ಡಿ. 11ರಿಂದ ಅಮೆರಿಕ, ಜಪಾನ್, ದಕ್ಷಿಣ ಕೊರಿಯ ತಾಲೀಮು

Update: 2017-12-10 17:18 GMT

ಟೋಕಿಯೊ, ಡಿ. 10: ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಗಳು ಸೋಮವಾರ ಆರಂಭಗೊಳ್ಳುವ ಎರಡು ದಿನಗಳ ಕ್ಷಿಪಣಿ ನಿಗಾ ತಾಲೀಮಿನಲ್ಲಿ ಪಾಲ್ಗೊಳ್ಳಲಿವೆ ಎಂದು ಜಪಾನ್‌ನ ಸಾಗರ ಸ್ವರಕ್ಷಣಾ ಪಡೆ ತಿಳಿಸಿದೆ.

ಉತ್ತರ ಕೊರಿಯದ ಶಸ್ತ್ರಾಸ್ತ್ರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ವಲಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಈ ಮೂರು ದೇಶಗಳ ತಾಲೀಮು ನಡೆಯಲಿದೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಗಳು ಕಳೆದ ವಾರವಷ್ಟೇ ಬೃಹತ್ ಸೇನಾ ತಾಲೀಮನ್ನು ಮುಗಿಸಿವೆ. ಆ ತಾಲೀಮಿನ ಬಗ್ಗೆ ಕಿಡಿಗಾರಿದ್ದ ಉತ್ತರ ಕೊರಿಯ, ಇದು ಯುದ್ಧವನ್ನು ಅನಿವಾರ್ಯವಾಗಿಸಿದೆ ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News