ಭಾರತದಲ್ಲಿ 6 ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದವನ ವಿಚಾರಣೆ ಜರ್ಮನಿಯಲ್ಲಿ!
Update: 2018-01-04 22:39 IST
ಬರ್ಲಿನ್, ಜ. 4: ಭಾರತದಲ್ಲಿ ಆರು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ವ್ಯಕ್ತಿಯೋರ್ವನ ವಿಚಾರಣೆ ಜರ್ಮನಿ ರಾಜಧಾನಿ ಬರ್ಲಿನ್‌ನ ನ್ಯಾಯಾಲಯವೊಂದರಲ್ಲಿ ನಡೆಯುತ್ತಿದೆ.
59 ವರ್ಷದ ಕಾರ್ಲ್ ಹೈಂಝ್ ಎನ್ ಎಂಬ ಆರೋಪಿಯ ದಾಳಿಗೆ ತುತ್ತಾದ ಅತಿ ಕಿರಿಯ ಮಗು 5 ವರ್ಷದ್ದಾಗಿತ್ತು.
2015-2016ರ ಅವಧಿಯಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ 5ರಿಂದ 11 ವರ್ಷ ವಯಸ್ಸಿನ ಮಕ್ಕಳ ಮೇಲೆ ಅತ್ಯಾಚಾರಗಳನ್ನು ನಡೆಸಿದ್ದನು ಎಂದು ಆರೋಪಿಸಲಾಗಿದೆ ಎಂದು ಡಿಪಿಎ ಸುದ್ದಿ ಸಂಸ್ಥೆ ಹೇಳಿದೆ.
ಮಕ್ಕಳ ಮೇಲೆ ಲೈಂಗಿಕ ದಾಳಿ ನಡೆಸಿದ ಆರೋಪಗಳಲ್ಲಿ ಆತ ತಪ್ಪಿತಸ್ಥ ಎಂಬುದಾಗಿ 1996ರಲ್ಲಿ ಥಾಯ್ಲೆಂಡ್‌ನ ನ್ಯಾಯಾಲಯವೊಂದು ತೀರ್ಪು ನೀಡಿತ್ತು.
ಆತ ಭಾರತದಲ್ಲಿ ಕೆಲಸ ಮಾಡುತ್ತಿದ್ದಾಗ ಹುಡುಗರು ಮತ್ತು ಹದಿಹರೆಯದವರು ಆತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮೇಲೆ ಅತ್ಯಾಚಾರ ನಡೆಸಿ ಅದನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಎಂಬುದಾಗಿ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.