ಲಾಲೂ ಕಂಬಿಯ ಹಿಂದೆ ಹೋಗುವಾಗ ಮಂಡೇಲಾ, ಅಂಬೇಡ್ಕರ್ ರನ್ನು ನೆನಪಿಸಿಕೊಂಡಿದ್ದು ಏಕೆ ?

Update: 2017-12-24 09:38 GMT

ರಾಂಚಿ, ಡಿ.24: ಬಹುಕೋಟಿ ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿ ಜೈಲು ಸೇರಿರುವ ಬಿಹಾರದ ಮಾಜಿ ಮುಖ್ಯ ಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ತಮ್ಮನ್ನು ನೆಲ್ಸನ್ ಮಂಡೇಲಾ , ಮಾರ್ಟಿನ್ ಲೂಥರ್  ಕಿಂಗ್ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜತೆ ಹೋಲಿಸಿಕೊಂಡಿದ್ದಾರೆ.

ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ಸ್, ಡಾ.ಬಿ.ಆರ್ ಅಂಬೇಡ್ಕರ್ ಅವರು ತಮ್ಮ ಪ್ರಯತ್ನಗಳಲ್ಲಿ ಸೋತಿದ್ದರೆ ಚರಿತ್ರೆ ಅವರನ್ನು ಖಳನಾಯಕರಾಗಿಸುತ್ತಿತ್ತು.

ಇಂತಹ ಮಹಾನ್ ನಾಯಕರು  ಈಗಲೂ ಕೆಲವು  ‌ಪೂರ್ವಗ್ರಹಪೀಡಿತರಿಗೆ , ಜನಾಂಗೀಯವಾದಿ, ಜಾತಿವಾದಿಗಳಿಗೆ ಖಳನಾಯಕರಂತೆಯೇ ಕಾಣಿಸುತ್ತಾರೆ.

ಈ ರೀತಿಯ  ಜನರಿಂದ ಇದಕ್ಕಿಂತ ಭಿನ್ನವಾದುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಲಾಲು ಪ್ರಸಾದ್  ಜೈಲು ಸೇರುವಾಗ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News