×
Ad

ಝಿಂಬಾಬ್ವೆ ಉಪಾಧ್ಯಕ್ಷರಾಗಿ ಸೇನೆ ಮಾಜಿ ಮುಖ್ಯಸ್ಥ ಪ್ರಮಾಣ ವಚನ

Update: 2017-12-28 22:47 IST

ಹರಾರೆ, ಡಿ.28: ಕಳೆದ ತಿಂಗಳು ಝಿಂಬಾಬ್ವೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸಿ ಅಧ್ಯಕ್ಷ ರಾಬರ್ಟ್ ಮೊಗಾಬೆಯ 37 ವರ್ಷದ ಆಡಳಿತಕ್ಕೆ ಕೊನೆ ಹಾಡಿದ ಸೇನಾ ಮುಖ್ಯಸ್ಥ ಕಾನ್ಸ್ಟೆಂಟಿನೊ ಚಿವೆಂಗ ಗುರುವಾರದಂದು ಝಿಂಬಾಬ್ವೆಯ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

 ನವೆಂಬರ್ 15ರಂದು ಸೇನೆಯು ದೇಶದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಳ್ಳುವ ಮೂಲಕ ಎಮ್ಮರ್ಸನ್ ನಂಗಾಗ್ವರನ್ನು ಝಿಂಬಾಬ್ವೆಯ ನೂತನ ಅಧ್ಯಕ್ಷರಾಗಿ ನೇಮಿಸಿತ್ತು. ಸದ್ಯ ಚಿವೆಂಗ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಝಿಂಬಾಬ್ವೆಯಲ್ಲಿ ಸೇನಾ ಮುಖ್ಯಸ್ಥರು ಆಡಳಿತ ಸ್ಥಾನಗಳನ್ನು ಅಲಂಕರಿಸುವ ಪ್ರಕ್ರಿಯೆಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News