ಅಮೆರಿಕದ ಕ್ರಮ ಉರಿಯುತ್ತಿರುವ ಬೆಂಕಿಗೆ ಪೆಟ್ರೋಲ್ ಸುರಿದಂತೆ: ಇರಾನ್ ಅಧ್ಯಕ್ಷ ರೂಹಾನಿ

Update: 2017-12-11 17:16 GMT

ಟೆಹರಾನ್ (ಇರಾನ್), ಡಿ. 11: ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯಮಾಡುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ನಿರ್ಧಾರವನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿ ರವಿವಾರ ಟೀಕಿಸಿದ್ದಾರೆ ಎಂದು ‘ಪ್ರೆಸ್ ಟಿವಿ’ ವರದಿ ಮಾಡಿದೆ.

‘‘ಪ್ರಾದೇಶಿಕ ಪರಿಸ್ಥಿತಿಯು ಇಷ್ಟು ಸೂಕ್ಷ್ಮವಾಗಿರುವಾಗ ಅದನ್ನು ಬಿಗಡಾಯಿಸಲು ಯಾರೂ ಪ್ರಯತ್ನಿಸಬಾರದು. ಹೀಗಿರುವಾಗ, ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಏಕಪಕ್ಷೀಯವಾಗಿ ಮಾನ್ಯ ಮಾಡುವ ಅಮೆರಿಕದ ಅಧ್ಯಕ್ಷರ ನಿರ್ಧಾರವು ಈಗಾಗಲೇ ಹೊತ್ತಿ ಉರಿಯುತ್ತಿರುವ ಬೆಂಕಿಗೆ ಪೆಟ್ರೋಲ್ ಸುರಿದಂತೆ ಆಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಇರಾನ್ ಪ್ರವಾಸದಲ್ಲಿರುವ ಬ್ರಿಟನ್‌ನ ವಿದೇಶ ಸಚಿವ ಬೊರಿಸ್ ಜಾನ್ಸನ್ ಜೊತೆ ಟೆಹರಾನ್‌ನಲ್ಲಿ ಮಾತುಕತೆ ನಡೆಸಿದ ವೇಳೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News