ಟಿಟಿವಿ ದಿನಕರನ್‌ರ ಒಟ್ಟು 132 ಬೆಂಬಲಿಗರ ಉಚ್ಚಾಟನೆ
Update: 2017-12-29 20:36 IST
ಚೆನ್ನೈ, ಡಿ. 29: ಟಿಟಿವಿ ದಿನಕರನ್ ಬೆಂಬಲಿಗರ ವಿರುದ್ಧದ ಶಿಸ್ತು ಕ್ರಮ ಮುಂದುವರಿಸಿರುವ ಎಐಎಡಿಎಂಕೆ ಇದುವರೆಗೆ ಒಟ್ಟು 132 ಬೆಂಬಲಿಗರನ್ನು ಉಚ್ಚಾ ಟಿಸಿದೆ.
ಪಕ್ಷದ ತ್ರಿಪುರ, ಪುದುಕೋಟೈ ಹಾಗೂ ಧರ್ಮಪುರಿಯ ಜಿಲ್ಲಾ ಘಟಕಗಳಿಂದ ಒಟ್ಟು 132 ಬೆಂಬಲಿಗರನ್ನು ಉಚ್ಚಾಟಿಸಲಾಗಿದೆ ಎಂದು ಪಕ್ಷದ ಸಂಚಾಲಕ ಒ. ಪನ್ನೀರ್‌ಸೆಲ್ವಂ ಹಾಗೂ ಸಹ ಸಂಚಾಲಕ ಕೆ. ಪಳನಿಸ್ವಾಮಿ ಘೋಷಿಸಿದ್ದಾರೆ.
ಪಕ್ಷದಿಂದ ಒಟ್ಟು 132 ಜನರನ್ನು ಉಚ್ಚಾಟಿಸಲಾಗಿದೆ. ಈ ಪಟ್ಟಿಯಲ್ಲಿ ತಿರುಪುರ ಮೊದಲ ಸ್ಥಾನದಲ್ಲಿದೆ. ಇಲ್ಲಿಂದ 65 ಜನರನ್ನು ವಜಾಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.