×
Ad

ಫೆಲೆಸ್ತೀನಿ ಪ್ರತಿಭಟನಾಕಾರರ ಮೇಲೆ ಇಸ್ರೇಲ್ ಸೈನಿಕರ ಗುಂಡು

Update: 2017-12-16 21:29 IST
ಸಾಂದರ್ಭಿಕ ಚಿತ್ರ

ಗಾಝಾ (ಫೆಲೆಸ್ತೀನ್), ಡಿ. 16: ಜೆರುಸಲೇಂನ್ನು ಇಸ್ರೇಲ್‌ನ ರಾಜಧಾನಿಯಾಗಿ ಅಮೆರಿಕ ಮಾನ್ಯ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಗಾಝಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿನಲ್ಲಿ ನಾಲ್ವರು ಫೆಲೆಸ್ತೀನೀಯರು ಮೃತಪಟ್ಟಿದ್ದಾರೆ ಹಾಗೂ ಸುಮಾರು 150 ಮಂದಿ ಗಾಯಗೊಂಡಿದ್ದಾರೆ.

ಹೆಚ್ಚಿನ ಪ್ರಮಾಣದ ಸಾವು ನೋವುಗಳು ಗಾಝಾ ಪಟ್ಟಿಯ ಗಡಿಯಲ್ಲಿ ಸಂಭವಿಸಿದೆ. ಅಲ್ಲಿ ಸೇರಿದ ಸಾವಿರಾರು ಫೆಲೆಸ್ತೀನೀಯರು ಗಡಿ ಬೇಲಿಯನ್ನು ಉಲ್ಲಂಘಿಸಿ ಇಸ್ರೇಲ್ ಸೈನಿಕರತ್ತ ಕಲ್ಲುಗಳನ್ನು ಎಸೆದರು ಎಂದು ಇಸ್ರೇಲ್ ಹೇಳಿದೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ಮಾಡಿದ ಇಸ್ರೇಲ್ ಸೈನಿಕರು ಇಬ್ಬರನ್ನು ಕೊಂದಿದ್ದಾರೆ ಹಾಗೂ 10ಕ್ಕೂ ಅಧಿಕ ಮಂದಿಯನ್ನು ಗಾಯಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News