ಉತ್ತರದ ಜೊತೆಗೆ ಮಾತುಕತೆಗೆ ಸಿದ್ಧ: ದಕ್ಷಿಣ ಕೊರಿಯ ಪ್ರಸ್ತಾಪ

Update: 2018-01-02 17:26 GMT

ಸಿಯೋಲ್ (ದಕ್ಷಿಣ ಕೊರಿಯ), ಜ. 2: ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆಗಾಗಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್ ಕರೆ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯ, ಜನವರಿ 9ರಂದು ಉತ್ತರದೊಂದಿಗೆ ಉನ್ನತ ಮಟ್ಟದ ಮಾತುಕತೆಗಳನ್ನು ನಡೆಸುವ ಪ್ರಸ್ತಾಪವನ್ನು ಮುಂದಿಟ್ಟಿದೆ ಹಾಗೂ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯ ಭಾಗವಹಿಸಬಹುದಾಗಿದೆ ಎಂದಿದೆ.

ಹೊಸ ವರ್ಷದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ ಕಿಮ್, ತನ್ನ ದೇಶ ಶಸ್ತ್ರಾಸ್ತ್ರ ತಡೆಯನ್ನು ನಿರ್ಮಿಸಿದೆ ಎಂದು ಹೇಳಿಕೊಂಡರು ಹಾಗೂ ಪರಮಾಣು ಗುಂಡಿ ತನ್ನ ಕೈಯಲ್ಲೇ ಇದೆ ಎಂದರು.

ಅದೇ ವೇಳೆ, ಮಾತುಕತೆಯಲ್ಲಿ ಭಾಗವಹಿಸುವ ಹಾಗೂ ದಕ್ಷಿಣ ಕೊರಿಯದಲ್ಲಿ ನಡೆಯುವ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಇಚ್ಛೆಯನ್ನೂ ವ್ಯಕ್ತಪಡಿಸಿದರು.

ಉತ್ತರ ಕೊರಿಯದೊಂದಿಗೆ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ ಮತ್ತು ಯಾವುದೇ ರೂಪದಲ್ಲಿ ಮಾತುಕತೆ ನಡೆಸಲು ಸಿಯೋಲ್ ಸಿದ್ಧ ಎಂದು ದಕ್ಷಿಣ ಕೊರಿಯದ ಏಕೀಕರಣ ಸಚಿವ ಚೊ ಮಯಂಗ್-ಗಯಾನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News