ದಿಲ್ಲಿ ದರ್ಬಾರ್

Update: 2017-12-30 18:47 GMT

ನಾಯ್ಡು ಮನಸ್ಸು ಬದಲಾವಣೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಪಾಕಿಸ್ತಾನದ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದಾಗ ದೇಶದ ಮಾಜಿ ಪ್ರಧಾನಿ ಮತ್ತು ಮಾಜಿ ಉಪರಾಷ್ಟ್ರಪತಿಗೆ ಅಗೌರವ ಸೂಚಿಸುವುದು ಅವರ ಉದ್ದೇಶವಾಗಿರಲಿಲ್ಲ ಎಂದು ಕಳೆದ ವಾರ ರಾಜ್ಯಸಭೆಯಲ್ಲಿ ಕ್ಷಮೆ ಕೇಳುವ ರೀತಿಯಲ್ಲಿ ಅರುಣ್ ಜೇಟ್ಲಿ ಹೇಳಿಕೆ ನೀಡಿ ಕೊನೆಗೂ ಬಿಜೆಪಿ ತನ್ನ ಗಾಯವನ್ನು ತಾನೇ ನೆಕ್ಕುವ ಹಾಗಾಯಿತು.

ಬಿಜೆಪಿಯು ಕಾಂಗ್ರೆಸ್ ವಿರುದ್ಧ ಪ್ರತೀಕಾರ ತೀರಿಸಲು ಕಾಯುತ್ತಿತ್ತು ಮತ್ತು ರಾಹುಲ್ ಗಾಂಧಿ ತಮ್ಮ ಟ್ವೀಟ್‌ನಲ್ಲಿ ಅರುಣ್ ಜೇಟ್ಲಿಯನ್ನು ಉದ್ದೇಶಪೂರ್ವಕವಾಗಿ ಜೇಟ್ಲೈ ಎಂದು ತಪ್ಪಾಗಿ ಸಂಬೋಧಿಸುವ ಮೂಲಕ ಈ ಅವಕಾಶವನ್ನು ನೀಡಿದರು. ಕೂಡಲೇ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಮಂಡನೆ ನೋಟಿಸ್ ಮಾಡಿತು. ರಾಜ್ಯಸಭೆ ಮುಖ್ಯಸ್ಥರಾಗಿರುವ ಎಂ. ವೆಂಕಯ್ಯ ನಾಯ್ಡು ಮೊದಲಿಗೆ ರಾಹುಲ್ ಗಾಂಧಿ ರಾಜ್ಯಸಭೆಯ ಸದಸ್ಯರಲ್ಲ ಎಂದು ಹೇಳಿ ಕಲಾಪವನ್ನು ಹದಿನೈದು ನಿಮಿಷಗಳ ಕಾಲ ಮುಂದೂಡಿದರು. ಆದರೆ ನಂತರ ವಾಪಸಾದ ಅವರು ಈ ನೋಟಿಸ್‌ಅನ್ನು ಪರಿಶೀಲಿಸುವುದಾಗಿ ತಿಳಿಸಿದ್ದರು. ಆ ವೇಳೆ ಎಲ್ಲ ಕಾಂಗ್ರೆಸ್ ಸದಸ್ಯರ ತಲೆಯಲ್ಲಿ ಇದ್ದ ಒಂದೇ ಪ್ರಶ್ನೆಯೆಂದರೆ ನಾಯ್ಡು ತಮ್ಮ ಮನಸ್ಸನ್ನು ಬದಲಿಸಲು ಕಾರಣವಾದರೂ ಏನು ಎಂಬುದು. ಒಬ್ಬ ಸಂಸದರು ಅಮಿತ್ ಶಾ ಅಲ್ಲಿ ಇದ್ದಿರಬಹುದು ಎಂದು ಅಣಕವಾಡಿದರು.
 


ಸಂಸ್ಕಾರಿ ಮದುವೆ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತ ಬಿಟ್ಟು ಇಟಲಿಯಲ್ಲಿ ವಿವಾಹವಾಗಿರುವುದನ್ನೇ ದೊಡ್ಡ ವಿಷಯ ಮಾಡಿದ ಮಧ್ಯ ಪ್ರದೇಶದ ಗುನಾ ಕ್ಷೇತ್ರದ ಬಿಜೆಪಿ ಶಾಸಕ ಪನ್ನಾ ಲಾಲ್ ಶಕ್ಯಾ ವಿರುಷ್ಕಾ ಜೋಡಿಯ ಮೇಲೆ ಟೀಕೆಗಳ ಸುರಿಮಳೆಗರೆದಿದ್ದರು. ರಾಮ ಮತ್ತು ಕೃಷ್ಣಾರಂಥ ದೇವತೆಗಳು ವಿವಾಹವಾಗಿರುವ ಭಾರತದಲ್ಲಿ ಕೊಹ್ಲಿ ಮತ್ತು ಅನುಷ್ಕಾ ವಿವಾಹವಾಗದಿರುವುದಕ್ಕೆ ಶಾಸಕರು ಅವರನ್ನು ರಾಷ್ಟ್ರದ್ರೋಹಿಗಳೆಂದು ಕರೆದರು. ಆದರೆ ‘ವಿರುಷ್ಕಾ’ ಜೋಡಿ ಮುಂಬೈಯಲ್ಲಿ ಆಯೋಜಿಸಿದ್ದ ಔತಣಕೂಟಕ್ಕೆ ಸಿದ್ಧಪಡಿಸಿದ ಕರೆಯೋಲೆಯನ್ನು ಕಂಡ ನಂತರ ಪನ್ನಾ ಲಾಲ್ ಮನಸ್ಸಿಗೆ ನೆಮ್ಮದಿಯಾಗಿರಬಹುದು. ಈ ಆಮಂತ್ರಣ ಪತ್ರಿಕೆಯಲ್ಲಿ ಔತಣಕೂಟಕ್ಕೆ ಆಹ್ವಾನಿಸುವವರು ವಿರುಷ್ಕಾರ ಅಜ್ಜಂದಿರು ಎಂದು ಮುದ್ರಿಸಲಾಗಿತ್ತು. ಜೊತೆಗೆ ಅದರಲ್ಲಿ ಹಿಂದೂಗಳಿಗೆ ಪವಿತ್ರವಾಗಿರುವ ತುಳಸಿ ಗಿಡವನ್ನು ಕೂಡಾ ಇಡಲಾಗಿತ್ತು ಮತ್ತು ಶುದ್ಧ ದೇಸೀ ತುಪ್ಪದಿಂದ ಮಾಡಿದ ಸಿಹಿತಿಂಡಿಯನ್ನು ಇಡಲಾಗಿತ್ತು. ಕುಟುಂಬ ಸದಸ್ಯರನ್ನು ಮುಖ್ಯವಾಗಿ ಹಿರಿಯರನ್ನು ವಿರುಷ್ಕಾ ಖುದ್ದಾಗಿ ಸ್ವಾಗತಿಸಿದರು. ಈ ವಿಷಯದಲ್ಲಿ ಸಂಸ್ಕಾರ ಪ್ರತೀ ಹಂತದಲ್ಲೂ ಮೇಳೈಸಿತ್ತು.


ಬೆಳ್ಳಿಪರದೆಯಿಂದ ಪ್ರೇರೇಪಿತ

ರಾಹುಲ್ ಗಾಂಧಿ ಜೊತೆ ಆ ಶಕ್ತಿಯು ಇದ್ದಿಲ್ಲದಿರಬಹುದು ಆದರೆ ಗುಜರಾತ್‌ನಲ್ಲಿ ಕಾಂಗ್ರೆಸ್ ಉತ್ತಮ ನಿರ್ವಹಣೆ ತೋರುವಲ್ಲಿ ಅವರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಆದರೆ ಸೋಲು ಸೋಲೇ. ಆದರೆ ಈ ಸೋಲಿನಿಂದ ಖುದ್ದು ರಾಹುಲ್ ಕೂಡಾ ಬಾಧಿತರಾಗಿಲ್ಲ. ಎಷ್ಟರವರೆಗೆ ಎಂದರೆ ಗುಜರಾತ್‌ನಲ್ಲಿ ಬಿಜೆಪಿ ಜಯಗಳಿಸಿದ ಕೇವಲ ಆರು ಗಂಟೆಗಳ ನಂತರ ರಾಹುಲ್ ಗಾಂಧಿ ಚಿತ್ರಮಂದಿರಕ್ಕೆ ತೆರಳಿ ಆಂಗ್ಲ ಸಿನೆಮಾ ‘ಸ್ಟಾರ್ ವಾರ್ಸ್’ ವೀಕ್ಷಿಸಿದ್ದರು. ಎಂದಿನಂತೆ ಮಾಧ್ಯಮಗಳು ರಾಹುಲ್‌ರ ಈ ನಿರುದ್ವಿಗ್ನತೆಯನ್ನು ಕಂಡು ಆಘಾತವಾದಂತೆ ವರ್ತಿಸಿದವು. ಬಿಜೆಪಿಯ ಬೆಂಬಲಿಗರು ಕೂಡಾ ಅವರ ಜೊತೆ ಸೇರಿಕೊಂಡು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಲು ಆರಂಭಿಸಿದರು. ಆದರೆ ಅದು ಹೆಚ್ಚು ಸಮಯ ಬಾಳಲಿಲ್ಲ.

1958ರಲ್ಲಿ ಭಾರತೀಯ ಜನಸಂಘವು ದಿಲ್ಲಿ ಮೆಟ್ರೊಪೊಲಿಟನ್ ಕೌನ್ಸಿಲ್ ಚುನಾವಣೆಯಲ್ಲಿ ಸೋತ ನಂತರ ಖಿನ್ನರಾದ ಎಲ್.ಕೆ ಅಡ್ವಾಣಿ ಮತ್ತು ಗದ್ಗದಿತರಾಗಿದ್ದ ಎ.ಬಿ. ವಾಜಪೇಯಿ ತಮ್ಮನ್ನು ಸಮಾಧಾನಪಡಿಸಿಕೊಳ್ಳಲು ದಿಲ್ಲಿಯ ಗೊಲ್ಚಾ ಸಿನೆಮಾ ಮಂದಿರಕ್ಕೆ ತೆರಳಿ ರಾಜ್ ಕಪೂರ್ ಮತ್ತು ಮಾಲಾ ಸಿನ್ಹಾ ನಟನೆಯ ‘ಫಿರ್ ಸುಬಾ ಹೋಗಿ’ ಚಿತ್ರವನ್ನು ವೀಕ್ಷಿಸಿದ್ದರು ಎಂದು ಯಾರೋ ಹೇಳಿದರು. ಈ ಚಿತ್ರವು ವಾಜಪೇಯಿ ತಮ್ಮ ಮುಂದಿನ ಕವನ ‘ಆವೋ ಫಿರ್ ಸೆ ದಿಯಾ ಜಲಾಯೆ’ಯನ್ನು ಬರೆಯಲು ಸ್ಫೂರ್ತಿ ನೀಡಿತ್ತು. ವಾಜಪೇಯಿಯವರು ಈ ಸಿನೆಮಾವನ್ನು ಅದರ ಹೆಸರಲ್ಲಿರುವ ಉತ್ತಮ ಭವಿಷ್ಯದ ಭರವಸೆಯ ಕಾರಣದಿಂದ ವೀಕ್ಷಿಸಿದರೇ ಅಥವಾ ಫ್ಯೊಡೊರ್ ಡೊಸ್ಟೊಸ್ಕಿಯ ಅಪರಾಧ ಮತ್ತು ಶಿಕ್ಷೆಯ ಕಥಾನಕದ ಬಾಲಿವುಡ್ ಅವತರಣಿಕೆಯನ್ನು ನೋಡುವ ಸಲುವಾಗಿ ವೀಕ್ಷಿಸಿದ್ದರೋ ಗೊತ್ತಿಲ್ಲ. ಆದರೆ ಅಡ್ವಾಣಿಯವರು ಹೇಳುವಂತೆ ಗೋಲ್ಚಾ ಚಿತ್ರಮಂದಿರದಲ್ಲಿದ್ದ ಅಗ್ಗದ ಟಿಕೆಟ್ ದರವು ಅವರನ್ನು ಈ ಚಿತ್ರಮಂದಿರಕ್ಕೆ ಕೊಂಡೊಯ್ದಿತ್ತು.


ಜಾವ್ಡೆಕರ್ ಸಾಂಪ್ರದಾಯಿಕ ಧಿರಿಸಿನ ಪ್ರೀತಿ

ಬಹುತೇಕ ಎಲ್ಲಾ ವಿಷಯಗಳಲ್ಲೂ ವಿವಾದ ಹುಟ್ಟುಹಾಕುತ್ತಿದ್ದ ಸ್ಮತಿ ಇರಾನಿಯಂತಲ್ಲದೆ ಈಗಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವ್ಡೆಕರ್ ಅವರು ಸಾಧಾರಣವಾಗಿ ಶಾಂತವಾಗಿಯೇ ಇರುತ್ತಾರೆ. ಆದರೆ ಅವರು ವೌನವಾಗಿಯೇ ತಮ್ಮ ಕೆಲಸ ಮಾಡುತ್ತಾರೆ ಮತ್ತು ತಮ್ಮ ಅಧಿಕಾರವನ್ನು ತಮ್ಮದೇ ರೀತಿಯಲ್ಲಿ ಚಲಾಯಿಸುತ್ತಿದ್ದಾರೆ. ಈಗೀಗ ಅವರು ಕೂಡಾ ಸಂಪ್ರದಾಯ ಮತ್ತು ಸಂಸ್ಕೃತಿಯ ರಾಗವನ್ನು ಆಲಾಪಿಸಲು ಆರಂಭಿಸಿದ್ದಾರೆ. ಘಟಿಕೋತ್ಸವದ ಸಂದರ್ಭಗಳಲ್ಲಿ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸುವಂತೆ ಪ್ರೋತ್ಸಾಹಿಸಲು ಅವರು ಉತ್ಸುಕರಾಗಿರುವಂತೆ ತೋರುತ್ತದೆ. ಇತ್ತೀಚೆಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ವಿವಿಧ ಘಟಿಕೋತ್ಸವಗಳಿಗೆ ಧರಿಸುವ ಬಟ್ಟೆಗಳ ಚಿತ್ರಗಳನ್ನು ರಚಿಸಿದೆ. ಇವುಗಳಲ್ಲಿ ಬಹುತೇಕ ಧಿರಿಸುಗಳು ಭಾರತೀಯ ಸಾಂಪ್ರದಾಯಿಕ ಧಿರಿಸನ್ನು ಹೋಲುತ್ತವೆ ಮತ್ತು ಇವುಗಳ ಚಿತ್ರಗಳನ್ನು ಸಚಿವಾಲಯದ ಜಾಲತಾಣದಲ್ಲಿ ಹಾಕಲಾಗಿದೆ. ಇದರ ಹಿಂದಿನ ಉದ್ದೇಶ ವಿಶ್ವವಿದ್ಯಾನಿಲಯಗಳು ಮತ್ತು ಶಾಲೆಗಳು ಅಳವಡಿಸಿಕೊಳ್ಳಬಹುದಾದ ವಿವಿಧ ಧಿರಿಸುಗಳ ಸಂಗ್ರಹವನ್ನು ರಚಿಸುವುದಾಗಿದೆ.


ಗೋಯೆಲ್‌ರ ವಾಜಪೇಯಿ ಪ್ರೇಮ
ಡಿಸೆಂಬರ್ 25 ಬಂತೆಂದರೆ ಕೇಂದ್ರ ಸಚಿವ ವಿಜಯ್ ಗೋಯೆಲ್‌ಗಿಂತ ಹೆಚ್ಚು ಸಂತೋಷಪಡುವವರು ಬೇರೊಬ್ಬರು ಇರಲಿಕ್ಕಿಲ್ಲ. ಇಲ್ಲ, ಅವರು ಕ್ರಿಸ್ಮಸ್ ಬಗ್ಗೆ ಅಷ್ಟೊಂದು ಉತ್ಸುಕರಾಗಿಲ್ಲ ಆದರೆ ಅಂದು ಎ.ಬಿ ವಾಜಪೇಯಿಯವರ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಖುಷಿಪಡುತ್ತಾರೆ. ಬಿಜೆಪಿಯ ಹಿರಿಯ ನಾಯಕರ ಅಚ್ಚುಮೆಚ್ಚು ಈ ಗೋಯೆಲ್ ಎಂದು ಹೇಳಲಾಗುತ್ತದೆ. ಈ ವರ್ಷ ಕೂಡಾ ಅವರ ವಾಜಪೇಯಿ ಪ್ರೇಮದಲ್ಲಿ ಏನೂ ಕೊರತೆಯಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡಾ ಸಂಸತ್ ವ್ಯವಹಾರಗಳ ರಾಜ್ಯ ಸಚಿವರಾಗಿರುವ ಗೋಯೆಲ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾಜಪೇಯಿ ಹುಟ್ಟುಹಬ್ಬಕ್ಕೆ ಸಂಬಂಧಪಟ್ಟ ಭಿತ್ತಿಪತ್ರಗಳು ದಿಲ್ಲಿಯಲ್ಲಿ ಎಲ್ಲೆಡೆಯೂ ರಾರಾಜಿಸುತ್ತಿತ್ತು ಮತ್ತು ಅದಕ್ಕೆ ಪ್ರತಿಫಲವಾಗಿ ಪ್ರಧಾನಿ ಮೋದಿ ವಿಜಯ್ ಗೋಯೆಲ್ ಜೊತೆ ವಾಜಪೇಯಿ ನಿವಾಸಕ್ಕೆ ಅವರ ಹುಟ್ಟುಹಬ್ಬದಂದು ತೆರಳಿದ್ದರು. ಸದ್ಯ ಖಾಯಿಲೆಪೀಡಿತರಾಗಿರುವ ವಾಜಪೇಯಿ ಜನರನ್ನು ಗುರುತಿಸುವ ಶಕ್ತಿಯನ್ನು ಕಳೆದುಕೊಂಡಿದ್ದು ಗೋಯೆಲ್ ಅವರ ಪ್ರಯತ್ನದ ಬಗ್ಗೆ ತಿಳಿಯದಿರಬಹುದು. ಆದರೆ ಗೋಯೆಲ್ ಬಗ್ಗೆ ಇತರ ಅನೇಕರು ಬಹಳ ಉತ್ಸುಕರಾಗಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News