ಬೆರೂತ್: ಅಮೆರಿಕ ರಾಯಭಾರ ಕಚೇರಿ ಎದುರು ಪ್ರತಿಭಟನೆ

Update: 2017-12-10 17:37 GMT

ಬೆರೂತ್, ಡಿ. 10: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ಘೋಷಿಸುವ ಅಮೆರಿಕದ ನಿರ್ಧಾರವನ್ನು ವಿರೋಧಿಸಿ ಲೆಬನಾನ್ ರಾಜಧಾನಿ ಬೆರೂತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹೊರಗೆ ರವಿವಾರ ಜನರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆತಳು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದರು ಹಾಗೂ ಜಲಫಿರಂಗಿಯನ್ನು ಬಳಸಿದರು.

ಅಮೆರಿಕ ರಾಯಭಾರ ಕಚೇರಿಯತ್ತ ತೆರಳುತ್ತಿದ್ದ ನೂರಾರು ಜನರನ್ನು ಪೊಲೀಸರು ತಡೆದರು ಹಾಗೂ ರಾಯಭಾರ ಕಚೇರಿಯ ದ್ವಾರವನ್ನು ಬಲವಂತವಾಗಿ ತೆರೆಯಲು ಯತ್ನಿಸಿದ ಜನರನ್ನು ಚದುರಿಸಲು ಪೊಲೀಸರು ಬಲಪ್ರಯೋಗ ನಡೆಸಿದರು ಎಂದು ಎಎಫ್‌ಪಿ ವರದಿ ಮಾಡಿದೆ.

ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News