×
Ad

103 ವರ್ಷಗಳ ಬಳಿಕ ಪತ್ತೆಯಾಯ್ತು ಆಸ್ಟ್ರೇಲಿಯಾದ ಸಬ್‌ಮರೀನ್

Update: 2017-12-21 23:09 IST

ಸಿಡ್ನಿ (ಆಸ್ಟ್ರೇಲಿಯ), ಡಿ. 21: ಪ್ರಥಮ ಮಹಾಯುದ್ಧದ ವೇಳೆ ಕಾಣೆಯಾಗಿದ್ದ ಆಸ್ಟ್ರೇಲಿಯದ ಮೊದಲ ಸಬ್‌ಮರೀನ್‌ನ ಅವಶೇಷಗಳು 103 ವರ್ಷಗಳ ಬಳಿಕ ಪತ್ತೆಯಾಗಿದೆ. ಇದರೊಂದಿಗೆ ಆಸ್ಟ್ರೇಲಿಯದ ಅತ್ಯಂತ ಹಳೆಯ ನೌಕಾ ರಹಸ್ಯಗಳ ಪೈಕಿ ಒಂದು ಬಗೆಹರಿದಂತಾಗಿದೆ.

ಸಬ್‌ಮರೀನ್ ‘ಎಇ1’ ನ್ಯೂ ಬ್ರಿಟನ್‌ನ ನ್ಯೂ ಗಿನಿ ದ್ವೀಪದ ಸಮುದ್ರದಿಂದ 1914 ಸೆಪ್ಟಂಬರ್ 14ರಂದು ನಾಪತ್ತೆಯಾಗಿತ್ತು. ಅದರಲ್ಲಿ ಆಸ್ಟ್ರೇಲಿಯ, ನ್ಯೂಝಿಲ್ಯಾಂಡ್ ಮತ್ತು ಬ್ರಿಟನ್‌ನ 35 ಸಿಬ್ಬಂದಿ ಇದ್ದರು.

ಅದು ಮಿತ್ರಪಡೆಗಳ ನಾಪತ್ತೆಯಾದ ಮೊದಲ ಸಬ್‌ಮರೀನ್ ಆಗಿತ್ತು ಹಾಗೂ ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಪ್ರಥಮ ಯುದ್ಧಕಾಲದ ಹಿನ್ನಡೆಯಾಗಿತ್ತು.

ಕಳೆದ ಹಲವಾರು ದಶಕಗಳ ಅವಧಿಯಲ್ಲಿ ಸಬ್‌ಮರೀನನ್ನು ಪತ್ತೆಹಚ್ಚಲು ಕನಿಷ್ಠ 12 ವಿಫಲ ಪ್ರಯತ್ನಗಳನ್ನು ಮಾಡಲಾಗಿತ್ತು.

ಡಚ್ ಒಡೆತನದ ಸಮೀಕ್ಷೆ ಹಡಗನ್ನು ಬಳಸಿ ಕಳೆದ ವಾರ ಆರಂಭಗೊಂಡ ನೂತನ ಶೋಧದ ವೇಳೆ, 300 ಮೀಟರ್ ಆಳದಲ್ಲಿ ಸಬ್‌ಮರೀನನ್ನು ಪತ್ತೆಹಚ್ಚಲಾಗಿದೆ ಎಂದು ಆಸ್ಟ್ರೇಲಿಯದ ರಕ್ಷಣಾ ಸಚಿವೆ ಮ್ಯಾರಿಸ್ ಪೇನ್ ಗುರುವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News