಮಾ ಪರಮಾಣು ಬಾಂಬ್ ದಾಳಿಯಲ್ಲಿ ಬದುಕುಳಿದ ಸೆಟ್ಸುಕೊ ತುರ್ಲೊವ್ ಶನಿವಾರ ಅಮೆರಿಕ ಮತ್ತು ಉತ್ತರ ಕೊರಿಯವನ್ನು ಒತ್ತಾಯಿಸಿದ್ದಾರೆ.

 ನೊಬೆಲ್ ಶಾಂತಿ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕಾಗಿ ಓಸ್ಲೊ ಸಿಟಿ ಹಾಲ್‌ಗೆ ಬಂದಿರುವ 85 ವರ್ಷದ ಸೆಟ್ಸುಕೊ ಈ ಕರೆ ನೀಡಿದ್ದಾರೆ. ನೊಬೆಲ್ ಪ್ರಶಸ್ತಿ ಪ್ರದಾನ ಸಮಾರಂಭ ರವಿವಾರ ನಡೆಯುತ್ತಿದೆ.

ಸೆಟ್ಸುಕೊ ಮತ್ತು ಐಸಿಎಎನ್‌ನ ಕಾರ್ಯಕಾರಿ ನಿರ್ದೇಶಕಿ ಬಿಯಾಟ್ರೈಸ್ ಫಿನ್ ಅವರು ದೊರೆ ಹೆರಾಲ್ಡ್ ಮತ್ತು ಮಹಾರಾಣಿ ಸೊಂಜಾ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News