ಮಾಧ್ಯಮಗಳ ಜವಾಬ್ದಾರಿಯೇನು?

Update: 2017-12-14 18:36 GMT

ಮಾನ್ಯರೇ,

ಇತ್ತೀಚೆಗೆ ಕ್ರಿಕೆಟಿಗನೊಬ್ಬ ಇಲ್ಲಿ ಮಾಧ್ಯಮಗಳ ಕಾಟ ತಡೆಯ ಲಾರದೆ ಇಟಲಿಗೆ ಹೋಗಿ ಮದುವೆಯಾಗಿದ್ದರೂ ಮಾಧ್ಯಮಗಳು ಮಾತ್ರ ಇನ್ನೂ ಆತನನ್ನು ಬೆಂಬಿಡದೆ ಕಾಡುತ್ತಿದ್ದು ಆತನ ಮದುವೆ, ಮಧುಚಂದ್ರ, ಗೃಹಪ್ರವೇಶ, ಹೊಸವರ್ಷಾಚರಣೆಯ ಬಗ್ಗೆಯೇ ಸುದ್ದಿ ಮಾಡುವುದರಲ್ಲಿ ನಿರತವಾಗಿವೆ.

ದೇಶದಲ್ಲಿ ಮಾಧ್ಯಮಗಳು ವರದಿ ಮಾಡಲೇಬೇಕಾದ ನೂರಾರು ಸಮಸ್ಯೆಗಳಿವೆ. ಈ ಸಮಸ್ಯೆಗಳ ಬೆನ್ನು ಹತ್ತಿ ರಾಜಕಾರಣಿಗಳಿಗೆ ಆ ಸಮಸ್ಯೆಗಳ ತೀವ್ರತೆಯ ಬಗ್ಗೆ ಅರಿವು ಮೂಡಿಸುವುದರಲ್ಲಿ ಮಾಧ್ಯಮಗಳ ಪಾತ್ರ ತುಂಬಾ ಮಹತ್ವದ್ದು. ಆದರೆ ಮಾಧ್ಯಮಗಳು ಈ ನಿಟ್ಟಿನಲ್ಲಿ ಕಾರ್ಯಗತವಾಗದೆ ಸೆಲೆಬ್ರಿಟಿಗಳ ಹಿಂದೆ ಬಿದ್ದಿರುವುದು ದೇಶದ ದುರಂತ.

Similar News