ಝಿಂಬಾಬ್ವೆ ವಿರುದ್ಧ ಟೆಸ್ಟ್‌ಗೆ ಸ್ಟೇಯ್ನ್ ಅಲಭ್ಯ

Update: 2017-12-26 18:18 GMT

ಪೋರ್ಟ್ ಎಲಿಜಬೆತ್, ಡಿ.26: ಝಿಂಬಾಬ್ವೆ ವಿರುದ್ಧ ಮಂಗಳವಾರ ಆರಂಭವಾದ ಏಕೈಕ ಚತುರ್ದಿನ ಟೆಸ್ಟ್ ಪಂದ್ಯದಿಂದ ದಕ್ಷಿಣ ಆಫ್ರಿಕದ ಪ್ರಮುಖ ವೇಗದ ಬೌಲರ್ ಡೇಲ್ ಸ್ಟೇಯ್ನಿ ಹೊರಗುಳಿದಿದ್ದಾರೆ.

ಸ್ಟೇಯ್ನ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಝಿಂಬಾಬ್ವೆ ವಿರುದ್ಧದ ಪಂದ್ಯದಿಂದ ಹಿಂದೆ ಸರಿದಿದ್ದಾರೆ.

ಶಾನ್ ಪೊಲಾಕ್(421 ವಿಕೆಟ್) ದಾಖಲೆ ಮುರಿದು ದಕ್ಷಿಣ ಆಫ್ರಿಕದ ಸಾರ್ವಕಾಲಿಕ ಶ್ರೇಷ್ಠ ಬೌಲರ್ ಎನಿಸಿಕೊಳ್ಳಲು ಸ್ಟೇಯ್ನಿಗೆ ಕೇವಲ 4 ವಿಕೆಟ್ ಅಗತ್ಯವಿದೆ. 2016ರ ನವೆಂಬರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಪರ್ತ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಸ್ಟೇಯ್ನ್‌ಗೆ ಭುಜನೋವು ಕಾಣಿಸಿಕೊಂಡಿತ್ತು. ಆನಂತರ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ನಾಯಕ ಎಫ್‌ಡು ಪ್ಲೆಸಿಸ್ ಜ್ವರದಿಂದಾಗಿ ಬಾಕ್ಸಿಂಗ್ ಡೇ ಟೆಸ್ಟ್‌ನಿಂದ ಹೊರಗುಳಿದಿದ್ದು, ಪ್ಲೆಸಿಸ್ ಅನುಪಸ್ಥಿತಿಯಲ್ಲಿ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News