ಉತ್ತರ ಪ್ರದೇಶದ ಅಂಗನವಾಡಿಗಳಲ್ಲಿ ಬಡ ಮಕ್ಕಳಿಗೆ ಆಧಾರ್ ನೆಪದಿಂದ ಆಹಾರವಿಲ್ಲ!

Update: 2017-12-27 18:21 GMT

ಭಾಗ-2

ಅಂಗನವಾಡಿ ಕಾರ್ಯಕರ್ತೆಯರಿಗಿಲ್ಲ ಬೆಂಬಲ

ತೀರಾ ಕಡಿಮೆ ವೇತನ ಪಡೆಯುವ ಅಲಿಮುನ್ನಿಸಾಳ ಕುಟುಂಬದಂತಹ ಕುಟುಂಬಗಳಿಗೆ ಅಂಗನವಾಡಿ ಕಾರ್ಯಕರ್ತೆಯರ ಗಮನದಿಂದ ತಪ್ಪಿಸಿಕೊಳ್ಳುವುದು ಸುಲಭ. ತಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗದಿರುವ ಕಾರಣ ಕೆಲಸದಲ್ಲಿ ಹೆಚ್ಚು ಆಸಕ್ತಿ ತೋರಿಸದ ಕಾರ್ಯಕರ್ತೆಯರು, ಅವರ ಮನೆಗಳಲ್ಲೇ ನಡೆಸುವ ಅಂಗನವಾಡಿಗಳಲ್ಲಿ ದುಡಿಯಬೇಕಾಗಿದೆ. ಅಲ್ಲಿ ಹೆಚ್ಚು ಮಕ್ಕಳಿಗೆ ಕುಳಿತುಕೊಳ್ಳಲು ಕೂಡ ಸಾಕಷ್ಟು ಸ್ಥಳಾವಕಾಶವಿರುವುದಿಲ್ಲ. ಬಹ್ರೈಕ್ ಜಿಲ್ಲೆಯಲ್ಲಿ 200 ಪ್ರತ್ಯೇಕ ಅಂಗನವಾಡಿಗಳನ್ನು ನಿರ್ಮಿಸಲು ಐಸಿಡಿಎಸ್ ನಿರ್ಧರಿಸಿತ್ತಾದರೂ, ಅದು 2017-18ರಲ್ಲಿ ಕೇವಲ 80 ಅಂಗನವಾಡಿಗಳ ನಿರ್ಮಾಣವನ್ನು ಮಾತ್ರ ಪೂರ್ಣಗೊಳಿಸಿದೆ.

ಬಲರಾಮ್‌ಪುರದ ಲೊಖಾವಾ ಹಳ್ಳಿಯಲ್ಲಿ ಕೆಲಸಮಾಡುವ ಅಂಗನವಾಡಿ ಕಾರ್ಯಕರ್ತೆ ಕಿರಣ್‌ದೇವಿ, ಅವರ ಇಟ್ಟಿಗೆ ಮನೆಯ ಅತ್ಯಂತ ಚಿಕ್ಕ ಕೋಣೆಯಲ್ಲೇ ಒಂದು ಅಂಗನವಾಡಿ ಕೇಂದ್ರ ನಡೆಸುತ್ತಿದ್ದಾರೆೆ. ಕಳೆದ ಎರಡು ದಶಕಗಳಿಂದ ಕಾರ್ಯವೆಸಗುತ್ತಿರುವ ಈಕೆ ಪೌಷ್ಟಿಕಾಹಾರದ ಕೊರತೆ ಇರುವ ಮಕ್ಕಳ ಒಂದು ನೋಂದಣಿ ಪುಸ್ತಕ ಇಟ್ಟುಕೊಂಡಿರು ತ್ತಾರೆ. ‘‘ಮೊದಲು ನಾನು ಮಕ್ಕಳ ಮನೆಗೆ ಹೋಗುತ್ತಿದ್ದೆ. ಈಗ ನನಗೆ ಹೆಚ್ಚು ನಡೆಯಲು ಆಗುವುದಿಲ್ಲ. ಆದ್ದರಿಂದ ಇಲ್ಲಿಗೆ ಬರುವ ತಾಯಂದಿರಿಗಷ್ಟೇ ನಾನು ಪಡಿತರ ಹಂಚುತ್ತೇನೆ’’, ಎನ್ನುತಾರೆ ಆಕೆ.

ಮಕ್ಕಳ ತೂಕ ನೋಡಲು ಅಂಗನವಾಡಿಯಲ್ಲಿ ಯಂತ್ರ (ವೇಯಿಂಗ್ ಮೆಶಿನ್) ಇರಬೇಕು. ದೇವಿಯ ಬಳಿ ಇದ್ದ ಯಂತ್ರ ಹಾಳಾದ್ದರಿಂದ, ಅವಳಿಗೊಂದು ಹೊಸ ಇಲೆಕ್ಟ್ರಾನಿಕ್ ಯಂತ್ರ ಪೂರೈಸಲಾಯಿತು. ಅದೂ ಹೆಚ್ಚು ದಿನ ಉಳಿಯಲಿಲ್ಲ. ನವೆಂಬರ್ ತಿಂಗಳಲ್ಲಿ ಜಿಲ್ಲಾಡಳಿತವು ‘‘ತೂಕದ ದಿನ’’ (ವೇಯ್ಟಾ ಡೇ) ಆಚರಿಸಿತು. ಆವತ್ತು, ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕ್ಷೇತ್ರದ ಎಲ್ಲ ಮಕ್ಕಳ ತೂಕವನ್ನು ಅಳತೆ ಮಾಡಬೇಕಾಗಿತ್ತು. ‘‘ತಾವು ಕೆಲವು ಮಕ್ಕಳ ತೂಕ ನೋಡಿದೆವು. ಅಷ್ಟರಲ್ಲಿ ಯಂತ್ರ ಕೆಲಸ ಮಾಡುವುದನ್ನು ನಿಲ್ಲಿಸಿತು. ಉಳಿದ ಮಕ್ಕಳ ತೂಕವನ್ನು ನಾವು ಅಂದಾಜು ಮಾಡಿ ಬರೆಯುವುದಲ್ಲದೆ ನಮಗೆ ಬೇರೆ ಆಯ್ಕೆ ಇರಲಿಲ್ಲ, ಎಂದಿದ್ದಾರೆ ಕಿರಣ್‌ದೇವಿ.

 ಕಳೆದ ಅಕ್ಟೋಬರ್ ತಿಂಗಳಲ್ಲಿ ತಮಗೆ ನೀಡುತ್ತಿರುವ ಗೌರವಧನ ಹೆಚ್ಚಳ ಮಾಡುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮುಷ್ಕರ ಹೂಡಿದರು. ಈಗ ಅವರಿಗೆ ತಿಂಗಳೊಂದರ ರೂ. 4,000 ನೀಡಲಾಗುತ್ತದೆ. ಎರಡು ತಿಂಗಳ ಕಾಲ ನಡೆದ ಮುಷ್ಕರ, ಆಗಲೇ ಗಂಡಾಂತರದಲ್ಲಿರುವ ಅಂಗನವಾಡಿ ವ್ಯವಸ್ಥೆಯನ್ನು ಇನ್ನಷ್ಟು ಅಸ್ತವ್ಯಸ್ತಗೊಳಿಸಿತು. ಉದಾಹರಣೆಗೆ, ‘ತೂಕದ ದಿನ’ 44 ಅಂಗನವಾಡಿಗಳಲ್ಲಿ ಕೇವಲ 22 ಮಕ್ಕಳ ತೂಕವನ್ನಷ್ಟೆ ಅಳತೆ ಮಾಡಲಾಯಿತು.

ಪೌಷ್ಟಿಕಾಹಾರ ಪರಿಹಾರ ವ್ಯವಸ್ಥೆಯ ಸೋಲು

ಅಂಗನವಾಡಿ ಕಾರ್ಯಕರ್ತೆಯರು ಗಂಭೀರ ಸ್ವರೂಪದ ಪೌಷ್ಟಿಕಾಹಾರ ಕೊರತೆ ಇರುವ ಮಕ್ಕಳನ್ನು ಗುರುತಿಸಿ ಅವರನ್ನು ಪೌಷ್ಟಿಕಾಹಾರ ಕೊರತೆ ಪರಿಹಾರ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು. ಉತ್ತರಪ್ರದೇಶದಲ್ಲಿ ಇಂತಹ 25 ಕೇಂದ್ರಗಳಿವೆ. ಮಗುವಿನ ಎತ್ತರಕ್ಕೆ ಸರಿಯಾದ ತೂಕವಿರದೆ ತೀರಾ ಕಡಿಮೆ ತೂಕವಿರುವ ಮಕ್ಕಳನ್ನು ಪೌಷ್ಟಿಕಾಹಾರದ ಕೊರತೆ ಇರುವ ಮಕ್ಕಳೆಂದು ನಿರ್ಧರಿಸಲಾಗುತ್ತದೆ. ಒಂದು ಮಗುವಿಗೆ ಕಡಿಮೆ ತೂಕದ ಜೊತೆಗೆ ಸೋಂಕು, ಊದಿಕೊಂಡ ಪಾದಗಳು ಮತ್ತು ಮುಖ ಇತ್ಯಾದಿ ಸಮಸ್ಯೆಗಳು ಇರಬಹುದು.

ಅದೇನಿದ್ದರೂ, ಬಹ್ರೈಕ್ ಮತ್ತು ಬಲರಾಮ್‌ಪುರ್ ಜಿಲ್ಲೆಗಳಲ್ಲಿ ಈ ಕೇಂದ್ರಗಳು ಖಾಲಿ ಇರುತ್ತವೆ. ಕಡಿಮೆ ವೇತನದ ಪರಿಣಾಮವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಕ್ಕಳನ್ನು ಇಲ್ಲಿಗೆ ಕರೆತರಲು ಪ್ರೇರೇಪಣೆ ಇರುವುದಿಲ್ಲ. ಅಂಗನವಾಡಿ ಮುಷ್ಕರದ ಬಳಿಕವಂತೂ ಈ ಕೇಂದ್ರಗಳಿಗೆ ಇನ್ನಷ್ಟು ಕಡಿಮೆ ಸಂಖ್ಯೆು ಮಕ್ಕಳನ್ನು ಕರೆತರಲಾಗಿತ್ತು.

 ಅತಿಸಾರ ಮತ್ತು ನ್ಯುಮೋನಿಯಾದಂತಹ ಇತರ ಕಾಯಿಲೆಗಳಿಗೆ ತುತ್ತಾದ ಮಕ್ಕಳನ್ನು ಜಿಲ್ಲಾಸ್ಪತ್ರೆಗಳಿಗೆ ತರಲಾಗಿತ್ತು. ಅಲ್ಲಿಂದ ಅವುಗಳನ್ನು ಪೌಷ್ಠಿಕಾಹಾರ ಪುನರ್ವಸತಿ ಕೇಂದ್ರಗಳಿಗೆ ತರಲಾಯಿತು. 2013-2014 ಮತ್ತು 2014-2015ರ ನಡುವೆ ಉತ್ತರಪ್ರದೇಶದಲ್ಲಿ ಪುನರ್ವಸತಿ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ ಶೇ. 30ರಷ್ಟು ಇಳಿಯಿತು. ಈ ಇಳಿಯುವಿಕೆಗೆ ಅಂಗನವಾಡಿ ಸಿಬ್ಬಂದಿಗೆ ಮಾಡುವ ಹಣ ಪಾವತಿಯಲ್ಲಿ ಆದ ವಿಳಂಬವೇ ಕಾರಣ ಎನ್ನಲಾಗಿದೆ.

ವೈದ್ಯರು ಹೇಳುವ ಪ್ರಕಾರ ಈ ವಿಶೇಷ ರೀತಿಯ ಪೌಷ್ಟಿಕಾಹಾರ ವಾರ್ಡ್‌ಗಳು ಸಮಸ್ಯೆಯನ್ನು ಪರಿಹರಿಸಲು ನೆರವಾಗುವುದಿಲ್ಲ. ‘‘ಒಂದೋ ಅವರು ಈ ವಾರ್ಡ್‌ಗಳನ್ನು ಮುಚ್ಚಿ ಬಿಡಬೇಕು, ಅಥವಾ ಪೋಷಕರು ಪೌಷ್ಟಿಕಾಹಾರದ ಕೊರತೆಯುಳ್ಳ ತಮ್ಮ ಮಕ್ಕಳನ್ನು ಇಲ್ಲಿಗೆ ಕರೆತರುವಂತೆ ನೋಡಿಕೊಳ್ಳಬೇಕು. ನಾವೀಗ ಈ ಕೇಂದ್ರಗಳ ಮೇಲೆ 2.5ರಿಂದ 3 ಲಕ್ಷ ರೂ.ಗಳ ವರೆಗೆ ಖರ್ಚು ಮಾಡುತ್ತಿದ್ದೇವೆ’’. ಎಂದಿ ದ್ದಾರೆ, ಬಹ್ರೈಕ್ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ. ಕೆ.ಕೆ. ವರ್ಮಾ. ಅವರು ಹೇಳುವಂತೆ, ಯಾವಾಗ ನೋಡಿದರೂ ಈ ಕೇಂದ್ರಗಳಲ್ಲಿ ಕೇವಲ 3ರಿಂದ 4ಹಾಸಿಗೆಗಳು ಮಾತ್ರ ಭರ್ತಿಯಾಗಿರುತ್ತವೆ ಮತ್ತು ಒಮ್ಮೆ ಮಗು ಸ್ವಲ್ಪ ಚೇತರಿಸಿಕೊಂಡರೆ ಸಾಕು; ತಾಯಂದಿರು ಕೆಲವೇ ದಿನಗಳೊಳಗಾಗಿ ತಮ್ಮ ಮಕ್ಕಳೊಂದಿಗೆ ಆಸ್ಪತ್ರೆಯಿಂದ ಓಡಿಹೋಗುತ್ತಾರೆ.

ಒಂದು ನಿರ್ದಿಷ್ಟ ಗುರಿಯ ತೂಕವನ್ನು ಪಡೆಯುವವರೆಗೆ, ಅಂದರೆ ಸುಮಾರು 7ರಿಂದ 21 ದಿನಗಳವರೆಗೆ, ಮಕ್ಕಳು ಒಂದು ಪುನರ್ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಆದರೆ, ‘‘ಮಹಿಳೆಯರು ತಮ್ಮ ದಿನಕೂಲಿ ದುಡಿಮೆಯನ್ನು ಕಳೆದುಕೊಂಡು, ಪೌಷ್ಟಿಕಾಹಾರ ಪುನರ್ವಸತಿ ಕೇಂದ್ರದಲ್ಲಿರುವ ಒಂದು ಮಗುವನ್ನು ನೋಡಿಕೊಳ್ಳಲಿಕ್ಕಾಗಿ ತಮ್ಮ ಇತರ ಮಕ್ಕಳನ್ನು ಮನೆಯಲ್ಲಿ ಬಿಡಬೇಕೆಂದು ನಿರೀಕ್ಷಿಸುವುದು ಪ್ರಾಯೋಗಿಕವಲ್ಲ’’ ಎನ್ನುತ್ತಾರೆ ಬಲರಾಂಪುರದ ಪುನರ್ವಸತಿ ಕೇಂದ್ರದ ನಿರ್ವಾಹಕ ಡಾ. ಅಜಯ್ ಪಾಂಡೆ.

 ಪೌಷ್ಟಿಕಾಹಾರ ಪುನರ್ವಸತಿ ಕಾರ್ಯಕ್ರಮವು ಭಾಗವತ್‌ಪುರ ಹಳ್ಳಿಯ ನಿವಾಸಿ ರಝಿಯಾಕತೂನ್‌ರಿಗೆ ಹೆಚ್ಚೇನೂ ಉಪಯೋಗಕರವಾಗಿಲ್ಲ. ಆಕೆಗೆ ಹತ್ತು ಮಕ್ಕಳಿದ್ದಾರೆ. ಅವರು 18ರಿಂದ 2 ವರ್ಷದ ವಯೋಮಾನದ ಮಕ್ಕಳು. ಅವರ 2ರ ಹರೆಯದ ರೆಹೆನ್ಯೂ ಮಾ ಮತ್ತು 3 ವರ್ಷದ ಖುಷ್‌ನೂಮಾ ತೀವ್ರ ಸ್ವರೂಪದ ಪೌಷ್ಟಿಕಾಹಾರದ ಕೊರತೆಯಿಂದ ಬಳಲುತ್ತಿವೆ. ಈ ಎರಡು ಹೆಣ್ಣು ಮಕ್ಕಳನ್ನು ಕತೂನ್ ಆ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅೇನೂ ಮೊದಲ ಬಾರಿಯಲ್ಲ.

ಸಮಸ್ಯೆ ಎಂದರೆ, ಒಮ್ಮೆ ಮಕ್ಕಳ ತೂಕ ಹೆಚ್ಚಿ ಅವುಗಳು ಕೇಂದ್ರದಿಂದ ಬಿಡುಗಡೆಯಾದ ಬಳಿಕ ಸ್ವಲ್ಪ ಸಮಯದಲ್ಲಿ ಪುನಃ ತೂಕ ಕಳೆದುಕೊಳ್ಳುತ್ತವೆ. ಮನೆಯಲ್ಲಿ ತಾಯಿ, ಮಗುವಿಗೆ ಎಷ್ಟು ಗಮನ ನೀಡುತ್ತಾಳೆ ಮತ್ತು ಮಗು ಎಷ್ಟು ಸೋಂಕಿಗೆ ಒಳಗಾಗುತ್ತದೆ ಎಂಬುದನ್ನವಲಂಬಿಸಿ ಮಕ್ಕಳ ತೂಕ ಹೆಚ್ಚು ಕಡಿಮೆಯಾಗುತ್ತದೆ.

ಕತೂನ್‌ನಂತಹ ಮಹಿಳೆಯರು ಮನೆವಾರ್ತೆ ನೋಡಿಕೊಂಡು ತಮ್ಮ ಎಲ್ಲ ಮಕ್ಕಳ ಬಗ್ಗೆಯೂ ಗಮನ ನೀಡಬೇಕಾದುದರಿಂದ ಸೋಂಕು ತಗಲಿದ ಮಗುವಿಗೆ ಸಾಕಷ್ಟು ಆರೈಕೆ ದೊರೆಯುವುದಿಲ್ಲ. ಪೌಷ್ಟಿಕ ಆಹಾರದ ಕೊರತೆಯಿರುವ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವುಗಳು ಕಾಯಿಲೆಗೆ ತುತ್ತಾಗುತ್ತಾ ತೂಕ ಕಳೆದುಕೊಳ್ಳುತ್ತಾ ಹೋಗುತ್ತವೆ.

ಕೃಪೆ: scroll.in

Writer - ಪ್ರಿಯಾಂಕಾ ವೋರಾ

contributor

Editor - ಪ್ರಿಯಾಂಕಾ ವೋರಾ

contributor

Similar News

ಜಗದಗಲ
ಜಗ ದಗಲ