ಚೀನಾ: ಹಕ್ಕು ಕಾರ್ಯಕರ್ತನಿಗೆ 8 ವರ್ಷ ಜೈಲು

Update: 2017-12-26 17:00 GMT

ಬೀಜಿಂಗ್, ಡಿ. 26: ತನ್ನನ್ನು ತಾನು ‘ಅಲ್ಟ್ರಾ ವಲ್ಗರ್ ಬುಚರ್’ ಎಂಬುದಾಗಿ ಕರೆದುಕೊಂಡ ಮಾನವಹಕ್ಕುಗಳ ಕಾರ್ಯಕರ್ತರೊಬ್ಬರಿಗೆ ಚೀನಾ ಮಂಗಳವಾರ 8 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಹಕ್ಕುಗಳ ಪರವಾಗಿ ಧ್ವನಿಯೆತ್ತಿದವರ ವಿರುದ್ಧ ನಡೆಯುತ್ತಿರುವ ಸರಕಾರಿ ಅಭಿಯಾನದಲ್ಲಿ ಇದು ಅತ್ಯಂತ ಕಠಿಣ ಶಿಕ್ಷೆಯಾಗಿದೆ.

ಹಕ್ಕುಗಳ ಕಾರ್ಯಕರ್ತ ವು ಗನ್ ಸರಕಾರದ ಅಧಿಕಾರವನ್ನು ಬುಡಮೇಲುಗೊಳಿಸಲು ಹೊರಟಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿತ್ತು.

ತಿಯಾಂಜಿನ್‌ನಲ್ಲಿರುವ 2ನೆ ಇಂಟರ್‌ಮೀಡಿಯಟ್ ಪೀಪಲ್ಸ್ ನ್ಯಾಯಾಲಯವು ವು ಗನ್‌ರನ್ನು ದೋಷಿ ಎಂಬುದಾಗಿ ನಿರ್ಧರಿಸಿತು.

ಅವರು ಇನ್ನು ಮೇಲಿನ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News