ದಾನ ಮಾಡಲು ಜೆರುಸಲೇಂ ಅಮೆರಿಕದ ನಗರವಲ್ಲ: ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್

Update: 2017-12-13 17:19 GMT

ಇಸ್ತಾಂಬುಲ್ , ಡಿ. 13:ಟ್ರಂಪ್ ಆಡಳಿತದ ನಿರ್ಧಾರವನ್ನು ಬುಧವಾರ ಖಂಡಿಸಿದ ಫೆಲೆಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಜೆರುಸಲೇಂನ್ನು ಇಸ್ರೇಲ್ ರಾಜಧಾನಿಯಾಗಿ ಮಾನ್ಯ ಮಾಡಿರುವುದು ‘ಅತ್ಯಂತ ದೊಡ್ಡ ಅಪರಾಧ’ವಾಗಿದೆ ಹಾಗೂ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಬಣ್ಣಿಸಿದ್ದಾರೆ.

‘‘ಜೆರುಸಲೇಂ ಫೆಲೆಸ್ತೀನ್‌ನ ರಾಜಧಾನಿಯಾಗಿದೆ ಹಾಗೂ ಯಾವತ್ತೂ ಆಗಿರುವುದು’’ ಎಂದು ಅವರು ಟರ್ಕಿಯಲ್ಲಿ ನಡೆದ ಮುಸ್ಲಿಮ್ ನಾಯಕರ ತುರ್ತು ಸಭೆಯೊಂದರಲ್ಲಿ ಹೇಳಿದರು.

ಜೆರುಸಲೇಂ ಅಮೆರಿಕದ ನಗರವೆಂಬಂತೆ ಟ್ರಂಪ್ ಆಡಳಿತ ಅದನ್ನು ಇಸ್ರೇಲ್‌ಗೆ ಕೊಟ್ಟಿದೆ ಎಂದರು.

ಮಧ್ಯಪ್ರಾಚ್ಯ ಶಾಂತಿ ಪ್ರಕ್ರಿಯೆಯಲ್ಲಿ ಅಮೆರಿಕ ಪಾತ್ರ ವಹಿಸುವುದು ಸ್ವೀಕಾರಾರ್ಹವಲ್ಲ, ಯಾಕೆಂದರೆ ಅದು ಇಸ್ರೇಲ್ ಪರವಾಗಿ ಪಕ್ಷಪಾತ ಮಾಡುತ್ತದೆ ಎಂದು ಅಬ್ಬಾಸ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News