×
Ad

ರಶ್ಯ ಯುದ್ಧ ನೌಕೆಯನ್ನು ಹಿಂಬಾಲಿಸಿದ ಬ್ರಿಟಿಶ್ ನೌಕೆ

Update: 2017-12-26 23:13 IST

ಲಂಡನ್, ಡಿ. 26: ಕ್ರಿಸ್ಮಸ್ ಅವಧಿಯಲ್ಲಿ ಬ್ರಿಟನ್‌ನ ಜಲಪ್ರದೇಶದ ಸಮೀಪ ಹಾದು ಹೋದ ರಶ್ಯದ ಹಡಗೊಂದನ್ನು ಬ್ರಿಟಿಶ್ ನೌಕೆಯೊಂದು ಹಿಂಬಾಲಿಸಿದೆ ಎಂದು ಬ್ರಿಟನ್‌ನ ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.

ರಜಾ ಅವಧಿಯಲ್ಲಿ ಬ್ರಿಟನ್ ಸಮೀಪ ರಶ್ಯದ ನೌಕೆಗಳ ಚಟುವಟಿಕೆ ಹೆಚ್ಚಿದೆ ಎಂದು ಸಚಿವಾಲಯ ಹೇಳಿದೆ.

ರಶ್ಯದ ಯುದ್ಧ ನೌಕೆ ಅಡ್ಮಿರಲ್ ಗೊರ್ಶ್‌ಕೊವ್ ನಾರ್ತ್ ಸೀಯಲ್ಲಿ ಸಾಗುತ್ತಿದ್ದಾಗ ಅದರ ಮೇಲೆ ನಿಗಾ ಇಡಲು ಬ್ರಿಟನ್‌ನ ನೌಕೆ ಸೇಂಟ್ ಆಲ್ಯನ್ಸ್‌ನ್ನು ಡಿಸೆಂಬರ್ 23ರಂದು ಕಳುಹಿಸಿಕೊಡಲಾಗಿತ್ತು.

ರಶ್ಯದ ಯುದ್ಧ ನೌಕೆಯನ್ನು ಹಿಂಬಾಲಿಸಿದ ರಾಯಲ್ ನೌಕಾಪಡೆ ಹಡಗು ಮಂಗಳವಾರ ಪೋರ್ಟ್ಸ್‌ವೌತ್‌ಗೆ ಹಿಂದಿರುಗಿದೆ.

‘‘ನಮ್ಮ ಜಲಪ್ರದೇಶದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲು ನಾವು ಹಿಂಜರಿಯುವುದಿಲ್ಲ ಅಥವಾ ಯಾವುದೇ ರೀತಿಯ ಆಕ್ರಮಣವನ್ನು ಸಹಿಸುವುದಿಲ್ಲ’’ ಎಂದು ಬ್ರಿಟನ್ ರಕ್ಷಣಾ ಸಚಿವ ಗ್ಯಾವಿನ್ ವಿಲಿಯಮ್‌ಸನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News