ಈಜಿಪ್ಟ್: ಸೈನಿಕರನ್ನು ಕೊಂದ 15 ಭಯೋತ್ಪಾದಕರಿಗೆ ಗಲ್ಲು

Update: 2017-12-26 17:19 GMT

ಕೈರೋ (ಈಜಿಪ್ಟ್), ಡಿ. 26: ನಾಲ್ಕು ವರ್ಷಗಳ ಹಿಂದೆ ಸಿನೈ ಪರ್ಯಾಯ ದ್ವೀಪದಲ್ಲಿನ ಸೇನಾ ತನಿಖಾ ಠಾಣೆಯ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾಗಿರುವ 15 ಭಯೋತ್ಪಾದಕರನ್ನು ಗಲ್ಲಿಗೇರಿಸಲಾಗಿದೆ ಎಂದು ಈಜಿಪ್ಟ್‌ನ ಜೈಲು ಪ್ರಾಧಿಕಾರ ಹೇಳಿದೆ.

ಕೈರೋದ ಪಶ್ಚಿಮ ಮತ್ತು ವಾಯುವ್ಯದಲ್ಲಿರುವ ಎರಡು ಜೈಲುಗಳಲ್ಲಿ ಮಂಗಳವಾರ ಭಯೋತ್ಪಾದಕರನ್ನು ಗಲ್ಲಿಗೇರಿಸಲಾಗಿದೆ.

2013ರಲ್ಲಿ ನಡೆದ ದಾಳಿಗೆ ಸಂಬಂಧಿಸಿ ಸೇನಾ ನ್ಯಾಯಾಲಯದಲ್ಲಿ ಭಯೋತ್ಪಾದಕರ ವಿಚಾರಣೆ ನಡೆದಿತ್ತು.

ಆ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಮತ್ತು 8 ಸೈನಿಕರು ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News