ನೇಪಾಳ: ಭರ್ಜರಿ ಗೆಲುವಿನತ್ತ ಎಡ ಪಕ್ಷಗಳ ಮೈತ್ರಿಕೂಟ

Update: 2017-12-10 17:39 GMT

ಕಠ್ಮಂಡು (ನೇಪಾಳ), ಡಿ. 10: ನೇಪಾಳದಲ್ಲಿ ನಡೆದ ಐತಿಹಾಸಿಕ ಚುನಾವಣೆಯಲ್ಲಿ ಘೋಷಣೆಯಾದ 89 ಸ್ಥಾನಗಳ ಪೈಕಿ ರವಿವಾರ 72ನ್ನು ಗೆಲ್ಲುವ ಮೂಲಕ ಎಡಪಂಥೀಯ ಮೈತ್ರಿಕೂಟವು ಭರ್ಜರಿ ಜಯದತ್ತ ದಾಪುಗಾಲಿಡುತ್ತಿದೆ.

ಸಂಸದೀಯ ಮತ್ತು ಪ್ರಾಂತೀಯ ಅಸೆಂಬ್ಲಿ ಚುನಾವಣೆಗಳಿಗಾಗಿ ಮಾಜಿ ಪ್ರಧಾನಿ ಕೆ.ಪಿ. ಒಲಿ ನೇತೃತ್ವದ ಸಿಪಿಎನ್-ಯುಎಂಎಲ್ ಮತ್ತು ಮಾಜಿ ಪ್ರಧಾನಿ ಪ್ರಚಂಡ ನೇತೃತ್ವದ ಸಿಪಿಎನ್-ಮಾವೊವಾದಿ ಪಕ್ಷಗಳು ಚುನಾವಣಾ ಮೈತ್ರಿಕೂಟವನ್ನು ಏರ್ಪಡಿಸಿಕೊಂಡಿದ್ದವು.

ಸಿಪಿಎನ್-ಯುಎಂಎಲ್ 51 ಸ್ಥಾನಗಳನ್ನು ಗೆದ್ದರೆ, ಅದರ ಮಿತ್ರಪಕ್ಷ ಸಿಪಿಎನ್-ಮಾವೊವಾದಿ ಸೆಂಟರ್ 21 ಸ್ಥಾನಗಳನ್ನು ಗಳಿಸಿದೆ ಎಂದು ನೇಪಾಳಿ ಚುನಾವಣಾ ಆಯೋಗ ಪ್ರಕಟಿಸಿದ ಫಲಿತಾಂಶಗಳು ತಿಳಿಸಿವೆ.

ಕಳೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿದ್ದ ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಕೇವಲ 10 ಸ್ಥಾನಗಳನ್ನು ಗಳಿಸಿದೆ.

ಎರಡು ಮದೇಸಿ ಪಕ್ಷಗಳು ಐದು ಸ್ಥಾನಗಳನ್ನು ಪಡೆದಿವೆ.

ಉಳಿದ 76 ಸ್ಥಾನಗಳ ಮತ ಎಣಿಕೆ ಪ್ರಗತಿಯಲ್ಲಿದೆ.

ನೇಪಾಳದಲ್ಲಿ ಚುನಾವಣೆಯು ನವೆಂಬರ್ 26 ಮತ್ತು ಡಿಸೆಂಬರ್ 7ರಂದು ಎರಡು ಹಂತಗಳಲ್ಲಿ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News