ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಚೇತೇಶ್ವರ ಪೂಜಾರ ನಂ.3

Update: 2017-12-19 18:47 GMT

ದುಬೈ, ಡಿ.19: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಮಂಗಳವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಸ್ಟೀವ್ ಸ್ಮಿತ್ ಹಾಗೂ ವಿರಾಟ್ ಕೊಹ್ಲಿ ಕ್ರಮವಾಗಿ 1 ಹಾಗೂ 2ನೇ ಸ್ಥಾನದಲ್ಲಿದ್ದಾರೆ.

ಪೂಜಾರ 54 ಟೆಸ್ಟ್ ಪಂದ್ಯಗಳಲ್ಲಿ 52.96ರ ಸರಾಸರಿಯಲ್ಲಿ 4,396ರನ್ ಗಳಿಸಿದ್ದು, ಪ್ರಸ್ತುತ ಟೆಸ್ಟ್ ದಾಂಡಿಗರ ಪಟ್ಟಿಯಲ್ಲಿ 873 ಅಂಕ ಗಳಿಸಿದ್ದಾರೆ. ಆಸ್ಟ್ರೇಲಿಯದ ನಾಯಕ ಸ್ಟೀವನ್ ಸ್ಮಿತ್ ಎರಡು ವರ್ಷಗಳಿಂದ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ 8 ವಿಕೆಟ್‌ಗಳನ್ನು ಕಬಳಿಸಿರುವ ಇಂಗ್ಲೆಂಡ್‌ನ ಪ್ರಮುಖ ಬೌಲರ್ ಜೇಮ್ಸ್‌ಆ್ಯಂಡರ್ಸನ್ ಹಾಗೂ ಆಸ್ಟ್ರೇಲಿಯದ ವೇಗದ ಬೌಲರ್‌ಜೋಶ್ ಹೇಝಲ್‌ವುಡ್ ಅಗ್ರ 5ರಲ್ಲಿ ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಜಡೇಜ ಹಾಗೂ ಅಶ್ವಿನ್ ಎರಡನೇ ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News