2018ರಲ್ಲಿ ತೈಲ ಜಗತ್ತಿನ ನೂತನ ದೊರೆಯಾಗಲಿದೆಯೇ ಈ ರಾಷ್ಟ್ರ?

Update: 2018-01-04 17:33 GMT

ವಾಶಿಂಗ್ಟನ್, ಜ. 4: ಅಮೆರಿಕವು 2018ರಲ್ಲಿ ತೈಲ ಜಗತ್ತಿನ ನೂತನ ದೊರೆಯಾಗುವತ್ತ ದಾಪುಗಾಲಿಟ್ಟಿದೆ ಎಂದು ವರದಿಯೊಂದು ಹೇಳಿದೆ. ಈ ವರ್ಷ ಅದು ತನ್ನ ಕಚ್ಚಾ ತೈಲ ಉತ್ಪಾದನೆಯನ್ನು 10 ಶೇಕಡದಷ್ಟು ಹೆಚ್ಚಿಸಿ ದಿನಕ್ಕೆ ಸುಮಾರು 1.1 ಕೋಟಿ ಬ್ಯಾರಲ್ ತೈಲ ಉತ್ಪಾದನೆ ಮಾಡುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.

ಅಮೆರಿಕವು ತೈಲ ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದು, ಜಗತ್ತಿನ ಬೃಹತ್ ತೈಲ ಉತ್ಪಾದಕ ಸ್ಥಾನದಿಂದ ರಶ್ಯ ಮತ್ತು ಸೌದಿ ಅರೇಬಿಯವನ್ನು ಕೆಳಗಿಳಿಸುವತ್ತ ಸಾಗುತ್ತಿದೆ ಎಂದು ಸಂಶೋಧನಾ ಸಂಸ್ಥೆ ‘ರೈಸ್ಟಡ್ ಎನರ್ಜಿ’ ಬುಧವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News