ಬ್ರೆಝಿಲ್ ಜೈಲಿನಲ್ಲಿ ಹಿಂಸೆ: 9 ಕೈದಿಗಳ ಸಾವು

Update: 2018-01-02 17:19 GMT

ಸಾವೊ ಪೌಲೊ (ಬ್ರೆಝಿಲ್), ಜ. 2: ಬ್ರೆಝಿಲ್ ರಾಜಧಾನಿ ಬ್ರೆಸೀಲಿಯ ಸಮೀಪದ ಗೊಯಾನಿಯ ನಗರದಲ್ಲಿರುವ ಜೈಲೊಂದರಲ್ಲಿ ಸೋಮವಾರ ನಡೆದ ಗಲಭೆಯಲ್ಲಿ ಒಂಬತ್ತು ಕೈದಿಗಳು ಮೃತಪಟ್ಟಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ ಹಾಗೂ ಡಝನ್‌ಗಟ್ಟಳೆ ಮಂದಿ ತಪ್ಪಿಸಿಕೊಂಡಿದ್ದಾರೆ.

106 ಕೈದಿಗಳು ತಪ್ಪಿಸಿಕೊಂಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅವರ ಪೈಕಿ 27 ಮಂದಿಯನ್ನು ಪೊಲೀಸರು ಮರುಬಂಧಿಸಿದ್ದಾರೆ.

ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಮೆಝಾನ್‌ನ ಜೈಲೊಂದರಲ್ಲಿ ನಡೆದ ಗಲಭೆಯಲ್ಲಿ 56 ಮಂದಿ ಮೃತಪಟ್ಟಿರುವುದನ್ನು ಸ್ಮರಿಸಬಹುದಾಗಿದೆ. ಅವರ ಪೈಕಿ ಹಲವರ ತಲೆ ಕಡಿದು ಜೈಲಿನ ಗೋಡೆಗಳ ಮೇಲಿನಿಂದ ಹೊರಗೆ ಎಸೆಯಲಾಗಿತ್ತು.

ಅಪರಾಧಿಗಳ ತಂಡಗಳ ನಡುವಿನ ವೈಮನಸ್ಸು ಈ ರೀತಿಯ ಹಿಂಸಾಚಾರಗಳಿಗೆ ಕಾರಣ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News