67 ವರ್ಷಗಳ ಹಿಂದೆ ಇದೇ ದಿನ ನಡೆದಿತ್ತು ಆಕಾಶದಲ್ಲಿ ಎರಡು ವಿಮಾನಗಳ ಭೀಕರ ಆ್ಯಕ್ಸಿಡೆಂಟ್‌ !

Update: 2017-12-16 09:46 GMT
ಸಾಂದರ್ಭಿಕ ಚಿತ್ರ

1960ರ ಈ ದಿನದಂದು ಎರಡು ವಿಮಾನಗಳು ನ್ಯೂಯಾರ್ಕ್ ನಗರದಲ್ಲಿ ಪರಸ್ಪರ ಢಿಕ್ಕಿಯಾಗಿ 134 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಮೆರಿಕದ ಇತಿಹಾಸದಲ್ಲೇ ಆಕಾಶ ಮಾರ್ಗಮಧ್ಯದಲ್ಲೇ ಎರಡು ವಿಮಾನಗಳು ಢಿಕ್ಕಿಯಾದ ಏಕೈಕ ಘಟನೆ ಇದಾಗಿದೆ.

ಮಂಜು ಮುಸುಕಿದ್ದ ಆ ಮುಂಜಾನೆ ಯುನೈಟೆಡ್ ಡಿಸಿ-8 ವಿಮಾನವು ಚಿಕಾಗೋದಿಂದ ಸದರ್ನ್ ಕ್ವೀನ್ಸ್‍ನ ಐಡಲ್‍ವೈಲ್ಡ್ ವಿಮಾನ ನಿಲ್ದಾಣಕ್ಕೆ ಹೊರಟಿತ್ತು. ಇದೇ ವೇಳೆ ಓಹಿಯೊ ಡೇಟನ್‍ನಿಂದ ಟಿಡಬ್ಲ್ಯುಎ ಸೂಪರ್ ಕಾನ್‍ಸ್ಟಲೇಶನ್ ವಿಮಾನ ಉತ್ತರ ಕ್ವೀನ್ಸ್‍ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದತ್ತ ಹೊರಟಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಯನೈಟೆಡ್ ಫ್ಲೈಟ್ ವಿಮಾನವನ್ನು ತಡೆದು ನಿಲ್ಲಿಸಲಾಗಿತ್ತು. ಈ ನಿಲುಗಡೆಯ ಅಂತರವನ್ನು ಪೈಲಟ್ ತಪ್ಪಾಗಿ ಅಂದಾಜಿಸಿದ್ದರಿಂದ ವಿಮಾನವು ನೇರವಾಗಿ ಟಿಡಬ್ಲುಎ ವಿಮಾನದ ಮಾರ್ಗದಲ್ಲಿ ಸಾಗಿತು.

ಎರಡೂ ವಿಮಾನಗಳಲ್ಲಿ ಒಟ್ಟು 128 ಮಂದಿ ಪ್ರಯಾಣಿಕರಿದ್ದರು. ಈ ವಿಮಾನಗಳ ಢಿಕ್ಕಿ ಘಟನೆಯನ್ನು 11 ವರ್ಷದ ಪ್ರಯಾಣಿಕ ಸ್ಟೀಫನ್ ಬ್ಲಟ್ಸ್ ಯಥಾವತ್ತಾಗಿ ಬಣ್ಣಿಸಿದ್ದರು. ಟಿಡಬ್ಲ್ಯುಎ ವಿಮಾನ ಮಿಲ್ಲರ್ ಕ್ಷೇತ್ರಕ್ಕೆ ಪತನಗೊಂಡಿತ್ತು. ಇದು ಸ್ಟಾಟೆನ್ ದ್ವೀಪದ ಮಿಲಿಟರಿ ವಾಯುಕ್ಷೇತ್ರವಾಗಿತ್ತು. ಯುನೈಟೆಡ್ ವಿಮಾನದ ಬಲಬದಿ ಎಂಜಿನ್ ಮತ್ತು ರೆಕ್ಕೆಗೆ ಹಾನಿಯಾಗಿತ್ತು. ಇದು ಮಕ್ಕದ ಉದ್ಯಾನವನಕ್ಕೆ ಬಿದ್ದು, ಸೆಂಟ್ ಆಗಸ್ಟಿನ್ ಅಕಾಡಮಿ ಬಳಿಗೆ ಬಿದ್ದಿತ್ತು. ಘಟನೆಯಲ್ಲಿ ಹಲವು ಕಟ್ಟಡಗಳಿಗೆ ಬೆಂಕಿ ಬಿದ್ದಿತ್ತು. ಈ ಘಟನೆಯನ್ನು ರಾಬರ್ಟ್ ನೆವಿನ್ ಎಂಬ ಮಹಿಳೆ ಕಣ್ಣಾರೆ ಕಂಡಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News