×
Ad

ತ್ರಿವಳಿ ತಲಾಖ್ ಮಸೂದೆ ಷಡ್ಯಂತ್ರದಂತೆ ಕಾಣುತ್ತಿದೆ: ಎಐಎಂಪಿಎಲ್ ಬಿ

Update: 2017-12-24 22:20 IST

ಹೊಸದಿಲ್ಲಿ,ಡಿ.24: ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧವನ್ನಾಗಿಸುವ ಮಸೂದೆಯನ್ನು ತಡೆ ಹಿಡಿಯುವಂತೆ ಮತ್ತು ಹಿಂದೆಗೆದುಕೊಳ್ಳುವಂತೆ ತಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಳ್ಳುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ರವಿವಾರ ಹೇಳಿದೆ.

ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ,2017ನ್ನು ಟೀಕಿಸಿದ ಎಐಎಂಪಿಎಲ್‌ಬಿಯ ವಕ್ತಾರ ಸಜ್ಜಾದ್ ನೋಮಾನ್ ಅವರು, ಮಸೂದೆಯಲ್ಲಿ ಉಲ್ಲೇಖಿಸಿರುವ ನಿಯಮಗಳನ್ನು ಪರಿಶೀಲಿಸಿದ ಮೆಲೆ ಅದು ಮುಸ್ಲಿಮರಿಂದ ವಿಚ್ಛೇದನದ ಹಕ್ಕನ್ನು ಕಿತ್ತುಕೊಳ್ಳುವ ಷಡ್ಯಂತ್ರದಂತೆ ಕಂಡು ಬರುತ್ತಿದೆ. ಸರಕಾರವು ತ್ರಿವಳಿ ತಲಾಖ್‌ನ್ನು ನಿಲ್ಲಿಸಲು ಬಯಸಿದರೆ ಅದು ನಮ್ಮ ಸಲಹೆಗಳನ್ನು ಪಡೆದುಕೊಳ್ಳಬಹುದಾಗಿದೆ. ಮುಸ್ಲಿಂ ಕಾನೂನುಗಳ ಸಾಂವಿಧಾನಿಕ ಅವಕಾಶಗಳಡಿ ವಿವಾದಗಳನ್ನು ಬಗೆಹರಿಸಲು ನಾವು ನೆರವಾಗುತ್ತೇವೆ ಎಂದು ಹೇಳಿದರು.

ಮುಂದಿನ ವಾರ ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸಲು ಸರಕಾರವು ನಿರ್ಧರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News