ಐಎಂಡಿಬಿ 2025ರ ಜನಪ್ರಿಯರ ಪಟ್ಟಿಯಲ್ಲಿ ಮಿಂಚಿದ ಬಾಲಿವುಡ್: ಕಾಂತಾರ ನಿರ್ದೇಶಕರಿಗೆ ಜಾಗವಿಲ್ಲ!
Photo| indianexpress.
ಐಎಂಡಿಬಿ 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯನ್ನು ಅನಾವರಣಗೊಳಿಸುವ ಸಮಯದಲ್ಲಿ ಬಾಲಿವುಡ್‌ಗೆ ಪ್ರಾಮುಖ್ಯತೆ ದೊರೆತಿದ್ದು, ಜನಪ್ರಿಯ ನಿರ್ದೇಶಕರ ಪಟ್ಟಿಯಲ್ಲಿ ರಿಷಬ್ ಶೆಟ್ಟಿಗೆ ಸ್ಥಾನವಿಲ್ಲ.
ವರ್ಷದ ಜನಪ್ರಿಯ ಸಿನಿಮಾ ಮತ್ತು ತಾರೆಯರನ್ನು ಆರಿಸುವಲ್ಲಿ ಸಿನಿಪ್ರೇಮಿಗಳು ಬಾಲಿವುಡ್‌ನ ಪ್ರೇಮ ಕಥಾನಕ ‘ಸಯ್ಯಾರ’ಗೆ ಮಣೆ ಹಾಕಿದ್ದಾರೆ. ‘ಸಯ್ಯಾರ’ ಸಿನಿಮಾದ ತಾರೆಯರು ಮತ್ತು ನಿರ್ದೇಶಕರು ಐಎಂಡಿಬಿ 2025ರ ಪ್ರಥಮ ಸ್ಥಾನ ಪಡೆದಿದ್ದಾರೆ.
ಐಎಂಡಿಬಿ 2025ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯನ್ನು ಅನಾವರಣಗೊಳಿಸುವ ಸಮಯದಲ್ಲಿ ಬಾಲಿವುಡ್‌ಗೆ ಮಾನ್ಯತೆ ದೊರೆತಿದ್ದು, ಕನ್ನಡದ ‘ಕಾಂತಾರ’ ಸಿನಿಮಾದ ರುಕ್ಮಿಣಿ ವಾಸಂತ್ ಮತ್ತು ರಿಷಬ್ ಶೆಟ್ಟಿ 9 ಮತ್ತು 10ನೇ ಸ್ಥಾನ ಪಡೆದಿದ್ದಾರೆ. ಕನ್ನಡದಿಂದ ತೆಲುಗು ಮತ್ತು ಹಿಂದಿಗೆ ವಲಸೆ ಹೋಗಿರುವ ರಶ್ಮಿಕಾ ಮಂದಣ್ಣ 6ನೇ ಸ್ಥಾನ ಗಳಿಸಿದ್ದಾರೆ. ಮೊದಲ ಎರಡು ಸ್ಥಾನಗಳನ್ನು ‘ಸೈಯಾರ’ ಸಿನಿಮಾದ ತಾರೆಯರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಪಡೆದಿದ್ದಾರೆ. 2024ರ ಪಟ್ಟಿಯಿಂದ ಮರಳಿ ಈ ವರ್ಷವೂ ಬಂದ ಹೆಸರುಗಳೆಂದರೆ ಇಶಾನ್ ಕಟ್ಟರ್ ಮತ್ತು ತೃಪ್ತಿ ದಿಮ್ರಿ.
ಮೊದಲ ಬಾರಿಗೆ ಐಎಂಡಿಬಿ ಅತ್ಯಂತ ಜನಪ್ರಿಯ ಭಾರತೀಯ ನಿರ್ದೇಶಕರ ಪಟ್ಟಿಯನ್ನೂ ಬಿಡುಗಡೆ ಮಾಡಿದ್ದು, ಮತ್ತೆ ಬಾಲಿವುಡ್‌ನ ‘ಸಯ್ಯಾರ’ ಸಿನಿಮಾದ ನಿರ್ದೇಶಕ ಮೋಹಿತ್ ಸೂರಿ ಮೊದಲ ಸ್ಥಾನ ಪಡೆದಿದ್ದಾರೆ. ಆದರೆ ನಿರ್ದೇಶಕರ ಪಟ್ಟಿಯಲ್ಲಿ ರಿಷಬ್ ಶೆಟ್ಟಿಗೆ ಸ್ಥಾನ ದೊರೆತಿಲ್ಲ.
ಜನಪ್ರಿಯ ತಾರೆಯರ ಪಟ್ಟಿಯಲ್ಲಿ ಬಾಲಿವುಡ್‌ನ ಹೆಸರುಗಳೇ ಹೆಚ್ಚಾಗಿವೆ. ಜನಪ್ರಿಯ ನಿರ್ದೇಶಕರ ಪಟ್ಟಿಯಲ್ಲಿ ಮಲಯಾಳಂ ಮತ್ತು ತಮಿಳು ಸಿನಿಮಾದ ನಿರ್ದೇಶಕರಿಗೆ ಸ್ಥಾನ ದೊರೆತಿದೆ.
2025ರ ಭಾರತದ ಜನಪ್ರಿಯ ತಾರೆಯರು
1. ಅಹಾನ್ ಪಾಂಡೆ – ಸಯ್ಯಾರ
2. ಅನೀತ್ ಪಡ್ಡಾ – ಸಯ್ಯಾರ
3. ಆಮೀರ್ ಖಾನ್– ಸಿತಾರೆ ಜಮೀನ್ ಪರ್
4. ಇಶಾನ್ ಖಟ್ಟರ್ – ಹೋಂಬೌಂಡ್
5. ಲಕ್ಷ್ಯ – ಬ್ಯಾಡ್ಸ್ ಆಫ್ ಬಾಲಿವುಡ್
6. ರಶ್ಮಿಕಾ ಮಂದಣ್ಣ– ಛಾವಾ, ಸಿಕಂದರ್, ಥಾಮಾ, ದ ಗರ್ಲ್ ಫ್ರೆಂಡ್
7. ಕಲ್ಯಾಣ್ ಪ್ರಿಯದರ್ಶನ್ – ಲೋಕ, ಚಾಪ್ಟರ್ 1
8. ತೃಪ್ತಿ ಡಿಮ್ರಿ – ಧಡಕ್ 2
9. ರುಕ್ಮಿಣಿ ವಾಸಂತ್ – ಕಾಂತಾರ
10. ರಿಷಬ್ ಶೆಟ್ಟಿ – ಕಾಂತಾರ
ಭಾರತದ ಜನಪ್ರಿಯ ನಿರ್ದೇಶಕರು
1. ಮೋಹಿತ್ ಸೂರಿ – ಸಯ್ಯಾರ
2. ಆರ್ಯನ್ ಖಾನ್ – ಬ್ಯಾಡ್ಸ್ ಆಫ್ ಬಾಲಿವುಡ್
3. ಲೋಕೇಶ್ ಕನಕರಾಜ – ಕೂಲಿ
4. ಅನುರಾಗ್ ಕಶ್ಯಪ್ – ನಿಶಾಂಚಿ
5. ಪೃಥ್ವಿರಾಜ್ ಸುಕುಮಾರನ್ – L2: ಎಂಪುರನ್
6. ಆರ್‌ಎಸ್ ಪ್ರಸನ್ನ – ಸಿತಾರೆ ಜಮೀನ್ ಪರ್
7. ಅನುರಾಗ್ ಬಸು – ಮೆಟ್ರೋ ಇನ್ ದಿನೋ
8. ಡಾಮಿನಿಕ್ ಅರುಣ್ – ಲೋಕ, ಚಾಪ್ಟರ್ 1
9. ಲಕ್ಷ್ಮಣ್ ಉಟೇಕರ್ – ಛಾವಾ
10. ನೀರಜ್ ಘಯ್ವಾನ್ – ಹೋಂಬೌಂಡ್
ಐಎಂಡಿಬಿ ತಾರೆಯರಿಗೆ ಶ್ರೇಣಿ ನೀಡುವ ಕ್ರಮವೇನು?
ಐಎಂಡಿಬಿಯ ಶ್ರೇಣಿಗಳು ಅದರ ಸ್ಟಾರ್‌ಮೀಟರ್ ಮೂಲಕ ನೀಡಲಾಗುತ್ತದೆ. ಅದು ಸೈಟ್‌ನಲ್ಲಿ ಪುಟಗಳನ್ನು ನೋಡಿರುವುದನ್ನು ಆಧರಿಸಿ ಜನಪ್ರಿಯತೆಯನ್ನು ಅಳೆಯುತ್ತದೆ. ಐಎಂಡಿಬಿಯಲ್ಲಿ ಜನರು ಯಾರನ್ನು ಮತ್ತು ಏನನ್ನು ಹುಡುಕುತ್ತಾರೆ ಎನ್ನುವ ಆಲ್ಗಾದರಿಂದ ಆಧರಿಸಿ ಶ್ರೇಣಿಗಳನ್ನು ನೀಡಲಾಗುತ್ತದೆ. ಸ್ಟಾರ್‌ಮೀಟರ್ ಯಾರು ಹೆಚ್ಚು ಟ್ರೆಂಡ್ ಆಗುತ್ತಾರೆ ಎನ್ನುವುದನ್ನು ಪರಿಗಣಿಸುತ್ತದೆಯೇ ವಿನಾ ಯಾರು ಅತ್ಯುತ್ತಮ ಅಥವಾ ಉತ್ತಮ ವಿಮರ್ಶೆ ಪಡೆದಿದ್ದಾರೆ ಎನ್ನುವುದನ್ನು ತೋರಿಸುವುದಿಲ್ಲ.