ಗುಜರಾತ್: ರೂಪಾನಿ ಸಿಎಂ, ಪಟೇಲ್ ಡಿಸಿಎಂ ?
Update: 2017-12-20 22:45 IST
ಗಾಂಧಿನಗರ, ಡಿ. 20: ಗುಜರಾತ್ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯಾಗಿ ಕ್ರಮವಾಗಿ ವಿಜಯ್ ರೂಪಾನಿ ಹಾಗೂ ನಿತಿನ್ ಪಟೇಲ್ ಮುಂದುವರಿಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.ನರೇಂದ್ರ ಮೋದಿ ಸರಕಾರದಲ್ಲಿರುವ ಗುಜರಾತ್ ಸಚಿವರು ಕೂಡ ರೂಪಾನಿ ಸ್ಥಾನದ ಮೇಲೆ ಕಣ್ಣಿರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, 2019ರ ಸಾರ್ವತ್ರಿಕ ಚುನಾವಣೆ ವರೆಗೆ ರೂಪಾನಿ ಹಾಗೂ ಪಟೇಲ್ ಅವರೇ ಮುಂದುವರಿಯಬೇಕೆಂದು ಬಿಜೆಪಿ ಬಯಸುತ್ತಿದೆ ಎಂದು ಹೇಳಲಾಗುತ್ತಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಗುಜರಾತ್ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲಬೇಕು ಎಂದು ಮತ್ತೆ ಮತ್ತೆ ಹೇಳಿದ್ದರೂ ಸ್ಥಾನಗಳ ಸಂಖ್ಯೆ 100ಕ್ಕೆ ತಲುಪದಿರುವ ಬಗ್ಗೆ ರೂಪಾನಿ ಹಾಗೂ ಪಟೇಲ್ ಬಗ್ಗೆ ಪಕ್ಷಕ್ಕೆ ಅಸಮಾಧಾನವಿದೆ.