ಆಸ್ಟ್ರೇಲಿಯ: ಭಾರತೀಯ ಬಾಲಕಿ ಸಮುದ್ರದಲ್ಲಿ ಮುಳುಗಿ ಮೃತ್ಯು

Update: 2017-12-11 16:38 GMT

ಅಡಿಲೇಡ್ (ಆಸ್ಟ್ರೇಲಿಯ), ಡಿ. 11: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ 18 ವರ್ಷದ ಕೆಳಗಿನ ‘ಪೆಸಿಫಿಕ್ ಸ್ಕೂಲ್ ಗೇಮ್ಸ್’ನಲ್ಲಿ ಪಾಲ್ಗೊಳ್ಳಲು ತೆರಳಿದ್ದ ಭಾರತೀಯ ಬಾಲಕಿಯೊಬ್ಬಳು ಅಡಿಲೇಡ್‌ನ ಸಮುದ್ರದಲ್ಲಿ ರವಿವಾರ ಮುಳುಗಿ ಮೃತಪಟ್ಟಿದ್ದಾಳೆ.

ಅಡಿಲೇಡ್‌ನ ಗ್ಲೆನೆಲ್ಗ್ ಬೀಚ್‌ಗೆ ವಿಹಾರಕ್ಕಾಗಿ ತೆರಳಿದ್ದ ಐವರು ಭಾರತೀಯ ಬಾಲಕಿಯರು ಸಮುದ್ರದಲ್ಲಿ ಕೊಚ್ಚಿಹೋಗಿದ್ದರು. ಅವರ ಪೈಕಿ ಒಬ್ಬರು ಸೋಮವಾರ ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಜೀವರಕ್ಷಕ ಸಿಬ್ಬಂದಿ ರವಿವಾರ ಸಂಜೆಗೆ ಮೊದಲು ಮೂವರು ಬಾಲಕಿಯರನ್ನು ರಕ್ಷಿಸಿದ್ದರು. ಬಳಿಕ ಇನ್ನೋರ್ವ ಬಾಲಕಿಯನ್ನು ಹೋಲ್ಡ್‌ಫಾಸ್ಟ್ ಮರೀನಾದಲ್ಲಿ ರಕ್ಷಿಸಿದರು.

15 ವರ್ಷದ ನಿತೀಶಾ ನೇಗಿಯ ಮೃತದೇಹ ಸೋಮವಾರ ಬೆಳಗ್ಗೆ 7:30ಕ್ಕೆ ಗ್ಲೆನೆಲ್ಗ್‌ನಲ್ಲಿ ಪತ್ತೆಯಾಯಿತು.

ಅಡಿಲೇಡ್‌ನ ಬ್ರೇಕ್‌ವಾಟರ್ ಬಂಡೆಗಳ ಸಮೀಪ ಈಜುತ್ತಿದ್ದ ಬಾಲಕಿಯರು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದರು.

ರಕ್ಷಿಸಲ್ಪಟ್ಟಿರುವ ಬಾಲಕಿಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News