ಅಮೆರಿಕ: ಭಾರತೀಯ ವೈದ್ಯನಿಗೆ 10 ತಿಂಗಳು ಜೈಲು
Update: 2018-01-04 22:58 IST
ವಾಶಿಂಗ್ಟನ್, ಜ. 4: ಇಬ್ಬರು ಹದಿಹರಯದ ಮಹಿಳಾ ರೋಗಿಗಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಹೊತ್ತಿರುವ ಭಾರತೀಯ ವೈದ್ಯನೊಬ್ಬನಿಗೆ ಅಮೆರಿಕದಲ್ಲಿ 10 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ತನ್ನ ವಿರುದ್ಧ ಹೊರಿಸಲಾಗಿರುವ ನಾಲ್ಕು ಆರೋಪಗಳನ್ನು 40 ವರ್ಷದ ಅರುಣ್ ಅಗರ್‌ವಾಲ್ ಒಪ್ಪಿಕೊಂಡ ಬಳಿಕ, ಗುರುವಾರ ಆತನಿಗೆ ನ್ಯಾಯಾಲಯವೊಂದು ಜೈಲು ವಾಸದ ಶಿಕ್ಷೆ ವಿಧಿಸಿತು.
ಓಹಿಯೊದ ಡೇಟನ್ ಮಕ್ಕಳ ಆಸ್ಪತ್ರೆಯಲ್ಲಿ, 2013 ಮತ್ತು 2015ರ ನಡುವಿನ ಅವಧಿಯಲ್ಲಿ ವೈದ್ಯಕೀಯ ತಪಾಸಣೆಯ ವೇಳೆ ಆತ ಇಬ್ಬರು ಹದಿಹರೆಯದ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಎಂದು ಸರಕಾರಿ ವಕೀಲರು ಹೇಳಿದ್ದಾರೆ.
ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಅಗರ್‌ವಾಲ್ ಭಾರತಕ್ಕೆ ಗಡಿಪಾರಾಗುವ ಸಾಧ್ಯತೆಯಿದೆ.